ಬೆಂಗಳೂರು
ಎಲ್ಲ ಸಾವಿನ ಪ್ರಕಣಗಳನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕಿಲ್ಲ. ಶಂಕೆ ಮತ್ತು ಕಾಯಿಲೆಯ ಇತಿಹಾಸ ಹೊಂದಿರುವ ಸಾವಿನ ಪ್ರಕರಣಗಳನ್ನು ಮಾತ್ರ ಕೊರೋನಾ ಪರೀಕ್ಷೆಗೆ ಒಳಪಡಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಎಲ್ಲ ಆಸ್ಪತ್ರೆಗಳು ಕೊರೋನಾ ಸೋಂಕಿತ ಸಾವಿನ ಪ್ರಕರಣ ಮತ್ತು ದೃಢಪಟ್ಟ ಪ್ರಕರಣಗಳ ಸಂಪೂರ್ಣ ವಿವರಗಳನ್ನು ದಾಖಲು ಮಾಡಿರಬೇಕು. ಸೋಂಕಿತರ ಸಾವಿಗೆ ಸಂಬಂಧಿಸಿದಂತೆ ವ್ಯಕ್ತಿಯ ಹೆಸರು, ಮನೆ ವಿಳಾಸ, ಗುರುತಿನ ಚೀಟಿ ಮುಂತಾದ ದಾಖಲಾತಿಗಳನ್ನು ಸಂಗ್ರಹ ಮಾಡಿಡಬೇಕು.
ಶವಗಾರದಲ್ಲಿ ಗೌರವಿತವಾಗಿ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಿಕೊಡಬೇಕು. ಶವಗಾರಗಳನ್ನು ಸ್ವಚ್ಛವಾಗಿಡಬೇಕು ಮತ್ತು ಅಂತ್ಯಕ್ರಿಯೆಯಲ್ಲಿ 20 ಜನರಿಗಿಂತ ಹೆಚ್ಚು ಜನ ಭಾಗವಹಿಸಬಾರದು. ಒಂದು ವೇಳೆ ಕುಟುಂಬದ ಸದಸ್ಯರು ಮೃತದೇಹವನ್ನು ವಶಕ್ಕೆ ಪಡೆಯಲು ನಿರಾಕರಿಸಿದರೆ, ಅಂತಹ ಸನ್ನಿವೇಶದಲ್ಲಿ ಸ್ಥಳೀಯ ಆರೋಗ್ಯಾಧಿಕಾರಿಗಳು, ವ್ಯಕ್ತಿಯ ಧಾರ್ಮಿಕ ಸಂಪ್ರಾದಾಯದ ಪ್ರಕಾರ ಗೌರವಯುತ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಬೇಕು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ