ನಗರದಲ್ಲಿ ಎನ್ ಶಿವಣ್ಣ ಪ್ರಚಾರ

ತುರುವೇಕೆರೆ:

        ತುಮಕೂರು ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರನ್ನು ಪ್ರದಾನ ಮಂತ್ರಿ ಮಾಡಿದ್ದು ಭಾರತ ಕಮ್ಯುನಿಷ್ಟ್ ಪಕ್ಷ. ಆದರೆ ಅದನ್ನು ಗೌಡರು ಮರೆತಿದ್ದಾರೆ ಎಂದು ಸಿಪಿಐ ಪಕ್ಷದ ಅಭ್ಯರ್ಥಿ ಎನ್.ಶಿವಣ್ಣ ತಿಳಿಸಿದರು.

           ಪಟ್ಟಣದ ಮಾಯಸಂದ್ರ ರಸ್ತಯಲ್ಲಿನ ಬಿಇಓ ಕಚೇರಿ ಮುಂಬಾಗದಲ್ಲಿ ತಾಲೂಕು ಸಿಪಿಐ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹಾಗೂ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರು ಇಬ್ಬರು ದುಡ್ಡಿನ ರಾಜಕಾರಣ ಮಾಡಿ ಚುನಾವಣೆ ಎದುರಿಸುತ್ತಿದ್ದಾರೆ.

             ನಮ್ಮ ಸಿಪಿಐ ಪಕ್ಷ ಬಡಪಕ್ಷವಾಗಿದ್ದು ರೈತರಿಂದ, ಕಾರ್ಮಿಕರಿಂದ ಎತ್ತಿದ ಚಂದಾ ಹಣದಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳು ಧೀನ ದಲಿತ ಬಡ, ಕೂಲಿ ಕಾರ್ಮಿಕರ ಪರವಾಗಿರದೆ ಕೇವಲ ಬಂಡವಾಳಶಾಹಿಗಳ ಪರವಾಗಿದ್ದಾರೆ. ಅದ್ದರಿಂದ ಈ ಬಾರಿ ಸಿಪಿಐ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸುವ ಮೂಲಕ ನಿಮ್ಮಗಳ ಹೆಚ್ಚಿನ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರೊಡಗೂಡಿ ಪ್ರಚಾರ ಮಾಡಿದರು.

       ಈ ಸಂದರ್ಬದಲ್ಲಿ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಎ.ಐ.ಎಸ್.ಎಪ್ ಕೆ. ಜ್ಯೋತಿ, ತಾಲೂಕು ಕಾರ್ಯದರ್ಶಿ ಶಿವಾನಂದ್, ಮುಖಂಡರಾದ ಎಂ.ಸಿ.ದೋಗ್ರೇ, ಅಮ್ಮಸಂದ್ರ ರಾಜು ಸೇರಿದಂತೆ ಇತರೆ ಕಾರ್ಯಕರ್ತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap