ನವಜಾತ ಶಿಶುಗಳ ಆರೋಗ್ಯ ತಪಾಸಣೆ

ತುಮಕೂರು
     ನವಜಾತ ಶಿಶುಗಳಲ್ಲಿ ಕಂಡುಬರುವ ಹೃದಯ ಹಾಗೂ ಉಸಿರಾಟದ ಸಮಸ್ಯೆಗೆ  ನೀಡಬೇಕಾಗಿರುವ ಚಿಕಿತ್ಸೆ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. 
        ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಪರಮೇಶ್  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಕಂಡುಬರುವಂತಹ ಉಸಿರಾಟದ ಸಮಸ್ಯೆ ಹೃದಯದ ಸಮಸ್ಯೆ ಇವುಗಳಿಗೆ ನೀಡಬೇಕಾಗಿರುವ ಇತರ ಚಿಕಿತ್ಸಾ ವಿಧಾನಗಳು  ಕುರಿತಂತೆ  ಐಎಪಿ ಹಾಗೂ ಎನ್ ಎನ್ ಎಫ್  ಸಂಸ್ಥೆಯ ನಿರ್ದೇಶಕರುಗಳು ನಗರದ ವಿವಿಧ ಆಸ್ಪತ್ರೆಗಳಿಂದ ಆಗಮಿಸಿದಂತಹ 40ಕ್ಕೂ ಹೆಚ್ಚು ವೈದ್ಯ ಸಿಬ್ಬಂದಿಗಳಿಗೆ  ಹಾಗೂ ಶ್ರೂಶ್ರಕರಿಗೆ ಮಾರ್ಗದರ್ಶನ ನೀಡಿದರು.  
        ಇದೇ ವೇಳೆ ಕಾರ್ಯಕ್ರಮದ ಕುರಿತಂತೆ ಮಾತನಾಡಿದ ಸಿದ್ದಗಂಗಾ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ  ನಾಗಣ್ಣ ಸಿದ್ದಗಂಗಾ ಆಸ್ಪತ್ರೆ ಮಕ್ಕಳ ವಿಭಾಗದ ತಜ್ಞರಾದ ಈಶ್ವರ್  ಮಾಕಂ  ಮಡಿಲು ಆಸ್ಪತ್ರೆಯ ಡಾ. ಅಶೋಕ್.  ಸಿದ್ಧಾರ್ಥ ಆಸ್ಪತ್ರೆಯ ಡಾ. ರಂಗಸ್ವಾಮಿ, ಡಾ.ಅರುಣ್ ಕುಮಾರ್ ಜಿ,   ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಕಾರ್ತಿಕ್ ಎಂ.ವಿ ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link