ನಡುವನಹಳ್ಳಿಗೆ ಬಸ್ ಸಂಪರ್ಕ ಕಲ್ಪಿಸಿದ ಕೆ ಎಸ್ ಆರ್ ಟಿ ಸಿ

ಹುಳಿಯಾರು:

 

    ಸಾರಿಗೆ ಸೌಲಭ್ಯವಿಲ್ಲದೆ ಪರಿತಿಸುತ್ತಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ನಡುವನಹಳ್ಳಿ ಗ್ರಾಮಕ್ಕೆ ಅಂತೂ ಸರ್ಕಾರಿ ಸಾರಿಗೆ ಬಸ್ ಸೇವೆ ಆರಂಭವಾಗಿದೆ. ಚುನಾವಣೆಯಲ್ಲಿ ಚುನಾವಣಾ ಸಿಬ್ಬಂಧಿ ಹೊತ್ತು ತರುತ್ತಿದ್ದ ಕೆಂಪು ಬಸ್ ನೋಡಿದ್ದ ಇಲ್ಲಿನ ಜನ ಏಕಾಏಕಿ ಊರಿಗೆ ಬಸ್ ಬಂದಾಗ ಹಿರಿಹಿರಿ ಹಿಗ್ಗಿದರು. ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.

    ನಡುವನಹಳ್ಳಿ ಗ್ರಾಮ ತುಮಕೂರು ಜಿಲ್ಲೆಯ ಗಡಿ ಗ್ರಾಮವಾಗಿದ್ದು ಇಲ್ಲಿಗೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದ್ದರೂ ಸರ್ಕಾರಿ ಬಸ್ ಸಂಚಾರ ಇಲ್ಲದಾಗಿತ್ತು. ಪರಿಣಾಮ ಇಲ್ಲಿನ ಜನ ಬೈಕ್, ಆಟೋ ಮೂಲಕ ಇಲ್ಲವೆ ನಡೆದುಕೊಂಡೆ ಹೋಗಬೇಕಿತ್ತು. ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಎರಡ್ಮೂರು ಕಿ.ಮೀ.ವರಗೆ ನಡೆದುಕೊಂಡೆ ಹೋಗುವುದು ಅನಿವಾರ್ಯ ಕರ್ಮವಾಗಿತ್ತು.

     ಈ ಬಗ್ಗೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಸಚಿವರು ಅರಸೀಕೆರೆ ಡಿಪೋದಿಂದ ನಡುವನಹಳ್ಳಿ ಮಾರ್ಗವಾಗಿ ನಿತ್ಯ 2 ಬಾರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

    ಈ ಬಗ್ಗೆ ಇಲ್ಲಿನ ಎನ್.ಕೆ.ಬಸವರಾಜು ಅವರು ಮಾತನಾಡಿ ದಶಕಗಳಿಂದ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರು ವಾರದ ಸಂತೆ, ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಪಂಚನಹಳ್ಳಿ, ಹೋಗಲು ಕಾಲು ದಾರಿಯಲ್ಲಿ ನಡೆದುಕೊಂಡು ಕಾರೆಕಟ್ಟೆಗೆ ಹೋಗಿ ಹುಳಿಯಾರು, ಶ್ರೀರಾಂಪುರಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು ಎಂದು ಸಮಸ್ಯೆ ವಿವರಿಸಿದರು.

    ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಕೂಲಿ ಕೆಲಸಗಳಿಗೆ ಹೋಗುವವರಿಗೆ ಸಹಾಯವಾಗುವಂತೆ ಸಾರಿಗೆ ಸಂಸ್ಥೆ ಬಸ್ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ, ಗ್ರಾಮಸ್ಥರ ಪರವಾಗಿ ಸಚಿವರನ್ನು ಅಭಿನಂಧಿಸುತ್ತೇವೆ ಎಂದು ತಿಳಿಸಿದರು.

   ಬಸ್ ಬೆಳಗ್ಗೆ 10.40 ಕ್ಕೆ ಪಂಚನಹಳ್ಳಿಯಿಂದ ಬೊಮ್ಮೇನಹಳ್ಳಿ ಮಾರ್ಗವಾಗಿ 11.10 ಕ್ಕೆ ನಡುವನಹಳ್ಳಿಗೆ ತಲುಪಿ ಅಲ್ಲಿಂದ 1130 ಕ್ಕೆ ಶ್ರೀರಾಂಪುಕ್ಕೆ ತಲುಪುತ್ತದೆ. ಪುನಃ ಶ್ರೀರಾಂಪುರದಿಂದ 11.50 ಕ್ಕೆ ಹೊರಟು 12.10 ಕ್ಕೆ ನಡುವನಹಳ್ಳಿ ತಲುಪಿ ಪಂಚನಹಳ್ಳಿಗೆ ತಲುಪಲಿದೆ ಎಂಬ ಮಾಹಿತಿ ನೀಡಿದರು.ಗ್ರಾಮಸ್ಥರಾದ ಶಿವಾನಂದ್, ನಾಗರಾಜು, ಷಡಾಕ್ಷರಿ, ಸಿದ್ದೇಶ್, ಶಂಕರಯ್ಯ, ಗುಡಿಗೌಡರಾದ ದೇವರಾಜಪ್ಪ, ನಾಗರಾಜಯ್ಯಮ ನಟರಾಜು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link