ಬೆಳಗಾವಿ
ಕೋವಿಡ್ – 19 ಪರೀಕ್ಷಾ ಲ್ಯಾಬ್ ಆರಂಭವಾಗಲಿದೆ. ಕರ್ನಾಟಕದಲ್ಲಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಲ್ಲಿ ಬೆಳಗಾವಿಯೂ ಸೇರಿದೆ. ಶುಕ್ರವಾರದ ತನಕ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 41.
ಬೆಳಗಾವಿ ಬಿಜೆಪಿ ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ಶನಿವಾರದಿಂದ ಕೋವಿಡ್ – 19 ಪರೀಕ್ಷೆ ನಡೆಯಲಿದ್ದು, 3- 4 ದಿನಗಳ ಕಾಲ ವರದಿಗಾಗಿ ಕಾಯುವುದು ತಪ್ಪಲಿದೆ ಎಂದು ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಬೆಳಗಾವಿಯಲ್ಲಿ ಲ್ಯಾಬ್ ಆರಂಭಿಸಲು ಒಪ್ಪಿಗೆ ನೀಡಿದೆ. ಲ್ಯಾಬ್ ಇಲ್ಲದ ಕಾರಣ ಇಷ್ಟು ದಿನ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳಿಸಲಾಗುತ್ತಿತ್ತು.
ಬೆಳಗಾವಿಯಲ್ಲಿ ಇದುವರೆಗೂ 41 ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಘೋಷಣೆ ಮಾಡಿರುವ ಕೊರೊನಾ ಹಾಟ್ ಸ್ಟಾಟ್ ಜಿಲ್ಲೆಗಳಲ್ಲಿ ಬೆಳಗಾವಿಯೂ ಸೇರಿದೆ. ಈಗ ಲ್ಯಾಬ್ ಸಿಕ್ಕಿರುವುದು ಪರೀಕ್ಷೆಗೆ ಹೆಚ್ಚಿನ ಅನುಕೂಲವಾಗಿದೆ.ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಲ್ಯಾಬ್ ಆರಂಭಿಸಲು ಅನುಮತಿ ನೀಡಲು ಸುರೇಶ್ ಅಂಗಡಿಗೆ ಮನವಿ ಮಾಡಿದ್ದರು. ಸಂಸದರ ಪ್ರಯತ್ನದ ಫಲವಾಗಿ ಲ್ಯಾಬ್ ಆರಂಭಕ್ಕೆ ಒಪ್ಪಿಗೆ ಸಿಕ್ಕಿದೆ. ಶನಿವಾರ ಲ್ಯಾಬ್ ಕಾರ್ಯಾರಂಭ ಮಾಡಲಿದೆ.
ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ಶನಿವಾರ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಜೊತೆಗೆ ಮನೆಯಿಂದ ಆಗಾಗ ಹೊರೆಗೆ ಬರದೆ ಮನೆಯಲ್ಲಿಯೇ ಇರುವ ಮೂಲಕ ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸಂಸದ ಸುರೇಶ್ ಅಂಗಡಿ ಕರೆ ನೀಡಿದ್ದಾರೆ.ಕೇಂದ್ರ ಆರೋಗ್ಯ ಸಚಿವಾಲಯ ಬೆಳಗಾವಿಯನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಘೋಷಣೆ ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ 5 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಈ ಹೊಸ ಐದು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 41
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
