ನಮ್ಮ ದೇಶದ ಆಢಳಿತ ಚುಕ್ಕಾಣಿ ಗುಜರಾತಿಗಳ ಕಪಿಮುಷ್ಠಿಯಲ್ಲಿದೆ.

ಹರಪನಹಳ್ಳಿ:

        ಬಿಜೆಪಿ ಅಧಿಕಾರದಿಂದ ನಮ್ಮ ದೇಶದ ಆಡಳಿತ ಚುಕ್ಕಾಣಿ ಗುಜರಾತಿಗಳ ಕಪಿಮುಷ್ಠಿಯಲ್ಲಿ ನಲುಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವೈದ್ಯಕೀಯ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಮಹಾಂತೇಶ ಚರಂತಿಮಠ ಅಭಿಪ್ರಾಯಪಟ್ಟರು.

        ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಸಂಪತ್ತು ಕೇವಲ 15-20ಜನ ಬಂಡವಾಳಶಾಹಿಗರ ಕೈಯಲ್ಲಿದೆ. ಬಿಜೆಪಿ ಭಾವನಾತ್ಮಕವಾಗಿ ಉದ್ವೇಗಕ್ಕೊಳಪಡಿಸಿ ಗೆಲುವು ಸಾಧಿಸುವ ಹುನ್ನಾರ ನಡೆಸಿದೆ. ಆನಸಾಮಾನ್ಯರಿಗೆ ಅಧಿಕಾರ ದೊರೆತು ಆರ್ಥಿಕ ಹೊರೆ ನಿರಾಳವಾಗಬೇಕಾದರೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಬೇಕು ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸುತ್ತಿರುವ ರಾಹುಲ್‍ಗಾಂಧಿಯವರು ಪ್ರಧಾನಿಯಾಗಬೇಕಿದೆ ಎಂದರು.

       ಕಳೆದ 7 ದಶಕಗಳಿಗಿಂತ ಹೆಚ್ಚು ಅಧಿಕಾರ ನಡೆಸಿರುವ ಕಾಂಗ್ರೆಸ್ ಮಾಡಿದ ವೆಚ್ಚದಷ್ಟು ಐದು ವರ್ಷದಲ್ಲಿ ಬಿಜೆಪಿ ಮೋದಿ ಸರಕಾರ ಸಾಲ ಮಾಡಿದೆ. ದೇಶದಲ್ಲಿ ಬಡವರ, ಉಳ್ಳವರ ಅಂತರ ಹೆಚ್ಚಾಗುತ್ತಿದೆ. ರಾಜಕೀಯ ಪಕ್ಷಗಳು ಹೊಂದಿರುವ ಹಣ ಬ್ಯಾಂಕ್ ನಲ್ಲಿದ್ದರೆ, ಬಿಜೆಪಿ ಹಣ ಕಾರ್ಪೊರೆಟರ್ ಬಳಿ ಇದ್ದು, ವಿವಿಧ ಮಾರ್ಗದಲ್ಲಿ ಲೋಕಸಭಾ ಅಭ್ಯರ್ಥಿಗಳಿಗೆ ತಲಾ 20-30 ಕೋಟಿ ಹಣ ಹಂಚುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

       7ಲಕ್ಷ ಕೋಟಿ ರೂ.ಗಳನ್ನು ಬಂಡವಾಳಶಾಹಿಗಳ ಸಾಲ ಮನ್ನಾಕ್ಕೆ ಮುಂದಾಗಿರುವ ಪ್ರಧಾನಿಯವರು ಬಡ ರೈತರ ಸಾಲ ಮನ್ನಾಕ್ಕೆ ಮನಸ್ಸು ಮಾಡುತ್ತಿಲ್ಲ. ವಿವಿಧ ತೆರಿಗೆಗಳನ್ನು ಹಾಕುವ ಮೂಲಕ ರೈತ, ವ್ಯಾಪಾರಿಗಳಿಗೆ ಹೊರೆಯಾಗಿ ಬಂಡವಾಳ ಶಾಹಿಗಳಿಗೆ ಅನುಕೂಲಸಿಂಧುವಾಗಿದೆ ಎಂದರು.

       ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ಬಿಜೆಪಿ ಜನರನ್ನು ಭ್ರಮಾಲೋಕ ಸರಕಾರ ನಮಗೆ ಅವಶ್ಯವಿಲ್ಲ. ದೇಶ ಸುಂದರವಾಗಿರಲು ಗಡಿ ಭದ್ರತೆ ಮಾತ್ರ ಸಾಲದು, ಆಂತರೀಕ ಕಲಹಗಳು, ಜಾತಿ ಜಾತಿ ನಡುವಿನ ವೈಷಮ್ಯ, ಧರ್ಮಗಳ ನಡುವಿನ ಕಂದಕಗಳನ್ನು ಹತ್ತಿಕ್ಕುವ ಕೆಲಸವಾದರೆ ದೇಶ ಸುಂದರ, ಸುಬೀಕ್ಷವಾಗಲು ಸಾಧ್ಯ ಎಂದು ಹೇಳಿದರು.

        ಎರಡು ಕೋಟಿ ಜನಕ್ಕೆ ಉದ್ಯೋಗ ಕೊಡುವ ಭರವಸೆ ನೀಡಿದ್ದ ಮೋದಿ ಅವರು ಪಕೋಡಾ ಮಾರುವ ಉದ್ಯೋಗ ಮಾಡಿ ಎನ್ನುವುದಾದರೆ ವೈದ್ಯಕೀಯ, ಇಂಜಿನಿಯರ್‍ರಿಂಗದಂತಹ ಉನ್ನತ ಶಿಕ್ಷಣ ಅವಶ್ಯವೇ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಾದರೆ ಕಾಂಗ್ರೆಸ್‍ನ ಗೆಲುವು ಅಗತ್ಯವಾಗಿದೆ ಎಂದರು.

       ಸಾಮಾನ್ಯ ನಿಷ್ಟವಂತ, ಬಡತನದಿಂದ ಬಂದಿರುವ ಹೆಚ್.ಬಿ.ಮಂಜಪ್ಪ ಅವರನ್ನು ಗೆಲ್ಲಿಸುವ ಮೂಲಕ ಕಡ್ಡಾಯ ಮತದಾನ ಮಾಡಿ ರಾಹುಲ್ ಗಾಂಧಿ ಕೈ ಬಲಪಡಿಸೋಣ ಎಂದು ಹೇಳಿದರು.ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಶಿವಕುಮಾರನಾಯ್ಕ, ಎನ್‍ಎಸ್‍ಯುಐನ ಎಂ.ಡಿ.ಶ್ರೀಕಾಂತ್ , ಪ್ರಕಾಶಗೌಡ, ಶಿವಮೂರ್ತಿ, ಜಾಕೀರ್,ಸಂತೋಷ್, ಶಿವಮೂರ್ತಯ್ಯ, ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು .

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap