ಚುನಾವಣಾ ಮಾಧ್ಯಮ ವೀಕ್ಷಣಾ ಕೇಂದ್ರಕ್ಕೆ ವೆಚ್ಚ ವೀಕ್ಷಕ ನೇಗಿ ಭೇಟಿ

ತುಮಕೂರು

     ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತೆರೆಯಲಾಗಿರುವ ಮಾಧ್ಯಮ ವೀಕ್ಷಣಾ ಕೇಂದ್ರಕ್ಕೆ ಇಂದು ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕ ವಿ.ಎಸ್. ನೇಗಿ ಭೇಟಿ ನೀಡಿ ಪರಿಶೀಲಿಸಿದರು.

     ನಂತರ ಮಾತನಾಡಿದ ಅವರು ಮಾಧ್ಯಮ ವೀಕ್ಷಣಾ ಸಮಿತಿಯು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್), ಜಾಹಿರಾತುಗಳು, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳ ಬಗ್ಗೆ ನಿಗಾವಹಿಸಬೇಕು ಎಂದರಲ್ಲದೆ, ಪ್ರಕಟ/ಪ್ರಸಾರವಾದ ಜಾಹೀರಾತು ವೆಚ್ಚದ ವರದಿಯನ್ನು ಪ್ರತಿದಿನ ತಮಗೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.

      ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಡಿ.ಮಂಜುನಾಥ ಅವರು ವೀಕ್ಷಕರಿಗೆ ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಹಾ ನಗರಪಾಲಿಕೆ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ವೆಚ್ಚದ ನೋಡೆಲ್ ಅಧಿಕಾರಿ ಜಿ.ಶಿವಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಸ್ಮಾರ್ಟ್‍ಸಿಟಿ ಹಣಕಾಸು ಅಧಿಕಾರಿ ಹಾಗೂ ಜಿಲ್ಲಾ ಚುನಾವಣಾ ವೆಚ್ಚ ತಂಡದ ಅಧಿಕಾರಿ ಕೆ.ಎ.ಶ್ರೀನಿವಾಸ್, ಕಾರ್ಖಾನೆ ಮತ್ತು ಬಾಯ್ಲರ್‍ಗಳ ಇಲಾಖೆ ಉಪನಿರ್ದೇಶಕ ಪಾರ್ಥಸಾರಥಿ, ಎಂಸಿಎಂಸಿ ಸದಸ್ಯೆ ರೂಪಕಲಾ, ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap