ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುವುದು ಬಹುಕೋಟಿ ಭಾರತೀಯರ ಕನಸು : ಡಾ.ಎ.ಎಚ್.ಶಿವಯೋಗಿಸ್ವಾಮಿ

ಚಳ್ಳಕೆರೆ

        ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿ ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಆಡಳಿತವನ್ನು ನಡೆಸುವ ಮೂಲಕ ರಾಷ್ಟ್ರವನ್ನು ಪ್ರಗತಿಸಯತ್ತ ತೆಗೆದುಕೊಂಡು ಹೋಗಿದ್ದು, ವಿಶ್ವಮಟ್ಟದಲ್ಲಿ 16ನೇ ಸ್ಥಾನದಲ್ಲಿದ್ದ ಭಾರತವನ್ನು 6ನೇ ಸ್ಥಾನಕ್ಕೆ ತಂದಿದ್ದು, ಪ್ರಸ್ತುತ 2019ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಪ್ರಧಾನಿಯಾಗಿ ವಿಶ್ವಮಟ್ಟದಲ್ಲಿ ಈ ರಾಷ್ಟ್ರವನ್ನು 3ನೇ ಸ್ಥಾನದತ್ತ ಕೊಂಡ್ಯೊಯುವ ಕೋಟಿ ಕೋಟಿ ಭಾರತೀಯರ ಕನಸನ್ನು ನನಸು ಮಾಡಲು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ವಿಧಾನ ಪರಿಷತ್‍ನ ಮಾಜಿ ಮುಖ್ಯ ಸಚೇತಕ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ಡಾ.ಎ.ಎಚ್.ಶಿವಯೋಗಿಸ್ವಾಮಿ ತಿಳಿಸಿದರು.

         ಅವರು, ಶುಕ್ರವಾರ ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಆಯ್ದ ಬೂತ್ ಮಟ್ಟದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. 2014ರಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರಮೋದಿ ರಾಷ್ಟ್ರದ ಜನತೆಗೆ ಮೂರು ಪ್ರಮುಖ ಆಶ್ವಾಸನೆಗಳನ್ನು ನೀಡಿದ್ದರು. ಒಂದು ನಾನು ಭ್ರಷ್ಟ್ರಾಚಾರವೆಸಗುವಿದಿಲ್ಲ, ಭ್ರಷ್ಟಾಚಾರ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ, ಎರಡನೇದಾಗಿ ರಾಷ್ಟ್ರದ ಯಾವ ಭಾಗದಲ್ಲೂ ಉಗ್ರರು ನುಸುಳದಂತೆ ಜಾಗೃತ ವಹಿಸಿವುದು, ಎಲ್ಲಿಯೂ ಬಾಂಬ್ ದಾಳಿಯಾಗದಂತೆ ಉಗ್ರಹ ನಿಗ್ರಹಣೆ, ಮೂರನೇದಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಹೆಮ್ಮದಿಯಿಂದ ಮತದಾರರಿಗೆ ತೆಲೆ ಎತ್ತಿ ತಿಳಿಸುವಂತೆ ಮಾಡುವುದು.

         ಈ ಹಿಂದಿನ ಎರಡು ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾದಾಗ ಸೈನ್ಯಕ್ಕೆ ಸ್ವಾತಂತ್ರ್ಯತೆ ನೀಡಲಿಲ್ಲ, ರಾಷ್ಟ್ರದ ರಕ್ಷಣೆಗೆ ಅವಶ್ಯವಿರುವ ಕ್ಷಿಪಣಿ ಉಡಾವಣೆಗೆ ಅವಕಾಶ ನೀಡಲಿಲ್ಲ, ದೇಶದಲ್ಲಿ ಎಲ್ಲಂದರಲ್ಲಿ ನಡೆದ ಉಗ್ರಗಾಮಿಗಳ ಚಟುವಟಿಕೆಗಳನ್ನು ನಿಯಂತ್ರಿಸಲಿಲ್ಲ, ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 48 ಸಾವಿರ ಕೋಟಿ ಭ್ರಷ್ಟಾಚಾರ, ಕಲ್ಲಿದ್ದಲು ಹಗರಣದಲ್ಲಿ 4 ಕೋಟಿ ಲಕ್ಷ ಭ್ರಷ್ಟಚಾರ, 2ಜಿ ಹಗರಣದಲ್ಲಿ 1.82 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ರಾಷ್ಟ್ರವನ್ನು ದಿವಾಳಿಯುತ್ತ ಕೊಂಡೊಯ್ಯಿದ್ದರು. ವಿಶ್ವದ ಯಾವುದೇ ಕೈಗಾರಿಕೋದ್ಯಮಿಗಳು ಭಾರತದಲ್ಲಿ ಬಂಡವಾಳ ಹೂಡಲು ತಯಾರಿರಲಿಲ್ಲ.

         ಆದರೆ, ಮೋದಿಯವರ ಸಮರ್ಥ ಆಡಳಿತ ಇಂದು ವಿದೇಶದ ಸಾವಿರಾರು ಕೋಟಿ ಬಂಡವಾಳ ನಮ್ಮ ದೇಶಕ್ಕೆ ಹರಿದು ಬರುತ್ತಿದೆ ಎಂದರು. ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿ ಮತ್ತೊಮ್ಮೆ ಆಯ್ಕೆಯಾಗಬೇಕು ಎಂಬ ಮಹದಾಸೆ ಕೋಟಿ ಕೋಟಿ ಭಾರತೀಯರದ್ದಾಗಿದ್ದು, ಬಿಜೆಪಿ ಸಂಘ ಪರಿವಾರವಲ್ಲದೆ ಇತರೆ 164 ಸಂಘಟನೆಗಳು ಮೋದಿಯವರ ಗೆಲುವಿಗಾಗಿ ಸಂಕಲ್ಪ ಮಾಡಿವೆ ಎಂದರು.

         ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇಂದು ಎಲ್ಲೆಡೆ ಮೋದಿಯವರ ಬಲವಾದ ಅಲೆ ಇದ್ದು ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕಿದೆ. ಈಗಾಗಲೇ ಮೋದಿಯವರ ಸಾಧನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಾರ್ಯಕರ್ತರಿಗೆ ಇದ್ದು, ಕ್ಷೇತ್ರದ ಎಲ್ಲಾ ಮತದಾರರಿಗೆ ಮೋದಿಯವರ ಸಾಧನೆಯನ್ನು ತಿಳಿಸಿ ಮತಯಾಚನೆ ಮಾಡುವಂತೆ ಮನವಿ ಮಾಡಿದರು.

         ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿದ್ದೇಶ್‍ಯಾದವ್ ಮಾತನಾಡಿ, ಭಾರತೀಯ ಜನತಾ ಪಕ್ಷದ ಗೆಲುವು ಪ್ರಾರಂಭವಾಗುವುದೇ ಬೂತ್ ಮಟ್ಟದ ಕಾರ್ಯಕರ್ತರಿಂದ. ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಗೆಲುವಿನವನ್ನು ನಿರ್ಧರಿಸುವ ಶಕ್ತಿವುಳ್ಳವರಾಗಿದ್ಧಾರೆ. ರಾಷ್ಟ್ರದಲ್ಲಿ ಎಂದೂ ಆಗದಂತಹ ಹಲವಾರು ಬದಲಾವಣೆಗಳು ನರೇಂದ್ರಮೋದಿಯವರು ಮಾಡಿದ್ದು, ಈ ಎಲ್ಲಾ ಯೋಜನೆಗಳ ಅನುಷ್ಠಾನದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

         ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಪಕ್ಷವನ್ನು ಗೆಲುವಿನತ್ತ ತೆಗೆದುಕೊಂಡು ಹೋಗುವ ಮಹಾತ್ ಕಾರ್ಯಕ್ಕೆ ನಮ್ಮ ಕಾರ್ಯಕರ್ತರು ಸಹಕಾರ ನೀಡಿ ದುಡಿಯಬೇಕಿದೆ. ಚುನಾವಣೆ ಕೇವಲ 19 ದಿನಗಳು ಇದ್ದು, ಈ ಅವಧಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಮೋದಿಯವರ ವಿಜಯಕ್ಕಾಗಿ ಶ್ರಮಿಸಬೇಕೆಂದರು.

          ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಡಿ.ಎಂ.ತಿಪ್ಪೇಸ್ವಾಮಿ, ಆದಿಬಾಸ್ಕರಶೆಟ್ಟಿ, ಜಿ.ಎಂ.ಸುರೇಶ್, ಕುಪೇಂದ್ರರೆಡ್ಡಿ, ಹಟ್ಟಿರುದ್ರಪ್ಪ, ಎ.ವಿಜಯೇಂದ್ರ, ಟಿ.ಬೋರನಾಯಕ, ನಗರಸಭಾ ಸದಸ್ಯ ವೆಂಕಟೇಶ್, ಹುಲಿಗಪ್ಪ, ಜೆ.ಕೆ.ವೀರಣ್ಣ, ಕರೀಕೆರೆ ತಿಪ್ಪೇಸ್ವಾಮಿ, ಹೊಟ್ಟೆಪ್ಪನಹಳ್ಳಿ ಮಂಜುನಾಥ, ಬಂಡೆರಂಗಸ್ವಾಮಿ, ವೀರೇಶ್, ಡಿ.ಕೆ.ಸೋಮಶೇಖರ್, ಜಗದಾಂಭ, ಇಂಧುಮತಿ, ಈಶ್ವರನಾಯಕ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link