ಬೆಂಗಳೂರು:
ಹಾಪ್‌ಕಾಮ್ಸ್ ಮಳಿಗೆಗಳಿಗೆ ಸಚಿವ ನಾರಾಯಣಗೌಡ ಇಂದು ಸಂಜೆ ದಿಢೀರ್ ಭೇಟಿ ನೀಡಿ, ತರಕಾರಿ, ಹಣ್ಣುಗಳ ಸರಬರಾಜು ಬಗ್ಗೆ ಪರಿಶೀಲನೆ ನಡೆಸಿದರು. ಗ್ರಾಹಕರ ಅಗತ್ಯತೆಗೆ ತಕ್ಕಂತೆ ಉತ್ಪನ್ನಗಳ ಪೂರೈಕೆ, ಇನ್ನೂ ಪರಿಣಾಮಕಾರಿಯಾಗಿ ಆಗಬೇಕು ಎಂದು ಸೂಚಿಸಿದ್ದಾರೆ.
ಇನ್ನೂ ಮಳಿಗೆಗಳ ಬಳಿ ಗುಂಪಾಗಿ ಜನ ಸೇರದಂತೆ ನೋಡಿಕೊಳ್ಳಬೇಕು. ಕೇವಲ ಮಳಿಗೆಗಳಲ್ಲಿ ಮಾರಾಟ ಮಾಡಿದರೆ ಸಾಲದು , ಹೆಚ್ಚಿನ ಸೌಲಭ್ಯ ಒದಗಿಸಬೇಕು. ಮೊಟ್ಟೆಗಳನ್ನು ಮಾರಾಟ ಮಾಡಬೇಕು. ವಾಹನಗಳಲ್ಲಿ ಬಡಾವಣೆಗಳಿಗೆ ತೆರಳಿ ಹಣ್ಣು, ತರಕಾರಿ, ಮೊಟ್ಟೆಗಳನ್ನು ಮಾರಾಟ ಮಾಡಬೇಕು ಎಂದು ಸೂಚಿಸಿದರು.
ನಗರದೆಲ್ಲೆಡೆ ವಿತರಣೆ ಕಾರ್ಯ ಆರಂಭಿಸಬೇಕು. ಜನರಿಗೆ ಯಾವುದೇ ರೀತಿಯಲ್ಲಿ ತರಕಾರಿ, ಹಣ್ಣುಗಳ ಕೊರತೆ ಉಂಟಾಗಬಾರದು. ಇದರಿಂದ ರೈತರಿಗೂ ಅನುಕೂಲ ಆಗಲಿದೆ. ಹಾಪ್‌ಕಾಮ್ಸ್ ಕೆಲಸ ಉತ್ತಮವಾಗಿದ್ದರೆ ಜನರಿಗೆ ಹಾಗೂ ರೈತರಿಗೆ ತುಂಬ ಅನುಕೂಲ ಆಗಲಿದೆ ಎಂದು ಸಚಿವರು ಹೇಳಿದರು.
ಹಾಪ್‌ಕಾಮ್ಸ್ ಸಿಬ್ಬಂದಿಗೆ ತರಾಟೆ
ಇನ್ನು, ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೆಲವೆಡೆ ನಿರ್ವಹಣೆ ಸರಿ ಇಲ್ಲದ್ದನ್ನು ಗಮನಿಸಿದ ಸಚಿವರು, ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸರಬರಾಜಿಗೆ ಅಗತ್ಯ ಕ್ರಮ ವಹಿಸಲಾಗಿದೆ, ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೂ, ಜನರಿಗೆ ಯಾಕೆ ಸಮಸ್ಯೆ ಆಗ್ತಿದೆ. ಹೀಗೆ ಆದರೆ ಸುಮ್ಮನೆ ಇರೋಕೆ ಆಗಲ್ಲ. ಸರಿಯಾಗಿ ಕೆಲಸ ಮಾಡಿ ಎಂದು ಸಚಿವರು ಎಚ್ಚರಿಕೆ ನೀಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ