ಬೆಂಗಳೂರು
ವಾಕಿಟಾಕಿ ಹಿಡಿದು ಪೊಲೀಸರ ಸೋಗಿನಲ್ಲಿ ಒಂಟಿ ಮಹಿಳೆಯರ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಸೈಯ್ಯದ್ ಅಬೂಬ್ಕರ್ ಸಿದ್ದಿಕಿ ಸೇರಿ ನಾಲ್ವರನ್ನು ಮೂವರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಚಂದ್ರಲೇಔಟ್ ಪೊಲೀಸರು ಮೂರುವರೆ ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಂದ್ರಲೇಔಟ್ನ ಬಿಸಿಸಿ ಲೇಔಟ್ನ ಸೈಯ್ಯದ್ ಅಬೂಬ್ಕರ್ ಸಿದ್ದಿಕಿ (38), 58 ಕಡೆಗಳಲ್ಲಿ ಪೆÇಲೀಸರ ಸೋಗಿನಲ್ಲಿ ಮಹಿಳೆಯರ ಚಿನ್ನಾಭರಣಗಳನ್ನು ದೋಚಿದ್ದಲ್ಲದೆ, 2 ಕಾರುಗಳು, 2 ದ್ವಿಚಕ್ರವಾಹನಗಳನ್ನು ಕಳವು ಮಾಡಿದ್ದ. ಈತನಿಂದ ವಾಕಿಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸಿದ್ದಿಕಿ, ಹಿಂದೆ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಹೆಚ್ಎಎಲ್ ಪೊಲೀಸರಿಂದ ಬಂಧಿತನಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು, ಐಷಾರಾಮಿ ಜೀವನ ನಡೆಸಲು ಪೊಲೀಸರ ಸೋಗಿನಲ್ಲಿ ಕಳ್ಳತನಕ್ಕೆ ಇಳಿದಿದ್ದ ಕಳವು ಮಾಡಿದ್ದ ಸ್ಕೂಟರ್ನಲ್ಲಿ ಸಂಚರಿಸುತ್ತ ವಾಚ್ಮನ್ ಒಬ್ಬರ ವಾಕಿಟಾಕಿಯನ್ನು ದೋಚಿ ಅದನ್ನು ಹಿಡಿದುಕೊಂಡು ವಯಸ್ಸಾದ ಮಹಿಳೆಯರು ಒಂಟಿಯಾಗಿ ಓಡಾಡುವವರನ್ನು ಗುರುತಿಸಿ ಮುಂದಿನ ರಸ್ತೆಯಲ್ಲಿ ಗಲಾಟೆಯಾಗುತ್ತಿದೆ. ನಿಮ್ಮ ಕತ್ತಿನಲ್ಲಿರುವ ಚಿನ್ನದ ಆಭರಣಗಳನ್ನು ಬಿಚ್ಚಿಟ್ಟುಕೊಂಡು ಬ್ಯಾಗ್ನಲ್ಲಿ ಹಾಕಿಕೊಳ್ಳಿ ಎಂದು ಹೇಳಿ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಎಂದರು.
ಆರೋಪಿಯ ಬಂಧನದಿಂದ ಚಂದ್ರಲೇಔಟ್, ಸುಬ್ರಮಣ್ಯಪುರದ ತಲಾ 5, ಆರ್.ಆರ್. ನಗರ, ಅನ್ನಪೂರ್ಣೇಶ್ವರಿ ನಗರ, ಬ್ಯಾಡರಹಳ್ಳಿಯ ತಲಾ 4, ಬಸವೇಶ್ವರ ನಗರ, ವಿಜಯನಗರ, ತಲಘಟ್ಟಪುರ, ಮೈಕೋ ಲೇಔಟ್, ಎಚ್.ಎಸ್.ಆರ್. ಲೇಔಟ್, ಸಂಜಯ ನಗರದ ತಲಾ 2, ಬ್ಯಾಟರಾಯನಪುರ 1 ಸೇರಿ 57 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಐನಾತಿ ಚೆಲುವ
ಚಿನ್ನಾಭರಣಗಳಿದ್ದ ಬ್ಯಾಗನ್ನು ಕಾರಿನಲ್ಲಿಟ್ಟು ಮಾಲೀಕರು ಮನೆಯೊಳಗೆ ಹೋಗಿಬರುವಷ್ಟರಲ್ಲಿ 520 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಶ್ರೀರಂಗಪಟ್ಟಣದ ಗಣಂಗೂರಿನ ಚೆಲುವರಾಯಿ ಅಲಿಯಾಸ್ ಚೆಲುವನನ್ನು ಇದೇ ಪೆÇಲೀಸರು ಬಂಧಿಸಿ, 15 ಲಕ್ಷ, 60 ಸಾವಿರ ರೂ. ಮೌಲ್ಯದ 520 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಚಂದ್ರಲೇಔಟ್ನ ವಿಡಿಯೋ ಲೇಔಟ್ನಲ್ಲಿನ ನಾಲ್ಕನೇ ಕ್ರಾಸ್ನ ಉಮೇಶ್ ಅವರು, ಎಸ್.ಬಿ.ಐ. ಬ್ಯಾಂಕ್ನ ಲಾಕರ್ನಲ್ಲಿದ್ದ 600 ಗ್ರಾಂ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಬಂದು ಕಾರಿನ ಸೀಟ್ನ ಮೇಲೆ ಅವುಗಳನ್ನು ಇಟ್ಟು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಕಾರಿನ ಗಾಜು ಒಡೆದು ಚಿನ್ನಾಭರಣಗಳ ಬ್ಯಾಗನ್ನು ಕಳವು ಮಾಡಿದ್ದ.
ಕಳವು ಮಾಡಿದ್ದ ಆಭರಣಗಳನ್ನು ಶ್ರೀರಂಗಪಟ್ಟಣ, ಹಲಗೂರು, ಮೈಸೂರಿನಲ್ಲಿ ಮಾರಾಟ ಮಾಡಿ, ಚಂದ್ರ ಲೇಔಟ್ನಲ್ಲಿ 20 ಗ್ರಾಂ ಮಾರಾಟ ಮಾಡಲು ಹೋಗುವಾಗ ಕಾರ್ಯಾಚರಣೆ ನಡೆಸಿದ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಹಿಂದೆ ಕುಂಬಳಗೂಡು, ಮಡಿವಾಳ, ಮೈಸೂರು ಪೆÇಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ಐಷಾರಾಮಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದ ಎಂದು ಅವರು ತಿಳಿಸಿದ್ದಾರೆ.
ಜ್ಞಾನಭಾರತಿ ಪೆÇಲೀಸರು ಟ್ಯಾನರಿ ರಸ್ತೆಯ ಅಮ್ಜದ್ ಅಲಿಯಾಸ್ ಅಂಗತ್ ಸಿಂಗ್, ಶಾಂಪುರದ ಅಕ್ಮಲ್ ಬೇಗ್ (30) ನನ್ನು ಬಂಧಿಸಿ, 5 ಕನ್ನಗಳವು, 4 ಮನೆಗಳವು ಸೇರಿ, 9 ಪ್ರಕರಣಗಳನ್ನು ಪತ್ತೆಹಚ್ಚಿ 12 ಲಕ್ಷ ರೂ. ಮೌಲ್ಯದ 405 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








