ರಾಮ್‌ಪುರ್ :
ಇತ್ತೀಚೆಗೆ ಬಹಳ ಸುದ್ದಿ ಮಾಡಿದ್ದ ಇವಿಎಂ ವಿಶ್ವಾಸಾರ್ಹತೆ ಪ್ರಕರಣದ ಬೆನ್ನಲ್ಲೇ ಎಸ್‌ಪಿ ಅಭ್ಯರ್ಥಿ ಅಜಂ ಖಾನ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ .
ಈ ಲೋಕಸಭಾ ಚುನಾವಣೆಯಲ್ಲಿ ನಾನು 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲದೇ ಹೋದರೆ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಸರಿಯಿಲ್ಲ ಎಂದರ್ಥ.ಚುನಾವಣಾ ಆಯೋಗ ಹೇಳುತ್ತಿರುವ ಮುಕ್ತ ಹಾಗು ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ ಎನ್ನುವುದು ಖಚಿತವಾಗುತ್ತದೆ ಎಂದು ಹೊಸ ವಾದ ಮಂಡಿಸಿದ್ದಾರೆ.ಸದ್ಯ ಅಜಂ ಖಾನ್ ಅವರು ರಾಮ್‌ಪುರ್ ಕ್ಷೇತ್ರದ ಭ್ಯರ್ಥಿಯಾಗಿದ್ದು ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರದಾ ಕಣದಲ್ಲಿದ್ದಾರೆ.
ಚುನಾವಣೆ ಶುರುವಾದಾಗಿನಿಂದ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಮತ್ತು ನಟಿ ಜಯಪ್ರದಾ ಅವರ ವಿರುದ್ಧದ ಕೀಳು ಮಟ್ಟದ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ಪ್ರಚಾರ ನಡೆಸದಂತೆ 2 ಬಾರಿ ನಿಷೇಧಕ್ಕೆ ಗುರಿಯಾಗಿದ್ದರು.ಆದರೆ ಈಗ ಅವರು ನೇರವಾಗಿ ಆಯೋಗದ ಮೇಲೆಯೇ ಎರಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
