ನವಿಲುಧಾಮಕ್ಕೆ ನೀರು ಹರಿಸಿದ ಸ್ವಾಮೀಜಿ…!!!

ಪಾವಗಡ:

         ಇಂದು ಹನುಮಂತನ ಬೆಟ್ಟ , ಕೆ ರಾಂಪುರ , ಪಾವಗಡ ತಾಲೂಕ ನ ನವಿಲುಧಾಮಕ್ಕೆ ಒಂದು ಹೊಸ ಆವಿಷ್ಕಾರದಮೂಲಕ ಕಾಡು ಪ್ರಾಣಿಗಳಿಗೆ ನೀರು ನೀಡಲು ನೀರನ್ನು ಹರಿಸಲಾಯಿತು. ಹೇಗೆ? ಈ ಭಯಂಕರ ಬಿಸಿಲಿನಲ್ಲಿ ಅದು ಪ್ರಾಣಿಗಳಿಗೆ, ನವಿಲುಗಳಿಗೆ ನಿಜಕ್ಕೂ ?ಮನಸಿದ್ದರೆ ಮಾರ್ಗ?

        ಎಂಬಂತೆ ಪೂಜ್ಯ ಸ್ವಾಮೀಜಿ ರವರು ನೀರಿನ ಟ್ಯಾಂಕರ್ಗಳೊಂದಿಗೆ ಡೀಸೆಲ್ ಪಂಪ್ಸೆಟ್ ಮೂಲಕ ನೀರನ್ನು ದೋಣಿಗಳಲ್ಲಿ ಹರಿಸಿದಾಗ ಅಲ್ಲಿ ನೆರೆದಿದ್ದವರ ವದನದಲ್ಲಿ ಆಶ್ಚರ್ಯ ! ಸಂತೋಷ ಎರಡು ಮೂಡಿಬಂದಿತು. ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಸೈನಿಕ ಎಂದೆನಿಸಿಕೊಂಡ ಸ್ವಾಮಿ ಜಪಾನಂದಜಿ ರವರು ಈ ನಾನೂರು ಎಕೆರೆ ಕಾಡಿಗೆ ಭಗೀರಥ ರಾದರು ಎನ್ನಬಹುದು.

        ಈ ಸಮಯದಲ್ಲಿ ಒಂದು ಮಹದಾಶ್ಚರ್ಯ ಕಾದಿತ್ತು! ಏನೆಂದರೆ ಯಾವಾಗ ನೀರು ಬಂಡೆಗಳ ಮದ್ಯೆ ಇರುವ ಹಿಂದ ಹಾಗು ದೊಣೆಗಳ ತುಂಬಾ ಹರಿಯಿತೋ ಆಗಲೇ ನೂರಾರು ನವಿಲುಗಳು ನೀರಿನ ವಾಸನೆ ಕಂಡಾಕ್ಷಣ ಏರುಧ್ವನಿಯಲ್ಲಿ ಕೂಗಲಾರಂಭಿಸಿದವು. ಸ್ವಾಮೀಜಿ ರವರ ಸಂತೋಷಕ್ಕೆ ಪಾರವೇಇಲ್ಲದಂತಾಯಿತು.

        ಮುಂಜಾನೆಯಿನ್ದಲೇ ಜೋಳ, ಕಾಳುಗಳನ್ನು ಹೂತ್ತು ತಂದ ತಮ್ಮತಂಡದವರಿಂದಿಗೆ ಗಂಟೆಗಟ್ಟಲೆ ಶ್ರಮವಹಿಸಿದ ಫಲವೇ ಇದು ಎಂದು ಸ್ವಾಮೀಜಿ ರವರು ಗ್ರಾಮಸ್ಥರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಸ್ವಾಮೀಜಿ ರವರೊಂದಿಗೆ ಶ್ರೀ ಹನುಮಂತರಾಯಪ್ಪ , ಶ್ರೀನಾಗೇಶ್, ಶ್ರೀಧರ್ ಬ್ರೈಟ್ ಇನ್ಸ್ಟಿಟ್ಯೂಟ್ ರವರು ಸಹಕಾರ ನೀಡಿದರು. ಅಂತೂ ಹಿಡಿದಕೆಲಸವನ್ನು ಶ್ರದ್ದೆ ಇಂದ ಕಾರ್ಯನಿರ್ವಹಿಸುವ ಸ್ವಾಮೀಜಿ ರವರ ನಿಷ್ಠೆ, ಪರಿಶ್ರಮ ನಿಜಕ್ಕೂ ಆಶ್ಚರ್ಯ ವನ್ನು ಉಂಟುಮಾಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap