ದಾವಣಗೆರೆ:
ಇಲ್ಲಿನ ಪಿಬಿ ರಸ್ತೆಯ ಅರುಣ ವೃತ್ತದ ಬಳಿಯ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯ ಆವರಣದಲ್ಲಿ ಭಾನುವಾರ ಸಂಜೆ ಭಾನುವಾರ ಸಂಜೆ ‘ನಾನೂ ಚೌಕೀದಾರ್’ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ದೊಡ್ಡ ಪರದೆಯ ಮೇಲೆ ವೀಕ್ಷಿಸಿದರು.
ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಬಿಜೆಪಿ ನಾಯಕರಾದ ಆಯನೂರು ಮಂಜುನಾಥ, ಮಾಧು ಸ್ವಾಮಿ, ಶಾಸಕರಾದ ಎಸ್.ಎ. ರವೀಂದ್ರನಾಥ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರಪ್ಪ, ರೇಣುಕಾಚಾರ್ಯ, ಜಿಲ್ಲಾ ಬಿಜೆಪಿ ಅದ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಬಸವರಾಜ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ಮುಖಂಡರಾದ ವೈ.ಮಲ್ಲೇಶ್ ಸೇರಿದಂತೆ ಮತ್ತಿತರರು ಆಗಮಿಸಿದರು.
ಕಾರ್ಯಕ್ರಮದಲ್ಲಿ ಆಗಾಗ, ಕಾರ್ಯಕರ್ತರು ಚಪ್ಪಾಳೆ ಹೊಡೆದರೆ, ಮತ್ತೋಮ್ಮೆ ಮೋದಿ ಮೋದಿ ಎಂದು ಘೋಷಣೆ ಹಾಕುತ್ತಿದ್ದರು. ಚೌಕೀದಾರ್ ಸ್ಪಿರಿಟ್ ಇದ್ದಂತೆ, ಚೌಕೀದಾರ್ ಭಾವನೆಯೂ ಆಗಿದೆ. ಅದು ಮಹಾತ್ಮ ಗಾಂದಿ ಅವರ ಸಿದ್ಧಾಂತವೂ ಆಗಿದೆ. ದೇಶದ ನಗರ, ಗ್ರಾಮಗಳಲ್ಲಿ, ಗಲ್ಲಿ, ಗಲ್ಲಿಗಳಲ್ಲಿರುವ ವ್ಯಕ್ತಿ, ಮಹಿಳೆ, ವೈದ್ಯ,, ಶಿಕ್ಷಕ ಹೀಗೆ ಎಲ್ಲರೂ ಚೌಕೀದಾರ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದಾಗ ಕಾರ್ಯಕರ್ತರು ಚಪ್ಪಾಳೆ ಹೊಡೆದು ಸಂಭ್ರಮಿಸಿದರು.