ಬೆಂಗಳೂರು
ಸ್ಪಾ ಹೆಸರಿನಲ್ಲಿ ಮಸಾಜ್ ಪಾರ್ಲರ್ ತೆರೆದು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಗಾಲ್ಯಾಂಡ್ ಮೂಲದ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈಜಿಪುರದ ಕ್ಯಾಟಿ ರೂಡಿ ಅಲಿಯಾಸ್ ಕ್ಯಾಟಿ (29) ಬಂಧಿತ ಆರೋಪಿಯಾಗಿದ್ದಾಳೆ. ಆರೋಪಿಯು ನಡೆಸುತ್ತಿದ್ದ ದಂಧೆಯಿಂದ ಮೂವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಬಂಧಿತ ಆರೋಪಿಯು ಜಯನಗರದ 9ನೇ ಬ್ಲಾಕ್‍ನ ಮಾರೇನಹಳ್ಳಿಯಲ್ಲಿ ವಂಡರ್ ಸ್ಪಾ ಎನ್ನುವ ಪಾರ್ಲರ್ ಆರಂಭಿಸಿ, ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದಳು.ಆರೋಪಿಯಿಂದ ಮೂರು ಸಾವಿರ ರೂ. ನಗದು ವಶಪಡಿಸಿಕೊಂಡು, ತನಿಖೆ ಕೈಗೊಂಡಾಗ ಹಲವು ದಿನಗಳಿಂದ ದಂಧೆ ನಡೆಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆರೋಪಿಯ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








