ನಗರದಲ್ಲಿ ಶ್ರದ್ಧಾಭಕ್ತಿಯಿಂದ ರಂಜಾನ್ ಆಚರಣೆ

ಚಿತ್ರದುರ್ಗ:

   ಪವಿತ್ರ ರಂಜಾನ್ ಮಾಸದ ಮೂವತ್ತು ದಿನಗಳ ಉಪವಾಸ ಆಚರಿಸಿದ ಸಮಸ್ತ ಮುಸ್ಲಿಂ ಬಾಂಧವರು ಚೇಳುಗುಡ್ಡ ಕೊಹಿನೂರ್ ಈದ್ಗಾ ಮೈದಾನದಲ್ಲಿ ಬುಧವಾರ ರಂಜಾನ್ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಶ್ವೇತ ವಸ್ತ್ರಧಾರಿಗಳಾಗಿದ್ದ ನೂರಾರು ಮುಸ್ಲಿಂ ಬಾಂಧವರು ತಲೆಗೆ ಬಿಳಿ ಟೋಪಿಯನ್ನು ಧರಿಸಿ ಬೆಳಿಗ್ಗೆ 11-15 ಕ್ಕೆ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿದರು. ಕೆಲವರು ಮನೆಯಿಂದ ಚಾಪೆ, ಜಮಖಾನಗಳನ್ನು ತಂದು ನೆಲದ ಮೇಲೆ ಹಾಸಿಕೊಂಡು ಪ್ರಾರ್ಥನೆಗೆ ಕುಳಿತರು. ಪುಟ್ಟ ಪುಟ್ಟ ಮಕ್ಕಳು ಕೂಡ ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

      ಶ್ರೀಮಂತರು ಬಡವರಿಗೆ ದಾನ ಮಾಡಬೇಕು ಎನ್ನುವುದು ರಂಜಾನ್ ಹಬ್ಬದ ಮಹತ್ವವಾಗಿರುವುದರಿಂದ ಕೊಹಿನೂರ್ ಈದ್ಗಾ ಮೈದಾನದ ಬಳಿ ಜಮಾಯಿಸಿದ್ದ ನೂರಾರು ನಿರ್ಗತಿಕರಿಗೆ ಪ್ರಾರ್ಥನೆಗೆ ಆಗಮಿಸುತ್ತಿದ್ದ ಮುಸಲ್ಮಾನರು ಕೈಲಾದಷ್ಟು ಹಣವನ್ನು ನೀಡುತ್ತಿದ್ದರು.

      ಪ್ರಾರ್ಥನೆಯ ನಂತರ ಪರಸ್ಪರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.
ಚಿತ್ರದುರ್ಗ ಲೋಕಸಭಾ ಮಾಜಿ ಸದಸ್ಯ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಬಿ.ಕಾಂತರಾಜ್, ಮಂಜುನಾಥ್‍ಗೊಪ್ಪೆ, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹೆಚ್.ಶಬ್ಬೀರ್‍ಭಾಷ, ಬಾಬ್‍ಜಾನ್, ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಹನೀಫ್, ಗುಡ್‍ಲಕ್ ಇಮ್ತಿಯಾಜ್, ಮಹಮದ್ ಪಟೇಲ್ ನೂರುಲ್ಲಾರವರ ಪುತ್ರ ಮುತುವಲ್ಲಿ ದಾದಾಪೀರ್ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯಲ್ಲಿ ತೊಡಗಿ ಶಾಂತಿಯುತವಾಗಿ ರಂಜಾನ್ ಹಬ್ಬ ಆಚರಿಸಿದರು.

       ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಅಲ್ಲಲ್ಲಿ ಪೊಲೀಸ್ ಬ್ಯಾರಿಕೇಡ್‍ಗಳನ್ನು ಅಡ್ಡ ಇಡಲಾಗಿತ್ತು. ಎಲ್ಲಾ ಕಡೆ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಪ್ರಾರ್ಥನೆ ಮಾಡುವ ಸ್ಥಳಗಳಲ್ಲಿ ನಗರಸಭೆಯಿಂದ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link