ದಾವಣಗೆರೆ:
ಭಾರತ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಪ್ರತಿವರ್ಷ ನವೀನ ಪ್ರಾಜೆಕ್ಟ್ ಆಲೋಚನೆಗಳಿಗಾಗಿ ಆಯೋಜಿಸುವ ಸ್ಪರ್ಧೆಯಲ್ಲಿ ನಗರದ ಜಿ.ಎಂ.ಐ.ಟಿ ಕಾಲೇಜಿನ ವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಜೆಕ್ಟ್ ಆಯ್ಕೆಯಾಗಿದೆ.
ಸಿವಿಲ್ ವಿದ್ಯಾರ್ಥಿಗಳಾದ ಚೇತನ್ ಕೆ ಎಂ, ಕು ದೀಕ್ಷಿತ ಏನ್, ತಿಲಕ್ ರತ್ನ ಯು ವಿ, ವರ್ಷ ವಿ, ಜೈನ್ ನಿಖಿಲ್, ಆದಿತ್ಯ ಕೆಂಚಿ ಅವರು ಆಯ್ಕೆಯಾಗಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಾಥನ್ (SIಊ) -2019 ರ ಹಾಡ್ರ್ವೇರ್ ವಿಭಾಗದಲ್ಲಿ ಅವರ ಮಾದರಿ ಆಯ್ಕೆಯಾಗಿದೆ.
ಈ ಸ್ಪರ್ಧೆಯಲ್ಲಿ ದೇಶಾದ್ಯಂತ 2,500 ಎಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದು, 65,000 ಯೋಜನೆಗಳನ್ನು ಸಲ್ಲಿಸಲಾಗಿದೆ. ” ಜಿ ಎಂ ಐ ಟಿ ಇ ಏನ್ ವಿ” ಯನ್ನು ಫೌಂಡ್ರಿ ಕ್ಲಸ್ಟರ್, ಬೆಳಗಾವಿ (ವೇಸ್ಟ್ ಮ್ಯಾನೇಜ್ಮೆಂಟ್) ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಈ ತಂಡವು, ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕರಾದ ಮಹಮ್ಮದ್ ಯಸೀನ್ ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಡಳಿತಾಧಿಕಾರಿ ವೈ.ಯು. ಸುಭಾಷ್ಚಂದ್ರ, ಪ್ರಾಂಶುಪಾಲ ಡಾ. ಪಿ. ಪ್ರಕಾಶ್, ಉಪ ಪ್ರಾಂಶುಪಾಲ ಡಾ. ಬಿ.ಆರ್.ಶ್ರೀಧರ್, ಡೀನ್ ಅಕಾಡೆಮಿಕ್ಸ್ ಡಾ.ಸುನಿಲ್ ಕುಮಾರ್ ಬಿ.ಎಸ್., ಮಾರುತಿ ಎಸ್ ಟಿ ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್.ಗೋವರ್ಧನಾಸ್ವಾಮಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.