ನೇಕಾರರ ಅಭಿವೃದ್ಧಿಗಾಗಿ ಮೋದಿಗೆ ಮತ ನೀಡಿ : ಧನ್ಯಕುಮಾರ್

ತಿಪಟೂರು :

      ನೇಕಾರರನ್ನು ಗುರುತಿಸಿ, ನೇಕಾರರಿಗೆ ಉತ್ತಮ ಸ್ಥಾನಮಾನ ನೀಡುತ್ತಿರುವ ಮತ್ತು ಸೆಪ್ಟಂಬರ್ 7ನ್ನು ರಾಷ್ಟ್ರೀಯ ನೇಕಾರದಿನವನ್ನಾಗಿ ಘೋಷಿಸಿರುವ ಬಿ.ಜೆ.ಪಿ ಗೆ ಮತ ನೀಡುವಂತೆ ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ನೇಕಾರರಿಗೆ ಕರೆನೀಡಿದರು.

     ನರದ ಕಾಮತ್ ಹೋಟೆಲ್‍ನಲ್ಲಿ ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದಿಂದ ಕರೆದಿದ್ದ ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರೈತರು ಮತ್ತು ನೇಕಾರರು ರಾಷ್ಟ್ರದ ಎರಡು ಕಣ್ಣುಗಳಿಂದಂತೆ ರೈತನು ಮಾನವನ ದೇವನ್ನು ಬೆಳೇಸಿದರೆ ನೇಕಾರನು ಮಾನವರ ಮಾನವನ್ನು ಕಾಪಾಡುತ್ತಾನೆ.

        ಆದರೆ ಒಬ್ಬ ರೈತರನು ಆತ್ಮ ಹತ್ಯೆಮಾಡಿಕೊಂಡರೆ ಎಲ್ಲಾ ನಾಯಕರು ಓಡಾಡಿ ಅವನಿಗೆ ಸಾಧ್ಯವಾದಷ್ಟು ಪರಿಹಾರ ಮತ್ತು ಸಾಲ ಮನ್ನಾಗಳನ್ನು ಮಾಡುತ್ತಾರೆ ಆದರೆ ಒಬ್ಬ ನೇಕಾರ ಆರ್ತೀಕ ನಷ್ಟದಿಂದಲೋ ಅಥವಾ ಇನ್ನಾವುದರಿಂದಲೋ ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಅಕಾಲಿಕರ ಮರಣಹೊಂದಿದರೆ ಪರಿಹಾರ ಕೊಡಿಸುವುದಿರಲಿ ಕನಿಷ್ಠ ಪಕ್ಷ ಅನವತ್ತ ತಿರುಗಿಯೋ ಯಾವುದೇ ನಾಯಕರು ನೋಡದ ಹೊತ್ತಿನಲ್ಲಿ ನಮ್ಮ ಇರುವಿಕೆಯನ್ನು ರಾಜ್ಯದಲ್ಲಿ ಗುರುತಿಸಿದವರು ಬಿ.ಜೆ.ಪಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಅಂದು ನಮ್ಮನ್ನು ಗುರುತಿಸಿ ನಮ್ಮನ್ನು ಒಂದು ಸಂಘಟನೆಮಾಡುವ ಉದ್ದೇಶದಿಂದ ತುಮಕೂರಿನಲ್ಲಿ ಸಂಘಟನೆಯನ್ನು ಉದ್ಘಾಟಿಸಿ ಉತ್ತಮವಾದ ಕೆಲಸಕಾರ್ಯಗಳನ್ನು ಮಾಡಿದ್ದು ನಮ್ಮ ಉದ್ದರಿಸುವ ಕೆಲಸಕ್ಕೆ ಕೈಹಾಕಿದ್ದಾರೆ

         ಮತ್ತು ನಾವು ಜಿಲ್ಲೆಯಲ್ಲಿ ಸುಮಾರು 60000 ಸಾವಿರ ನೇಕಾರರ ಪಂಗಡಗಳಿದ್ದ 40 ಸಾವಿರ ಓಟುಗಳಿವೆ. ಈಗ ಇಲ್ಲಿಗೆ ಬಂದಿರುವ ದೇವೇಗೌಡರು ಈಗ ನೀರು ಬಿಡುತ್ತೇವಂದು ಹೇಳುತ್ತಿದ್ದಾರೆ ಆದರೆ ತುಮಕೂರು ಜಿಲ್ಲೆವರು ನಮ್ಮ ಅಣ್ಣತಮ್ಮಂದಿರು ಎಂದು ಭಾವಿಸದೇ ಈಗ ಚುನಾವಣೆ ಇರುವುದರಿಂದ ನೀರುಬಿಡುತ್ತೇವೆ ಎಂದು ಹೇಳುತ್ತಿರುವುದು ಕೀಳುಮಟ್ಟದ ರಾಜಕೀಯ ಓಟಿಗಾಗಿ ಏನುಬೇಕಾದರೂ ಮಾಡುತ್ತೇವೆ ಎನ್ನುವುದನ್ನು ಸೂಚಿಸುತ್ತದೆ ಅದಕ್ಕೇ ಪ್ರಜ್ಞಾವಂತರಾದ ನಾವು ಅವಕಾಶಕ್ಕಾಗಿ ರಾಜಕೀಯಮಾಡುವವರನ್ನು ತ್ಯಜಿಸಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿಗೆ ಓಡು ನೀಡಬೇಕೆಂದು ಕೋರಿದರು.

          ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಗಂಗಪ್ಪ ಮಾತನಾಡುತ್ತಾ ನೇಕಾರರಾದ ನಾವುಗಳು ಈಗಲೂ ಸಹ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ನಾವು ಮುಖ್ಯವಾಹಿನಿಗೆ ಬರಬೇಕೆಂದರೆ ನಮ್ಮನ್ನು ಗುರುತಿಸುವ ನಾಯಕರನ್ನು ಬೆಂಬಲಿಸಬೇಕು. ಬಿ.ಜೆ.ಪಿ ಅಭ್ಯರ್ಥಿ ಬಸವರಾಜು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಕೇಳುವ ದೇವೇಗೌಡರಿಗೆ ಅವರು ನಮ್ಮ ಜಿಲ್ಲೆಗೆ ಏನುಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ ಎಂದ ಅವರು ನರೇಂದ್ರ ಮೋದಿ ಸ್ಫರ್ಧಿಸುತ್ತಿರುವ ವಾರಣಾಸಿ ಕೇತ್ರದಲ್ಲಿ ನಮ್ಮ ನೇಕಾರರ ಒಟ್ಟು 3.80 ಲಕ್ಷ ಮತಗಳಿದ್ದು ಅಲ್ಲಿ ನಮ್ಮ ಸಮುದಾಯದ ನಾಐಕರನ್ನು ಗಉರುತಿಸಿ ಅವರನ್ನೇ ಅನುಮೋದಕರನ್ನಾಗಿ ಮಾಡಿಕೊಂಡಿರುವ ಮೋದಿಗೆ ನವ್ಮ್ಮಗಳ ಬೆಂಬಲವಿದ್ದು ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬರಬೇಕಾದರೆ ನಾವು ಇಲ್ಲಿನ ಬಿ.ಜೆ.ಪಿ ಅಭ್ಯರ್ಥಿ ಜಿ.ಎಸ್.ಬಸವರಾಜುರವರನ್ನು ಅತ್ಯದಿಕ ಮತಗಳ ಅಂತರದಿಂದ ಗೆಲ್ಲಿಸಿ ದೇಶದಲ್ಲಿ ಸುಭದ್ರ ಸರ್ಕಾರ ನೆಲೆಗೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ನೇಕಾರ ಸಮಾಜಕ್ಕೆ ಕರೆನೀಡಿದರು.

         ಪತ್ರಿಕಾ ಘೋಷ್ಠಿಯಲ್ಲಿ ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದ ಗೌರವಾಧ್ಯಕ್ಷ ರಾಮಕೃಷ್ಣಪ್ಪ, ಸಂಚಾಲಕ ರಾಕೇಶ್, ಯುವ ಘಟಕದ ಅದ್ಯಕ್ಷ ನಿಲ್, ರಾಮಕೃಷ್ಣ, ಗುಬ್ಬಿ ಅದ್ಯಕ್ಷ ದೇವರಾಜು ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link