ನಾಗರಾಜು ಕುಟುಂಬಕ್ಕೆ ಧೈರ್ಯ ತುಂಬಿದ ತಾಲ್ಲೂಕಿನ ವಿವಿಧ ಸಂಘಟನೆಗಳು

ಕೊರಟಗೆರೆ:-

      ತಾಲೂಕಿನ ಜಟ್ಟಿಅಗ್ರಹಾರ ಗ್ರಾಮದ ನಾಗರಾಜು ಕುಟುಂಬದವರು ಜಿಲ್ಲಾಧಿಕಾರಿ ಬಳಿ ದಯಾಮರಣಕ್ಕೆ ಅರ್ಜಿಸಲ್ಲಿದ ವಿಷಯ ತಿಳಿದ ಮಧುಗಿರಿ ತಾಲೂಕು ಅದಿಜಾಂಭವ ಮಹಾಸಭಾ ಅಧ್ಯಕ್ಷ ಮಹರಾಜು ಹಾಗೂ ಹಿಂದೂ ಸಾರ್ಮಾಟ್ ಧರ್ಮಸೇನೆ ರಾಜ್ಯಾಧ್ಯಕ್ಷ ಮಧುಗಿರಿ ಮೋದಿ ಬೇಟಿಕೊಟ್ಟು ಕುಟುಂಬದ ಸದಸ್ಯ ಜತೆ ಮಾತುಕತೆ ನೆಡೆಸಿ ನಿಮ್ಮ ಜೊತೆ ನಾವೇಲ್ಲರೂ ನಿಮ್ಮ ಜೊತೆ ಇರುತ್ತೆವೆ ಎಂದು ಧೈರ್ಯ ತುಂಬಿದರು.

     ಹಿಂದೂ ಸಾರ್ಮಾಟ್ ಧರ್ಮಸೇನೆ ರಾಜ್ಯಾಧ್ಯಕ್ಷ ಮಧುಗಿರಿ ಮೋದಿ ಮಾತನಾಡಿ ನಾಗರಾಜು ಕುಟುಂಬದವರು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾದ್ಯಮಗಳಲ್ಲಿ ನೋಡಿದೆ. ದಲಿತರಿಗೆ ನ್ಯಾಯ ಒದಗಿಸುವ ಸಲುವಾಗಿ ನಾನು ಕೂಡ ಅವರ ಪರವಾಗಿ ಕಾನೂನು ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದನೆ. ಬುಕ್ಕಪಟ್ಟಣದ ಸರ್ವೆ ನಂ207 ಹೊಸ ನಂಬರ್ ಹಳೆಯ ನಂಬರ್ 117 ಸರ್ವೆ ನಂಬರ್‍ನ ಜಮೀನಿನ ಜಾಗವನ್ನ ತೆರುವುಗೊಳಿಲಿಸಲಿದ್ದೆವೆ ಎಂದು ಏಕಾಏಕಿ ನೋಟಿಸ್ ಜಾರಿಮಾಡಲಾಗಿದೆ ಎಂದು ತಹಸೀಲ್ದಾರ್ ವಿರುದ್ದ ಕಿಡಿಕಾರಿದರು.

      ತಹಸೀಲ್ದಾರ್‍ರವರು ಜಮೀನು ತೆರವುಗೊಳಿಸಲು ಹೈಕೋಟ್ ಆದೇಶ ಮಾಡಿದೆ ಎಂದು ಹೇಳುತ್ತಿದ್ದಾರೆ. ನಾಗರಾಜು ಕುಟುಂಬಕ್ಕೆ ಜಮೀನು ತೆರುವು ಮಾಡುವದಕ್ಕೆ ಕಾಲಾವಕಾಶವನ್ನ ನೀಡದೇ ತಕ್ಷಣ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದು ಸರಿ ಅಲ್ಲ.ಇದೆ ತಹಸೀಲ್ದಾರ್‍ರವರಿಗೆ ನೇರವಾಗಿ ಪ್ರಶ್ನೆ ಮಾಡುತ್ತೆನೆ.

     ಕೊರಟಗೆರೆ ಪಟ್ಟಣದ ಪಕ್ಕದಲ್ಲಿ ಇರುವ ಸುರ್ವಮುಖಿ ನದಿಯಲ್ಲಿ ಕಲ್ಯಾಣಮಂಟಪ, ಲಾಡ್ಜ್, ಮನೆಗಳನ್ನ ನಿರ್ಮಾಣ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ ಮೊದಲು ಅವುಗಳನ್ನ ತರುವುಗೊಳಿಸಿ. ಸುಪ್ರೀಂ ಕೋಟ್ ಹೇಳುತ್ತದೆ ರಾಜಕಾಲುವೆಯ ಮೇಲೆ ಕಟ್ಟಿರುವ ಕಟ್ಟಡವನ್ನ ತೆರುವುಗೊಳಿಸುವ ಆದೇಶವು ಇದೆ ಅದನ್ನ ತಹಸೀಲ್ದಾರ್ ಪಾಲಿಸುತ್ತೀರಾ ಎಂದು ತಹಸೀಲ್ದಾರ್ ರವರಿಗೆ ಪ್ರಶ್ನೆ ಮಾಡಿದರು.

      ಸುಪ್ರೀಂ ಕೋಟ್‍ನಈ ಅದೇಶವನ್ನ ತಹಸೀಲ್ದಾರ್ ಪಾಲನೆ ಮಾಡುತ್ತೀದ್ದಿರಾ. ಮೊದಲು ಸಾರ್ವಜನಿಕರ ಅಸ್ತಿಪಾಸ್ತಿಯನ್ನ ಉಳಿಸಬೇಕಾದ ಕರ್ತವ್ಯವನ್ನ ಮೊದಲು ಮಾಡಿ. ನೀವು ಹಣ ಅಸೆಗೆ ಬಲಿಯಾಗದೆ ದಲಿತರಿಗೆ ನ್ಯಾಯವದಗಿಲು ಕೆಲಸ ಮಾಡಿ ಇಲ್ಲಾಂದ್ರೆ ನಿಮ್ಮ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಗುಡುಗಿದರು.

     ಮಧುಗಿರಿ ತಾಲೂಕು ಅದಿಜಾಂಭವ ಮಹಾಸಭಾ ಅಧ್ಯಕ್ಷ ಮಹರಾಜು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೆಲ ಸವರ್ಣಿಯರು ವರ್ಗದ ಜನರು ಜಿಲ್ಲಾಧ್ಯಾಂತ ದೌರ್ಜನ್ಯ ದಬ್ಬಾಳಿಕೆ ನೆಡೆಸುತ್ತಿರುವು ನೋಡಿದರೇ ಜಿಲ್ಲೆಯಲ್ಲಿ ದಲಿತರಿಗೆ ರಕ್ಷಣೆ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

      ನಾಗರಾಜು ಕುಟುಂಬ ಮನನೊಂದು ದಯಾಮರಣಕ್ಕೆ ಮೊರೆ ಹೋಗಿರುವುದು ತಿಳಿದರು ಕೊರಟಗೆರೆ ಶಾಸಕರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‍ರವರು ಒಬ್ಬ ದಲಿತನಿಗೆ ಅನ್ಯಾಯವಾಗುತ್ತಿರುವುದನ್ನ ಕಂಡರು ಕಾಣದಂತೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link