ಸಹಕಾರ ರತ್ನ ಎನ್. ಆರ್. ಜಗದೀಶ್ ಅಸ್ತಂಗತ

ತುಮಕೂರು

ಜಿಲ್ಲೆಯ ಹಿರಿಯ ಸಹಕಾರಿ ಧುರೀಣ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್. ಆರ್. ಜಗದೀಶ್ ರಾಧ್ಯ(90) ಅವರು ನಿಧನರಾಗಿದ್ದಾರೆ. 

ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಮಧ್ಯಾಹ್ನ 2ರ ಸಮಯದಲ್ಲಿ ಹೃದಯಘಾತದಿಂದ ನಿಧನರಾಗಿದ್ದು, ಸಂಜೆ ಪಾರ್ಥಿವ ಶರೀರ ವನ್ನು ತುಮಕೂರಿನ ಅಗ್ನಿಶಾಮಕ ದಳದ ಕಚೇರಿ ಪಕ್ಕದಲ್ಲಿ ರುವ ಅವರ ನಿವಾಸಕ್ಕೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಾಳೆ ಸಂಜೆ 4ಕ್ಕೆ ನಗರದ ಹಿಂದೂ ವೀರಶೈವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. 

ಮೃತರು ಪತ್ನಿ ಪಾರ್ವತಿ, ಮಗ ಎನ್. ಜೆ. ರುದ್ರಪ್ರಕಾಶ್ ಸೇರಿ ಮೂವರು ಮಕ್ಕಳು, ಮೊಮ್ಮಕ್ಕಳೂ, ಸಹೋದರರು, ಸಹೋದರಿ ಸೇರಿ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. 

*ಯಶಸ್ವಿ ಉದ್ಯಮಿ ಸಮಾಜ ಸೇವಕ*

ತಂದೆ ಎನ್. ರುದ್ರ ಯ್ಯ ಅವರಂತೆಯೇ ವ್ಯಾಪಾರೋದ್ಯಮ, ಧಾರ್ಮಿಕ ಸೇವಾ ಪಥದಲ್ಲಿ ಸಾಗಿ ಬಂದ ಎನ್. ಆರ್. ಜಗದೀಶ್ ಅವರು ಯಶಸ್ವಿ ಉದ್ಯಮಿಯಾಗಿ ಸಹಕಾರಿ ರಂಗದಲ್ಲಿ ದೊಡ್ಡ ಸಾಧನೆ ಮಾಡಿದವರು. 

ಸಿದ್ಧ ಗಂಗಾ ಆಯಿಲ್ ಎಕ್ಸ್ ಟ್ರ್ಯಾಕ್ಷನ್ , ರೈಸ್ ಮಿಲ್ ಮಾಲೀಕರಾಗಿ ಎನ್. ಆರ್. ಬ್ರ್ಯಾಂಡ್ ಉತ್ಪನ್ನವನ್ನು ದೇಶ ವಿದೇಶದ ವರೆಗೆ ಪ್ರಖ್ಯಾತಿ ಗೊಳಿಸಿದ್ದ ಶ್ರೀ ಯುತರು ವಿವಿಧ ಸಂಘ ಸಂಸ್ಥೆ, ಬ್ಯಾಂಕ್ ನಲ್ಲಿ ಜೀವಿತದ ಕಡೆಯವರೆಗೂ ತೊಡಗಿಸಿಕೊಂಡು ಸಮಾಜಸೇವೆ ಮಾಡಿದವರು. 

ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಪರಮಭಕ್ತರಾಗಿ ಸಿದ್ಧಗಂಗಾ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ರಾಗಿ ವಿದ್ಯಾಸಂಸ್ಥೆ ಪ್ರವರ್ಧಮಾನಕ್ಕೆ ಬರುವಲ್ಲಿ ಹೆಚ್ಚಿನ ದಾಗಿ ಸಹಕರಿಸಿದ್ದರು.ಯಾವುದೇ ಸಂಘ ಸಂಸ್ಥೆ ನೇತೃತ್ವ ವಹಿಸಿದರೂ ಅದನ್ನು ಯಶಸ್ಸಿನ ದಡ ಸೇರಿಸುವವರೆಗೂ ಬಿಡದ ಛಾತಿ ಹೊಂದಿದ್ದವರು. ಧಾನ್ಯವರ್ತಕರ ಸಂಘದ ಮುಖೇನ ಅಸ್ತಿತ್ವಕ್ಕೆ ತರಲಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಬ್ಯಾಂಕ್ ನ ಸಂಸ್ಥಾಪಕರಾಗಿ ಮೀರಿ ಅಧ್ಯಕ್ಷ ರಾಗಿ ಬ್ಯಾಂಕ್ ಪ್ರವರ್ಧಮಾನಕ್ಕೆ ಬರುವಲ್ಲಿ ಪ್ರಮುಖ ಕಾರಣೀಕರ್ತರು. ಸಹಕಾರ ಕ್ಷೇತ್ರ ದ ಇವರ ಸಾಧನೆ ಗುರುತಿಸಿ 2013-14ನೇಸಾಲಿನಲ್ಲಿ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ಟಿಜಿಎಂಸಿ ಬ್ಯಾಂಕ್ ಅಷ್ಟೇ ಅಲ್ಲದೆ, ಧಾನ್ಯ ವರ್ತಕರ ಸಂಘ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ತುಮಕೂರು ನಗರ ವೀರಶೈವ ಸಮಾಜ, ರೋಟರಿ ಕ್ಲಬ್, ಸರ್ವೋದಯ ವಿದ್ಯಾಸಂಸ್ಥೆ, ಸಿದ್ದರಾಮಣ್ಣ ಹಾಸ್ಟೆಲ್ ಸೇರಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಎನ್. ಆರ್ ಸಮೂಹ ಸಂಸ್ಥೆಗಳ ಮೂಲಕ ಸೇವಾ ಕಾರ್ಯಗಳನ್ನು ಮಾಡಿದ್ದು ಧಾರ್ಮಿಕ ವಾಗಿಯೂ ಟಿಜಿಎಂಸಿ ಬ್ಯಾಂಕ್ ಆವರಣದ ಮಹಾಲಕ್ಷ್ಮಿ ದೇವಸ್ಥಾನ, ಚಿಕ್ಕ ಪೇಟೆ ಹಿರೇಮಠ ಪ್ರಗತಿ ಗೆ ಕೊಡುಗೆ ನೀಡಿದ್ದರು. 

ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು ಆಗಿದ್ದ ಜಗದೀಶ್ ಅವರಿಗೆ ತುಮಕೂರು ವಿಧಾನಸಭೆ ಹಾಗೂ ಲೋಕಸಭೆ ಗೆ ಸ್ಪರ್ಧಿ ಸಲು ಅವಕಾಶ ವೂ ಬಂದಿದ್ದನು ಇಲ್ಲಿ ಸ್ಮರಿಸಬಹುದು. 

ನೇರ ನಡೆ ನುಡಿಯ ಎನ್. ಆರ್. ಜಗದೀಶ್ ಅವರ ನಿಧನಕ್ಕೆ ಸಿದ್ಧ ಗಂಗೆಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಪಂಚಪೀಠದ ಜಗದ್ಗುರುಗಳು, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್. ರಾಜಣ್ಣ, ಟಿಎಂಸಿ ಸಿ ಅಧ್ಯಕ್ಷ ಎನ್. ಎಸ್. ಜಯಕುಮಾರ್, ಸಂಸದ ಜಿ. ಎಸ್

ಬಸವರಾಜ್, ಶಾಸಕ ಜಿ. ಬಿ. ಜ್ಯೋತಿ ಗಣೇಶ್, ಮಾಜಿ ಶಾಸಕ ಎಸ್. ಷಫಿ ಅಹಮದ್, ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಿ. ವೆಂಕಟೇಗೌಡ, ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣ, ಸಹ ಸಂಪಾದಕ ಟಿ. ಎನ್. ಮಧುಕರ್, ವೀರಶೈವ ಸಮಾಜದ ಅಧ್ಯಕ್ಷ ಟಿ. ಬಿ. ಶೇಖರ್, ಟಿಜಿಎಂಸಿ ಬ್ಯಾಂಕ್ ನ ಉಪಾಧ್ಯಕ್ಷ ದಿವ್ಯಾನಂದಮೂರ್ತಿ ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ವರ್ಗದವರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap