ಸರ್ಕಾರದ ನರೇಗಾಯೋಜನೆ ರೈತರಿಗಿಂತ ನೌಕರರಿಗೆ ಹೆಚ್ಚಿನ ಉಪಯೋಗ ಆರೋಪ

       ಸೋಷಿಯಲ್ ಆಡಿಟ್ ವರದಿಮಾಡಿಸುತ್ತಿರುವುದು ಯಾವ ಪುರುಷತ್ವಕ್ಕಾಗಿ ತನಿಖಾ ವರಧಿ ಗಮನಿಸಿಯೂ ಗಮನಿಸದಂತಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳವರು ಮೌನವಾಗಿರುವ ಗುಟ್ಟೇನು?

      ಜುಲೈ 3 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸಹ ಗ್ರಾಮೀಣ ಪ್ರದೇಶದಲ್ಲಿನ ರೈತರುಗಳವರಿಗೆ ಅನುಕೂಲವಾಗಲಿ ಹಾಗೂ ರೈತರಿಗೆ ಸಂಭಂಧಿಸಿದ ತೆರೆದ ಬಾವಿ, ಕೊಳವೆ ಬಾವಿ ಸಣ್ಣಪುಟ್ಟ ಕೆರೆ ಕುಂಟೆಗಳಲ್ಲಿ, ಹಳ್ಳಗಳಲ್ಲಿ ನೀರು ನಿಂತುಕೊಂಡಲ್ಲಿ ದನಕರುಗಳಿಗೆ ಕುಡಿಯಲಿಕ್ಕೆ ನೀರು, ದನಕರುಗಳಿಗೆ ಮೇವಿನ ಅನುಕೂಲತೆಯುಂಟಾಗಲೆಂಬ ಸದುದ್ದೇಶದಿಂದ ರೈತರ ಹೊಲ ಗದ್ದೆಗಳಲ್ಲಿ ಮಟ್ಟಿತೆಗೆ ಸುವುದು, ಬದು ನಿರ್ಮಾಣ, ಕೃಷಿ ಹೊಂಡಾ ನಿರ್ಮಾಣ, ಕೆರೆಗಳಲ್ಲಿ ಹೂಳೆತ್ತುವುದು, ಚೆಕ್ ಡ್ಯಾಂ ಗಳ ನಿರ್ಮಾಣ ಹಾಗೂ ರೈತರ ಅನುಕೂಲಕರಕ್ಕಾಗಿ ತೋಟಗಾರಿಕೆ ಇಲಾಖೆ,

      ಕೃಷಿ ಇಲಾಖೆಗೆಗಳ ಇಲಾಖಾ ಅಧಿಕಾರಿಗಳವರಿಂದ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಕಾಮಗಾರಿಗಳಿಗೆ ಲಕ್ಷಾಂತರ ರೂಗಳನ್ನು ಘನ ಸರ್ಕಾರಗಳು ನೀಡುತ್ತಿರುವುದು ಶ್ಲಾಘನೀಯ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ ಬೇರೆ ರೀತಿಯದ್ದಾಗಿರುತ್ತದೆ.

    2019-20 ನೇ ಸಾಲಿನ ಒಂದನೇ ಹಂತದಲ್ಲಿ ತಾ 01-10-2018 ರಿಂದ ತಾ 31-03-2019 ರ ಅವಧಿಯವರೆಗೆ ಕೈಗೊಂಡಿರುವ ಸೋಷಿಯಲ್ ಆಡಿಟ್ ವರದಿ ಪ್ರಕಾರ ಈ ಮೇಲ್ಕಂಡ ನರೇಗಾ ಯೋಜನೆಯಿಂದ ರೈತರಿಗಿಂತ ನೌಕರರಿಗೆ ಹೆಚ್ಚಿನ ಉಪಯುಕ್ತವಾಗುತ್ತಿದೆ ಲಾಭವಾಗುತ್ತಿದೆ ಎಂಬುದು ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ವರ್ಷಕ್ಕೆ ಎರಡುಬಾರಿ ಸೋಷಿಯಲ್ ಆಡಿಟ್ (ತನಿಖಾ ವರದಿ) ಮಾಡಿಸುತ್ತಿರುತ್ತಾರಾದರೂ ಸಹ ಸದರಿ ವರದಿಯನ್ನು ಸೋಷಿಯಲ್ ಆಡಿಟ್ ವರದಿಯನ್ನು ತಯಾರಿಸಿ ನರೇಗಾ ಯೋಜನೆಯಡಿಯಲ್ಲಿನ ಲೋಪದೋಷಗಳ ಬಗ್ಗೆ,

      ಕಾಮಗಾರಿಗಳನ್ನು ಮಾಡದೆಯೆ ಸಾವಿರಾರು ರೂಪಾಯಿಗಳ ಹಣವನ್ನು ನುಂಗಿ ನೀರು ಕುಡಿದಿರುವ ಬಗ್ಗೆ (ಗುಳುಂ) ಸಂಭಂದಿಸಿದ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಇತಿ ಹಾಗೂ ಓಂಬಡ್ಸ್ ಅಧಿಕಾರಿಗಳವರು ಮೌನವಾಗಿರುವ ಒಳಗುಟ್ಟಾದರೂ ಏನು? ಎಂಬುದಾಗಿ ಪ್ರಜ್ಞಾವಂತ ನಾಗರೀಕರ ನೇರ ಆರೋಪಗಳಾಗಿರುತ್ತವೆ. ಈ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳವರೇ ಉತ್ತರಿಸಬೇಕಾಗಿದೆ.

ಉದಾ:

      ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಚಿನ್ನೇನಹಳ್ಳಿ ಗ್ರಾ.ಪಂ ಗೆ ಸೇರಿದ ವೀರಚಿನ್ನೇನಹಳ್ಳಿ ಹಾಗೂ ಇದೇ ಗ್ರಾ.ಪಂ ಗೆ ಸೇರಿದ ಕೃಷ್ಣಾಪುರ ಗ್ರಾಮಗಳ ರೈತರ ಜಮೀನುಗಳಲ್ಲಿ ಅಂದರೆ ತಿಮ್ಮಯ್ಯ ಬಿನ್ ತಿಮ್ಮಯ್ಯ ಸರ್ವೆ ನಂ 4 ರಲ್ಲಿ ರೇಷ್ಮೆ ಬೆಳೆಯನ್ನು ಇಡದೆಯೇ ರೇಷ್ಮೆ ಇಲಾಖೆಯು ಹಣ ಡ್ರಾ ಮಾಡಿದ್ದು ಇದೀಗ ಸದರಿ ಜಮೀನಿನಲ್ಲಿಯೇ ತಮಿಳುನಾಡು ರಾಜ್ಯದ ಕಂಪನಿ ಹತ್ತಿ ಬೆಳೆಯಿಟ್ಟಿರುತ್ತಾರೆ ಹಾಗೂ ಕೃಷ್ಣಾಪುರದ ಕಣಿಮಕ್ಕ ಎನ್ನುವವರ ಜಮೀನಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಅಡಿಕೆ ಸಸಿಯನ್ನಾಗಲೀ ಅಥವಾ ತೆಂಗಿನ ಗಿಡಗಳನ್ನು ಇದೇ ಗ್ರಾಮದ ನಿವೃತ್ತ ಶಿಕ್ಷಕ ನಾಗರಾಜ ರಾವ್ ರವರ ಜಮೀನಿನಲ್ಲಿ ನಾಮ ಫಲಕವನ್ನು ಹಾಕಲಾಗಿರುತ್ತದೆ ಕಣಿಮಕ್ಕಳ ಜಮೀನು ಇಂದಿಗೂ ಒಣಭೂಮಿಯಾಗಿಯೇ ಉಳಿದಿದೆ 40338-00 ರೂ ಡ್ರಾ ಆಗಿದೆ ರೇಷ್ಮೇ ಇಲಾಖೆಯಲ್ಲಿ 80178-00 ಡ್ರಾ ಮಾಡಲಾಗಿದುತ್ತದೆ.

ಕಂಡು ಬದಿರುವ ಮಾರ್ಗ ಸೂಚಿಗಳ ಉಲ್ಲಂಘನೆಗಳು :

1. ಚೆಕ್ ಮೆಷರ್ ಮೆಂಟ್ ದಾಖಲಿಸದೇ ಎಂ.ಐ.ಎಸ್. ಮಾಡಿ ಬಟವಾಡೆ 2896-00 ರೂ ಮಾಡಿರುತ್ತಾರೆ.
2. 10458-00 ರೈ (ಎರಡು ಬಾರಿ)
3. 37350-00 ಡ್ರಾ ಮಾಡಲಾಗಿದೆ.
4. 52290-00 ರೂ
5. 47559-00 ರೂ
6. 142926-00 ರೂ ಚೆಕ್ ಮೆಷರ್ ಮೆಂಟ್ ದಾಖಲಿಸದೇ ಎಂ.ಐ.ಎಸ್. ಮಾಡಿ ಬಟವಾಡೆ ಮಾಡಿರುತ್ತಾರೆ ಹಾಗೂ ಆಡಳಿತಾತ್ಮಕ ಮಂಜೂರಾತಿ ಅನುಮೋದನೆ ನೀಡಿರುವುದಿಲ್ಲ.
7. ಕೂಲಿದಾರರ ಸಹಿಗಳು ನಕಲಿ/ತಾಳೆಹೊಂದುತ್ತಿಲ್ಲ ಇ.ಎನ್.ಆರ್ ಇರುವುದಿಲ್ಲ ಕೂಲಿ ದಾರರ ಸಹಿಗಳು ಪೂರ್ಣಗೊಳಿಸಿಲ್ಲ ಆದಾಗ್ಯೂ 47024-00 ರೂ ಡ್ರಾ
8. 55776-00 ರೂ ಡ್ರಾ
9. 45318-00 ರೂ ಡ್ರಾ
10. 22659-00 ರೂ ಡ್ರಾ
11. 63495-00 ರೂ ಡ್ರಾ ಎನ್.ಎಂ.ಆರ್ ಅವಧಿಯಲ್ಲಿ ಕಾಮಗಾರಿ ಅನುಷ್ಠಾನ ಆಗಿರುವುದಿಲ್ಲ.

      ಈ ಅವಧಿಯಲ್ಲಿ ಕೂಲಿಗಾರರು ಕೆಲಸ ನಿರ್ವಹಿಸಿರುವುದಿಲ್ಲ ಆದರೂ ಸಹ ತಾತ್ರಿಕ ಸಹಾಯಕರು ಕಾಮಗಾರಿ ಅನುಷ್ಠಾನವಗಿದೆ ಎಂದು ಅಳತೆ ದಾಖಲಿಸಿರುತ್ತಾರೆ. ಈ ವಿಚಾರ ಗ್ರಾಮ ಸಭೆಯಲ್ಲಿ ಗಂಭೀರವಾಗಿ ಚರ್ಚೆಗೆ ಬಂದು ಅಂತಿಮವಾಗಿ ಇಷ್ಠು ಮೊತ್ತವನ್ನು ವಸೂಲಾತಿಗೆ ಶಿಫಾರಸ್ಸು ಮಾಡಲು ಸಭೆ ತೀರ್ಮಾನಿಸಿತು ಕಾಮಗಾರಿ ಅನುಷ್ಠಾನವಾಗದೆ ಅಳತೆ ಪುಸ್ತಕ ದಾಖಲಿಸಲಿರುವ ತಾಂತ್ರಿಕ ಸಹಾಯಕರಾದ ವಿಜಯ ಕುಮಾರ್ ರವರ ಮೇಲೇ ಶಿಸ್ತು ಕ್ರಮ ಕೈಗೊಳ್ಳಲು ಕಾರ್ಯ ಕ್ರಮಾಧಿಕಾರಿ ರವರಿಗೆ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ವರದಿ ಸಲ್ಲಿಸಲು ಸಭೆ ತೀರ್ಮಾನಿಸಿತು. ಚೆಕ್ ಮೆಷರ್ ಮೆಂಟ್ ದಾಖಲಿಸದೇ ಎಂ.ಪಿ.ಎಸ್. ಮಾಡಿ ಬಟವಾಡೆ ಮಾಡಿರುತ್ತಾರೆ ಇಂತಹವಗಳು ನೂರಾರು ಉದಾಹರಣೆಗಳು ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುತ್ತವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link