ನಾಳೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ

ದಾವಣಗೆರೆ :

     ದಾವಣಗೆರೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯಾರಂಭಿಸಿ, ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಳೆ (ಜೂನ್ 2ರಂದು) ನಗರದಲ್ಲಿ ಕ್ಲಬ್‍ನ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

     ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಎಸ್.ನಾಗಪ್ರಕಾಶ, ಸುವರ್ಣ ಮಹೋತ್ಸವದ ಪ್ರಯುಕ್ತ ನಾಳೆ ಬೆಳಿಗ್ಗೆ 11 ಗಂಟೆಗೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಲಯನ್ಸ್ ಭವನದಲ್ಲಿ ಸುವರ್ಣ ಮಹೋತ್ಸವ ಸಭಾಂಗಣದ ಶಂಕುಸ್ಥಾಪನೆ ಹಾಗೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

     ದಾವಣಗೆರೆ ಲಯನ್ಸ್ ಟ್ರಸ್ಟ್‍ನ ಅಧ್ಯಕ್ಷ ಜಿ.ನಾಗನೂರ್ ಅಧ್ಯಕ್ಷತೆಯ ನಡೆಯುವ ಸಮಾರಂಭವನ್ನು ವಿ.ವಿ.ಕೃಷ್ಣರೆಡ್ಡಿ ಉದ್ಘಾಟಿಸುವರು. ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ, ತಲ್ಲೂರು ಶಿವರಾಮ ಶೆಟ್ಟಿ, ಎ.ಬಿ.ಪ್ರತಾಪ್ ಪಾಲ್ಗೊಳ್ಳುವರು ಎಂದು ಹೇಳಿದರು.

     ನಾಳೆ ಸಂಜೆ 6 ಗಂಟೆಗೆ ಕುಂದುವಾಡ ರಸ್ತೆಯಲ್ಲಿರುವ ಬಂಟರ ಸಮುದಾಯ ಭವನದಲ್ಲಿ ಜರುಗಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು . ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ, ಡಾ.ಜಿ.ಪಿ.ಕೃಷ್ಣೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

   ಕಾರ್ಯಕ್ರಮದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಲಯನ್ಸ್ ಕ್ಲಬ್‍ನ ಸದಸ್ಯರಾಗಿ ಮುಂದುವರೆದಿರುವ ಸದಸ್ಯರನ್ನು ಹಾಗೂ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಗುವುದು. ಹೇಮಾ ಶ್ರೀನಿವಾಸ್ ತಂಡದವರು ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಅವರು ತಿಳಿಸಿದರು.

     ಈ ವರೆಗೂ ಸುಮಾರು 600ರಿಂದ 700 ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ, ರೈತರಿಗೆ ತರಬೇತಿ ಶಿಬಿರ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜಿ.ನಾಗನೂರು, ಎಸ್.ಶಿವಮೂರ್ತಿ, ಎನ್.ವಿ.ಬಂಡಿವಾಡ್,ಟಿ.ಎಂ.ಪಂಚಾಕ್ಷರಯ್ಯ , ಎನ್.ಸಿ.ಬಸವರಾಜ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link