ಕೊರಟಗೆರೆ
ಕೊರಟಗೆರೆ ತಾಲ್ಲೂಕು ಸಿಐಟಿಯು ಪ್ರಧಾನ ಕಾರ್ಯದರ್ಶಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ನೌಷದ್‍ಸೆಹಗನ್(45) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕೊರಟಗೆರೆ ಪಟ್ಟಣದ ವಾಸಿಯಾದ ನೌಷಾದ್ ಸೆಹಗನ್ ಪ್ರಾರಂಭಿಕ ಹಂತದಲ್ಲಿ ಪತ್ರಿಕಾರಂಗದಲ್ಲಿ ಗುರುತಿಸಿಕೊಂಡು, ಹತ್ತಾರು ವರ್ಷಗಳ ಕಾಲ ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸಿ, ನಂತರ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಕಳೆದ 15 ವರ್ಷಗಳಿಂದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಹಾಗೂ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿಯಾಗಿ ಸಮಾಜಮುಖಿ ಧೊರಣೆ ಹೊತ್ತ ನೌಷಾದ್ ಸೆಹಗನ್ ಶುಕ್ರವಾರದಂದು ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
ನೌಷಾದ್ ಸೆಹಗನ್ ಕೊರಟಗೆರೆ ತಾಲ್ಲೂಕಿನ ಕಾರ್ಮಿಕ ಸಂಘಟನೆ,. ವರದಕ್ಷಿಣೆ ವಿರೋಧಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರದಾಸೋಹ ಕಾರ್ಯಕರ್ತೆಯರು, ಕಲ್ಲುಕಟ್ಟಡ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟವನ್ನು ನಡೆಸಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರಿ, ಸಹೋದರ, ಸಹೋದರಿಯನ್ನುಅಗಲಿದ್ದಾರೆ.
ಸಂತಾಪ ಸೂಚನೆ;-ನೌಷಾದ್ ಸೆಹಗನ್ ನಿಧನಅವರಕುಟುಂಬಕ್ಕೆ ಸಹಿಸುವ ಶಕ್ತಿ ದೇವರು ದಯಪಾಲಿಸಲಿ ಎಂದು ಮೃತರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸಿಐಟಿಯು ಸಂಘಟನೆ, ಸಿಪಿಐ(ಎಂ), ಮೆಡಿಕಲ್ ಸ್ಟೋರ್ಸ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ಸಂತಾಪವನ್ನು ಸೂಚಿಸಿವೆ.
ಅಂತ್ಯಕ್ರಿಯೆಗೆ ಗಣ್ಯರ ಭೇಟಿ;-ಅಂತ್ಯಕ್ರಿಯೆಗೆ ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಕಾರ್ಯದರ್ಶಿ ಉಮೇಶ್‍ಕೆ.ಎನ್, ಪ್ರತಾಪ್ ಸಿಂಹ, ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಪ್ರಗತಿಪರ ಸಂಘಟನಾ ಮಂಡಳಿಯ ಕೆ.ದೊರೈರಾಜ್, ಸಿಐಟಿಯು ಜಿಲ್ಲಾಧ್ಯಕ್ಷ ಮುಜೀಬ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ ಸುಬ್ರಹ್ಮಣ್ಯ, ರಾಘವೇಂದ್ರ, ಬಿ ಉಮೇಶ್, ಸಿಪಿಎಂ ನ ಜಿಲ್ಲಾ ಕಾರ್ಯದರ್ಶಿ ಉಮೇಶ್, ಕೊರಟಗೆರೆ ಮುಖಂಡರಾದ ವೆಂಕಟೇಶ್, ಸೈಫುಲ್ಲಾ, ಖಲಿಂ, ಮಹಮ್ಮದ್ ಬಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/9-mar-koratagere-photo-01.gif)