ಕುಣಿಗಲ್
ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಿ ಹತ್ತುವರ್ಷ ಆಳ್ವಿಕೆ ಮಾಡಲಿದ್ದಾರೆ ಎಂದು ಸ್ವತಃ ದೇವಿಯೇ ಬರೆದು ತೋರಿಸುವ ಸುಪ್ರಸಿದ್ದ ಕ್ಷೇತ್ರದ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರು ಭವಿಷ್ಯನುಡಿದಿದ್ದಾರೆ
ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದ ಬಾಲಮಂಜುನಾಥಸ್ವಾಮಿಯವರು ತಿಳಿಸಿದರು.
ಈ ಕ್ಷೇತ್ರದ ದೇವಿ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರನ್ನು ಕ್ಷೇತ್ರಕ್ಕೆ ಬರುವ ಭಕ್ತರು ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನಗೆದ್ದು ಪ್ರಧಾನ ಮಂತ್ರಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರ ? ಎಂದು ಅಮ್ಮನವರನ್ನ ಪ್ರಶ್ನೆ ಕೇಳಿದಾಗ ಮೋದಿಯವರು ಮತ್ತೊಮ್ಮೆ ಹತ್ತುವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಪ್ರಪಂಚದ ಗಮನ ಸೆಳೆಯುತ್ತಾರೆಂದು ದೇವತೆಯೇ ಕುದ್ದು ಬರೆದು ತೋರಿಸಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಶ್ರೀ ಮಠಕ್ಕೆ ಆಗಮಿಸುವ ಭಕ್ತರ ಪೈಕಿ ಮೋದಿಯವರ ಅಭಿಮಾನಿಗಳು ಹಾಗೂ ಬಿಜೆಪಿ ಪಕ್ಷದ ಕೆಲ ಮುಖಂಡರುಗಳು ಬಂದು ಇಲ್ಲಿಯ ಅಧಿದೇವತೆ ವಿದ್ಯಾಚೌಡೇಶ್ವರಿ ಅಮ್ಮನವರನ್ನ ಪ್ರಶ್ನೆಕೇಳಿದಾಗ ಮತ್ತೊಮ್ಮೆ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸುವರೆಂದು ಬರೆದು ತಿಳಿಸಿದೆ ಎಂದು ಶ್ರೀಗಳು ಹೇಳುತ್ತ ಈ ಕ್ಷೇತ್ರದಲ್ಲಿರುವ ದೇವತೆ ಐತಿಹಾಸಿಕ ಪ್ರಸಿದ್ದವಾಗಿದ್ದು ಅದ್ಬುತ ಪವಾಡ ವಿದ್ಯಮಾನಗಳು ಈಗಾಗಲೇ ಹಲವು ಭಕ್ತರಿಗೆ ದೊರೆತಿದ್ದು ಈ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ ಎಂದರು.
ಈ ಕ್ಷೇತ್ರದಲ್ಲಿ ಪ್ರತಿ ಮಂಗಳವಾರ-ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತಿದ್ದು ಉಣ್ಣಿಮೆ-ಅಮವಾಸ್ಯೆಯಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ. ಶ್ರೀ ಕ್ಷೇತ್ರಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದಮಹಾಸ್ವಾಮೀಜಿ, ಶ್ರೀ ಕುಂಬಳುಗೋಡು ಶಾಖಾ ಮಠದ ಪ್ರಕಾಶನಾಥಸ್ವಾಮೀಜಿ ಅವರು ಸನ್ನಿಧಿಗೆ ಆಗಮಿಸಿ ದರ್ಶನಪಡೆದು ದೇವಿಯ ಆಶೀರ್ವಾದ ಪಡೆದಿದ್ದಾರೆ ಹಾಗೂ ರಾಜ್ಯದ ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳು, ಸಿನಿಮಾ ನಟರು ಆಗಮಿಸಿ ತಮ್ಮ ಬೇಡಿಕೆಗಳನ್ನ ಈಡೇರಿಸಿಕೊಳ್ಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
