ಜೂನ್ 10ಕ್ಕೆ ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬಂದ್

ತಿಪಟೂರು :

     ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರಗಾಲ ಪರಿಹಾರ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಯಿ ಜೂನ್ 11ರ ಸೋಮವಾರ ರಾಷ್ಟ್ರೀಯ ಹೆದ್ದಾರಿ 206ರನ್ನು ಬಂದ್ ಮಾಡಲಾಗುವುದೆಂದು ಪ್ರಗತಿಪರ ಚಿಂತಕ ಹಾಗೂ ಹೋರಾಟಗಾರ ಉಜ್ಜಜ್ಜಿ ರಾಜಣ್ಣ ತಿಳಿಸಿದರು.

     ನಗರದ ಕೃಷಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಪ್ರತಿಕಾಘೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಾಘದ ಬಹುದಿನದ ಬೇಡಿಕೆಯಾದ ಎತ್ತಿಹೊಳೆ ಯೋಜನೆಯಡಿ ಸಮಗ್ರ ನೀರು ಹಂಚಿಕೆ ಹಾಗೂ ಹೊನ್ನವಳ್ಳಿ ಏತ ನೀರಾವರಿ ಯೋಜನೆಗೆ ಹೆಚ್ಚುವರಿ ನೀರು ಮಂಜೂರಾತಿಗಾಗಿ ಆಗ್ರಹಿಸಿದ ಅವರು ರಾಷ್ಟ್ರಿಯ ಹೆದ್ದಾರಿ 206 ಭೂಸಂತ್ರಸ್ತರಿಗೆ ಮಾರುಕಟ್ಟೆ ಬೆಲೆ ಒದಗಿಸಲು ಇದೇ ವೇಲೆ ಒತ್ತಾಯಿಸಿದ ಅವರು ಎತ್ತಿನಹೊಳೆ ಯೋಜನೆಗಾಗು ಭೂಸ್ವಾಧೀನ ಸಂತ್ರಸ್ತರಿಗೆ ಮಾರುಕಟ್ಟೆ ಸ್ಪರ್ಧಾತ್ಮಕ ಬೆಲೆಗೆ ಆಗ್ರಹಿಸಿದ ಅವರು ತಾಲ್ಲೂಕಿನ ಭೂ ಬ್ಯಾಂಕಿಗೆ ಸೇರಿರುವ ಕೃಷಿ ಜಮೀನು ಹಾಗೂ ಗೋಮಾಳಗಳನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದ ಅವರು ಕೈಗಾರಿಕಾ ವಲಯಕ್ಕೆ ಸ್ವಾಧೀನಪಡಿಸಿಕೊಳ್ಳಲು ಹೋರಟಿರುವ ಕೃಷಿಭೂಮಿ ಸ್ವಾಧಿನವನ್ನು ಒದೇ ವೇಳೆ ವಿರೋಧಿಸಿದರು

       ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಿ.ಎಸ್.ದೇವರಾಜು ಮಾತನಾಡಿ ತಿಪಟೂರು ಹಾಗೂ ಯಡಿಯೂರು ರಸ್ತೆತನ್ನು ವಿಸ್ತರಣೆ ಮಾಡುತ್ತಿರುವುದು ಸ್ವಾಗತಾರ್ಹವಾದರೂ ಸರಿಯಾದ ಬೆಲೆಗೆ ರೈತರ ಜಮೀನಿಗೆ ಹಣ ನೀಡುವುದು ಅಷ್ಟು ಸಮಂಜಸ. ಎತ್ತಿನ ಹೊಳೆ ನೀರಾವರಿ ಯೋಜನೆಯಿಂದ ಈ ಭಾಗದ ಅನೇಕ ಕೆರೆಗಳಿಗೆ ಇದನ್ನು ತುಂಬಿಸಲು ಸಾಧ್ಯವಿದ್ದರೂ ಕೂಡ ಈ ಕೆಲಸವನ್ನು ಇಂದು ಮಾಡುತ್ತಿಲ್ಲ ಎಂದು ಆಪಾದಿಸಿದ ಅವರು ಈ ಭಾಗದ ನೀರಾವರಿ ಯೋಜನೆಗೆ ಸರ್ಕಾರವು ಯಾವುದೇ ಸಹಾಯವನ್ನು ಮಾಡದೇ ಕೇವಲ ಕಣ್ಣೊರೆಸುವ ತಂತ್ರವನ್ನು ಮಾಡುತ್ತಿದೆ ಎಂದು ಆಪಾದಿಸಿದ ಅವರು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಇನ್ನೂರರ ಭೂಸ್ವಾಧಿನ ಪತ್ರದಲ್ಲಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಗರಿಷ್ಠ ಬೆಲೆಯನ್ನು ನೀಡದೆ ಇದ್ದರೆ ಉಗ್ರ ಹೋರಾಟಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

       ಪತ್ರಿಕಾಘೋಷ್ಠಿಯಲ್ಲಿ ತಿಪಟೂರು ತಾಲ್ಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸ್ತಿಹಳ್ಳಿ ರಾಜಣ್ಣ, ಗೌರವಾಧ್ಯಕ್ಷ ನಂಜಪ್ಪ, ತಡಸೂರು ಹಸಿರು ಸೇನೆ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವರಾಜು, ಜನಸ್ಪಂದನ ಟ್ರಸ್ಟ್‍ನ ಸಿ.ಬಿ.ಶಶಿಧರ್, ಸೌಹಾರ್ಧ ವೇದಿಕೆಯ ಅಲ್ಲಾಬಕಾಷ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap