ಫೆ.25 ರಂದು ಹರಿಹರದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಹರಿಹರ ;

        ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ವಿಶ್ವಧರ್ಮ ವಿದ್ಯಾಪೀಠ ಹರಿಹರದ ಎಸ್.ಜೆ.ವಿ.ಪಿ ಕಾಲೇಜಿನಲ್ಲಿ ಫೆ 25 ರ ಸೋಮವಾರ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ.ಎ.ಎಸ್. ಹಿತ್ತಲಮನಿ ಹೇಳಿದರು.

       ಕಾಲೇಜಿನ ಉಪಾಧ್ಯಕ್ಷ ಸಭಾಂಗಣದಲ್ಲಿ ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ವಿಚಾರ ಸಂಕಿರಣವು ತಾಂತ್ರಿಕವಾಗಿ ಎರಡು ಅವಧಿಯಲ್ಲಿ ನಡೆಯಲಿದ್ದು ಮೊದಲನೆಯ ಅವಧಿ ಬೆಳಗ್ಗೆ 10.00 ಗಂಟೆಗೆ ಮತ್ತು ಎರಡನೇ ಅವಧಿಯ ವಿಚಾರ ಸಂಕಿರಣವು ಮಧ್ಯಾಹ್ನ 3.00 ಗಂಟೆಯಿಂದ ನಡೆಯಲಿದೆ.

        ಎರಡು ಅವಧಿಯ ತಾಂತ್ರಿಕ ವಿಚಾರ ಸಂಕಿರಣಗಳು ಕಾಲೇಜಿನ ಶ್ರೀ ಗುರುಸಿದ್ದಪ್ಪ ಹಾಲ್ ನಲ್ಲಿ ನಡೆಯಲಿದೆ. ಈ ವಿಚಾರ ಸಂಕಿರಣವು ಸ್ವಪ್ರಾಯೋಜಿತ ವಾಗಿ ಯುಜಿಸಿ ಇತರೆ ಯಾವುದೇ ಅನುದಾನ ಪಡೆಯದೇ ಸಂಸ್ಥೆಯ ಸ್ವಂತ ಖರ್ಚಿನಲ್ಲಿ ಆಯೋಜಿಸಲಾಗುತ್ತಿದೆ.

         ಈ ವಿಚಾರ ಸಂಕಿರಣವು ಮೂಲ ವಿಜ್ಞಾನ ಹಾಗೂ ಅನ್ವಯಿಕ ಜೀವ ವಿಜ್ಞಾನ ಇದರ ಪ್ರಸ್ತುತ ಘಟನಾವಳಿಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡುವರು ಮತ್ತು ಇಂದಿನ ಪ್ರಕೃತಿಗೆ ಸಂಬಂಧಪಟ್ಟಂತೆ ಮೂಲ ವಿಜ್ಞಾನದ ಅವಶ್ಯಕತೆ ಅದರ ನಿರ್ವಹಣೆ ಮತ್ತು ಘಟನಾವಳಿಗಳ ಕುರಿತು ವಿದ್ಯಾರ್ಥಿಗಳು,ಸಂಶೋಧನಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವೇದಿಕೆಯಲ್ಲಿ ಹಂಚಿಕೊಂಡು ಮಂಡನೆ ಮಾಡಲಿದ್ದಾರೆ.

         ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಮತ್ತು ನಮ್ಮ ರಾಜ್ಯದ ಬಳ್ಳಾರಿ, ತುಮಕೂರು , ಶಿವಮೊಗ್ಗ ,ಬೆಂಗಳೂರು ,ಬೆಳಗಾವಿ ಜಿಲ್ಲೆಗಳಿಂದ ಸುಮಾರು 200 ಜನ ಭಾಗವಹಿಸುವ ನಿರೀಕ್ಷೆ ಇದೆ, ಭಾಗಿಯಾಗಿ ಮಂಡನೆ ಮಾಡಿದ ಹಾಗೂ ಉತ್ತಮವಾಗಿ ಮಂಡಿಸಿದ ಕೆಲವು ಮಂಡನೆ ಗಳನ್ನು ಅಚ್ಚು ಹಾಕಿಸಿ ಗ್ರಂಥರೂಪದಲ್ಲಿ ಹೊರತರಲಾಗುವುದು.

        ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಪೀಠದ ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿಯವರು ಉದ್ಘಾಟನೆ ಮಾಡಲಿದ್ದಾರೆ , ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ.ಅಗಡಿ ಎಲ್ಲಪ್ಪ ವಹಿಸುವರು,ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಎಸ್.ವಿ.ಹಲಸೆ ಯವರು ದಿಕ್ಸೂಚಿ ಭಾಷಣ ಮಾಡುವರು, ಮುಖ್ಯ ಅತಿಥಿಗಳಾಗಿ ಗೋವಾ ವಿಶ್ವವಿದ್ಯಾಲಯದ ಸಾಗರೋತ್ತರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್.ವಿ. ರೆವೊನ್ಕರ್ ಮತ್ತು ಕಾರವಾರದ ಕೆ.ಯು.ಪಿಜಿ ಕೇಂದ್ರದ ಸಾಗರೋತ್ತರ ಜೀವ ವಿಜ್ಞಾನ ವಿಭಾಗದ ಡಾ ಜಗನ್ನಾಥ್.ಎಲ್. ರಾಥೋಡ್ ರವರು ಆಗಮಿಸಲಿದ್ದಾರೆ, ವಿಶೇಷ ಆಹ್ವಾನಿತರಾಗಿ ಪೀಠದ ಕಾರ್ಯದರ್ಶಿ ಪ್ರೊ.ಜಿ.ಶಕುಂತಲಮ್ಮ ಆಗಮಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಹದಡಿ ಯಲ್ಲಪ್ಪ ವಹಿಸುವರು.

        ಸಂಜೆ 4.30 ಗಂಟೆಗೆ ನಡೆಯುವ ಮುಕ್ತಾಯ ಸಮಾರಂಭ ಪ್ರಾಚಾರ್ಯ ಪ್ರೊ ಯಲ್ಲಪ್ಪ ಹದಡಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ, ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ಕಾಲೇಜಿನ ಡಾ.ಪಿ. ಪರಮೇಶ್ವರ ನಾಯಕ್,ಪೀಠದ ಸದಸ್ಯರುಗಳಾದ ಮೂರ್ಕಲ್ ಜಯಣ್ಣ , ಎಚ್.ಎಂ. ಷಡಾಕ್ಷರಯ್ಯ ವಿಶೇಷಆಹ್ವಾನಿತರಾಗಿ ಪ್ರೊ.ಬಿ.ಆರ್. ಪಾಟೀಲ್,ಪ್ರೊ.ಸಿ.ವಿ.ಪಾಟೀಲ್‍ಆಗಮಿಸುವರು,ಡಾ.ಎ.ಬಿ. ರಾಮಚಂದ್ರಪ್ಪ ಮತ್ತು ಪ್ರೊ.ಎಎಸ್ ಹಿತ್ತಲಮನಿ ಹಾಜರಿರುವರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ,ಮೂರ್ಕಲ್ ಜಯಣ್ಣ, ಆರ್.ಟಿ.ಪ್ರಶಾಂತ್, ತಿಪ್ಪೇಸ್ವಾಮಿ, ಪ್ರೊ.ಎ.ಎಸ್.ಹಿತ್ತಲಮನಿ, ಪ್ರೊ .ಸಿ..ವಿ.ಪಾಟೀಲ್ ,ಡಾ.ಎ.ಬಿ.ರಾಮಚಂದ್ರಪ್ಪ,ವೀರಣ್ಣ ಶೆಟ್ಟರ್,ಪ್ರೊ.ಬಿ.ಆರ್.ಪಾಟೀಲ್ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap