ಎಸ್.ಬಿ.ಐ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟನೆ

ಗುಬ್ಬಿ

      ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯಗಳನ್ನು ಒದಗಿಸುವಲ್ಲಿ ಎಸ್.ಬಿ.ಐ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಜೊತೆಗೆ ಗ್ರಾಹಕರಿಗೆ ತ್ವರಿತವಾಗಿ ಸಾಲ ಸೌಲಭ್ಯಗಳು ದೊರೆಯಲು ಮತ್ತು ಎಲ್ಲಾ ರೀತಿಯ ಭ್ಯಾಂಕಿಂಗ್ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಲು ಭ್ಯಾಂಕಿಂಗ್ ವ್ಯವಸ್ಥೆಯನ್ನು ಗಣಕೀರಣಗೊಳಿಸಲಾಗುತ್ತಿದ್ದು ಗ್ರಾಹಕರು ಈ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಆರ್ಥಿಕ ವ್ಯವಹಾರವನ್ನು ಸುಲಭವಾಗಿಸಿಕೊಳ್ಳುವಂತೆ ಎಸ್.ಬಿ.ಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಭಿಜೀತ್ ಮಜೂಂದಾರ್ ತಿಳಿಸಿದರು.

       ಪಟ್ಟಣದ ಪೋಲೀಸ್ ಠಾಣೆ ಹತ್ತಿರ ಪ್ರಾರಂಭಿಸಿರುವ ಎಸ್.ಬಿ.ಐ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರ ಅಭ್ಯುದಯಕ್ಕೆ ಕೃಷಿ ಸಾಲ, ಶೈಕ್ಷಣಿಕ ಸಾಲ ಸೇರಿದಂತೆ ಇತರೆ ಆರ್ಥಿಕ ಸ್ವಾಲಂಬನೆಗೆ ಪೂರಕವಾದ ಸಾಲ ಸೌಲಭ್ಯಗಳನ್ನು ನೀಡುವಲ್ಲಿ ಭ್ಯಾಂಕ್ ಮಹತ್ವದ ಪಾತ್ರ ವಹಿಸಿದ್ದು ಗ್ರಾಹಕರು ಭ್ಯಾಂಕ್‍ನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

       ಪ್ರಧಾನ ವ್ಯವಸ್ಥಾಪಕ ಎಸ್.ಮುರುಳೀಧರನ್ ಮಾತನಾಡಿ ಗ್ರಾಹಕರೊಂದಿಗೆ ಭ್ಯಾಂಕ್ ಉತ್ತಮ ಭಾಂದವ್ಯ ಹೊಂದಿದ್ದು ಭ್ಯಾಂಕ್ ವ್ಯವಹಾರ ಮತ್ತಷ್ಟು ಸರಳೀಕರಣಗೊಳಿಸಲು ಸ್ಮಾರ್ಟ್ ಪೋನ್ ಮೂಲಕ ಆರ್ಥಿಕ ವ್ಯವಹಾರ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಅಲ್ಲದೆ ದಿನದ 24 ಗಂಟೆಯೂ ಗ್ರಾಹಕರು ಭ್ಯಾಂಕಿಂಗ್ ವ್ಯವಹಾರ ನಡೆಸಲು ಸೂಕ್ತವಾದ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

       ಇದೆ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿಯೂಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಪ್ರದಾನ ವ್ಯವಸ್ಥಾಪಕ ರಮೆಶ್ ಚಂದ್ರ, ಪ್ರಾಧೇಶಿಕ ವ್ಯವಸ್ಥಾಪಕ ಕಿಶೋರ್ ಕುಮಾರ್ ಪಿ.ಪಾಟೀಲ್, ಶಾಖಾ ವ್ಯವಸ್ಥಾಪಕರಾದ ಎನ್.ಜನಾರ್ಧನ್, ಆನಂದಕೃಷ್ಣ, ಪಟ್ಟಣ ಪಂಚಾಯ್ತಿ ಸದಸ್ಯ.ಜಿ.ಆರ್.ಶಿವಕುಮಾರ್, ಮೀಡಿಯಾ ಬ್ಯಾಕ್ ಆಪೀಸ್‍ನ ಮುಖ್ಯಸ್ಥ ರಘು, ಹಿರಿಯ ನಾಗರೀಕರಾದ ಕೆ.ಎಲ್.ಗೋಪಾಲಕೃಷ್ಣಶೆಟ್ಟಿ, ಗಮಗಾಧರ್, ಭ್ಯಾಂಕ್‍ನ ಪೀಲ್ಡ್ ಆಫೀಸರ್ ರಾಮಕೃಷ್ಣೇಗೌಡ ಸೇರಿದಂತೆ ಭ್ಯಾಂಕ್‍ನ ಸಿಬ್ಬಂದಿ ವರ್ಗದವರು, ರೈತರು ಮತ್ತು ಪಟ್ಟಣದ ಪ್ರಮುಖರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap