ತುಮಕೂರು:

ಭಾರತೀಯ ಸೇನೆ ಭಯೋತ್ಪಾದಕರಿಗೆ ತನ್ನ ಸಾಮಥ್ರ್ಯವನ್ನು ತೋರಿಸಿದೆ ಬಿಜೆಪಿ ಸಂಭ್ರಮಾಚರಣೆ ಭಾರತೀಯ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವೈಮಾನಿಕ ದಾಳಿಮಾಡಿ ಉಗ್ರಗಾಮಿಗಳ ಶಿಬಿರ ಗಳನ್ನು ಧ್ವಂಸ ಮಾಡಿ ಭಯೋತ್ಪಾದರಿಕೆ ತಕ್ಕ ಪಾಠವನ್ನು ಕಲಿಸಿದೆ. ಭಾರತೀಯ ಸೇನೆ ಸಾಮಥ್ರ್ಯದ ಬಗ್ಗೆ ಮತ್ತೋಮ್ಮೆ ಭಾರತೀಯರು ಹೆಮ್ಮೆ ಪಡುವಂತಾಗಿದೆ ಎಂದು ತುಮಕೂರು ನಗರ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಎನ್. ರಮೇಶ್ ರವರು ಬಣ್ಣಿಸಿದ್ದಾರೆ.
ಅವರು ತುಮಕೂರು ನಗರದ ಟೌನ್ ಹಾಲ್ ಸರ್ಕಲ್‍ನಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ವಿಜಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಭಾರತದ ಬಗ್ಗೆ ಉಗ್ರಗಾಮಿಗಳ ಚಿಂತನೆ ಬದಲಾಗುವ ರೀತಿಯಲ್ಲಿ ವೈಮಾನಿಕ ದಾಳಿ ನಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರವೀಶ್, ಮಹಾನಗರಪಾಲಿಕೆ ಸದಸ್ಯರಾದ ದೀಪಶ್ರೀ, ಗಿರಿಜಾ, ಮಂಜುಳಾ, ಮಲ್ಲಿಕಾರ್ಜುನಯ್ಯ, ಬಿ.ಜಿ. ಕೃಷ್ಣಪ್ಪ, ನವೀನ, ನಿರ್ಮಲ, ಅನುಸೂಯಮ್ಮ, ಪ್ರೇಮಾ ಹೆಗ್ಡೆ, ವೇದಮೂರ್ತಿ, ವಿನಯ್ ಜೈನ್, ಹನುಮಂತರಾಯಪ್ಪ, ಹನುಂಂತರಾಜು, ಶ್ರೀನಿವಾಸ್, ಬಾವಿಕಟ್ಟೆ ಗಣೇಶ್, ವಿನಯ್ ಹಿರೇಹಳ್ಳಿ, ಪ್ರತಾಪ್, ಪ್ರಸಾದ್, ಬಸವಕುಮಾರ್, ಸಿದ್ದರಾಜು ಗೌಡ, ಮಹೇಶ್ ಬಾಬು, ರಕ್ಷಿತ್, ರುದ್ರೇಶ್, ಪ್ರತಾಪ್, ಓಂಕಾರ್ ಮೂರ್ತಿ, ಮೂರ್ತಿ, ಮುಂತಾದ ಮುಖಂಡರು ಪಾಲ್ಗೊಂಡಿದ್ದರು.
