ನೇಪಾಳ ಮೂಲದ ಇಬ್ಬರು ಮನೆಗಳ್ಳರ ಬಂಧನ

ದಾವಣಗೆರೆ :

       ಕಳುವಾಗಿದ್ದ ಮನೆಯಲ್ಲಿ ದೊರೆತಿದ್ದ ಬೆರಳು ಮುದ್ರೆ ಆಧಾರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ದಾವಣಗೆರೆ ಪೊಲೀಸರು, ನೇಪಾಳ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

          ನೇಪಾಳ ಮೂಲದ ಬೆಂಗಳೂರು ನಿವಾಸಿಗಳಾದ ತಿಲಕ್ ಖಡ್ಕ ಅಲಿಯಾಸ್ ತಿಲಕ್ ಕುಮಾರ್ ಖಡ್ಕ (23 ವರ್ಷ) ಹಾಗೂ ಅಶೋಕ್ ಸಿಂಗ್ ಠಾಕೋರಿ (25 ವರ್ಷ) ಬಂಧಿತರಗಿದ್ದಾರೆ. ದಾವಣಗೆರೆಯಲ್ಲಿ ರಾತ್ರಿ ವೇಳೆ ಮನೆ ಕಳ್ಳತನವಾದ ಮನೆಯಲ್ಲಿ ಆಕಸ್ಮಿಕ ಬೆರಳು ಮುದ್ರೆ ದೊರೆತ್ತಿದ್ದು. ಸ್ಥಳದಲ್ಲಿ ದೊರೆತ ಆಕಸ್ಮಿಕ ಬೆರಳು ಮುದ್ರೆಯು ಹಿಂದೆ ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡಿದ ತಿಲಕ್ ಖಡ್ಕತಿಲಕ್ ಕುಮಾರ್ ಖಡ್ಕ ಈತನ ಬೆರಳು ಮುದ್ರೆಗೆ ಹೋಲಿಕೆಯಾದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಅವರು ವೃತ್ತ ನಿರೀಕ್ಷಿಕ ಇ.ಆನಂದ್ ನೇತೃತ್ವದಲ್ಲಿ ಆರೋಪಿತರ ಪತ್ತೆಗಾಗಿ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿದ್ದರು.

         ತಂಡವು ಈ ಇಬ್ಬರನ್ನು ಪತ್ತೆ ಮಾಡಿ, 3.30 ಲಕ್ಷ ರೂ ಮೌಲ್ಯದ 110ಗ್ರಾಂ ಬಂಗಾರದ ಒಡವೆಗಳನ್ನು ಜಫ್ತು ಪಡಿಸಿಕೊಂಡು ವಿದ್ಯಾನಗರ ಪೊಲೀಸ್ ಠಾಣೆಯ 05 ಪ್ರಕರಣಗಳು ಹಾಗೂ ಬಡಾವಣೆ ಪೊಲೀಸ್ ಠಾಣೆಯ 02 ಮನೆ ಕಳವು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ವಿಚಾರಣೆಯ ವೇಳೆಯಲ್ಲಿ ಬಂಧಿತರು ಮಂಗಳೂರು, ತೀರ್ಥಹಳ್ಳಿ, ಮಣಿಪಾಲ್, ಉಡಪಿ ಜಿಲ್ಲೆಗಳಲ್ಲಿ ಕಳ್ಳತನ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ.

          ಡಿವೈಎಸ್‍ಪಿ ನಾಗರಾಜ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ತನಿಖಾಧಿಕಾರಿ ಇ.ಆನಂದ, ಬೆರಳು ಮುದ್ರೆ ನಿರೀಕ್ಷಕ ರುದ್ರೇಶ್ ಹಾಗೂ ಸಿಬ್ಬಂದಿಗಳಾದ ಕೆ.ಎಲ್ ತಿಪ್ಪೇಸ್ವಾಮಿ, ಆಂಜನೇಯ, ಮಜೀದ್, ರಾಘವೇಂದ್ರ, ರಮೇಶ್ ನಾಯ್ಕ, ಶಾಂತಕುಮಾರ್, ಲೋಕ್ಯಾನಾಯ್ಕ, ಗಫರ್, ಮಹೇಶ, ಚಂದ್ರಪ್ಪ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್, ರಮೇಶ್ ಅವರುಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಶ್ಲಾಘಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link