ರಸ್ತೆ ಧೂಳು ಸ್ವಚ್ಛತೆಗೆ ಸ್ಮಾರ್ಟ್ ಯಂತ್ರ ಬಳಕೆ

ತುಮಕೂರು
   ತುಮಕೂರು ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಬಿ.ಎಚ್.ರಸ್ತೆಯ ಧೂಳು ತೆಗೆಯುವ ಕಾರ್ಯ ಭರದಿಂದ ಸಾಗಿದ್ದು, ತುಮಕೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಇದೇ ಮೊದಲಬಾರಿಗೆ ಧೂಳು ತೆಗೆಯಲು ಸ್ಮಾರ್ಟ್ ಯಂತ್ರವನ್ನು ಉಪಯೋಗಿಸಿದ್ದಾರೆ. 
   ತುಮಕೂರಿನ ಖಾಸಗಿ ಗಣ್ಯರೊಬ್ಬರು ತಮ್ಮ ಉದ್ದಿಮೆಯ ಸ್ಥಳದ ಸ್ವಚ್ಛತೆಗಾಗಿ ಈ ಯಂತ್ರವನ್ನು ಖರೀದಿಸಿದ್ದು, ಅದನ್ನು ದಿನವೂ ಬಳಸುತ್ತಿದ್ದುದನ್ನು ಗಮನಿಸಿದ ಮಹಾನಗರ ಪಾಲಿಕೆಯ ಹೆಲ್ತ್‍ಇನ್ಸ್‍ಪೆಕ್ಟರ್ ಜಯಣ್ಣ ಅವರು ಸದರಿ ಗಣ್ಯರನ್ನು ಸಂಪರ್ಕಿಸಿ ಅವರಿಂದ ಯಂತ್ರವನ್ನು ಕೇಳಿ ಪಡೆದುಕೊಂಡು ಅದರ ಪ್ರಯೋಗವನ್ನು ಗುರುವಾರ ಬಿ.ಎಚ್.ರಸ್ತೆಯಲ್ಲಿ ಮಾಡಿದರು. ಇದು ಎಲ್ಲರ ಗಮನಸೆಳೆಯಿತಲ್ಲದೆ, ಮೆಚ್ಚುಗೆಗೂ ಪಾತ್ರವಾಯಿತು.
   “ರಸ್ತೆಯ ಧೂಳು ತೆಗೆಯುವ ಈ ಪುಟಾಣಿ ಯಂತ್ರಕ್ಕೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ. ಅದಕ್ಕೆ ಚಕ್ರಗಳನ್ನು ಅಳವಡಿಸಿದ್ದು, ಸುಲಭವಾಗಿ ಮುಂದಕ್ಕೆ ತಳ್ಳಬಹುದು. ಅದು ಈ ರೀತಿ ಚಲಿಸುವಾಗ ಅದರ ಕೆಳಭಾಗದಲ್ಲಿರುವ ಉಪಕರಣದ ಮೂಲಕ ಕೆಳಗಿನ ಮಣ್ಣು, ಎಲೆಗಳೆಲ್ಲ ಒಳಕ್ಕೆಳೆದುಕೊಳ್ಳುತ್ತವೆ. ಒಳಭಾಗ ನಿರ್ದಿಷ್ಟ ಪ್ರಮಾಣದಲ್ಲಿ ಆ ಕಸ ಸಂಗ್ರಹವಾಗುತ್ತದೆ. ತುಂಬಿದಾಗ ಅದನ್ನು ಅಲ್ಲೇ ಪಕ್ಕದಲ್ಲಿ ಗುಡ್ಡೆ ಹಾಕಬಹುದು.
     ಬಳಿಕ ಈ ಯಂತ್ರವನ್ನು ಮುಂದಕ್ಕೆ ಒಯ್ಯುತ್ತಾ ಹೋಗಬಹುದು. ಯಾವುದೇ ಕಷ್ಟವಿಲ್ಲದಂತೆ, ಇಂಧನ ಬಳಕೆಯಿಲ್ಲದಂತೆ, ಧೂಳೇಳದಂತೆ ಇದನ್ನು ಬಳಸಬಹುದು. ಪೌರಕಾರ್ಮಿಕರಿಗೂ ಇದು ಹಿತಕಾರಿಯಾಗಿದೆ. ಯಾವುದೇ ಸ್ಥಳವನ್ನು ತ್ವರಿತವಾಗಿ ಸ್ವಚ್ಛಗೊಳಿಸಬಹುದು. ಇದರ ಬೆಲೆಯೂ ಅತಿಕಡಿಮೆ” ಎಂದು ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ “ಪ್ರಜಾಪ್ರಗತಿ”ಗೆ ಹೆಲ್ತ್‍ಇನ್ಸ್‍ಪೆಕ್ಟರ್ ಜಯಣ್ಣ ಮಾಹಿತಿ ನೀಡಿದರು. 
     “ಹೌದು, ಈ ಯಂತ್ರ ತುಂಬ ಉಪಯುಕ್ತವಾಗಿದೆ. ಯಾವುದೇ ವೆಚ್ಚವಿಲ್ಲದಂತೆ ಇದನ್ನು ಬಳಸಬಹುದೆಂಬುದು ಇದರ ಪ್ಲಸ್ ಪಾಯಿಂಟ್. ಇಂತಹ ಯಂತ್ರಗಳ ಅವಶ್ಯಕತೆ ಖಂಡಿತಾ ಇದೆ” ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಅಭಿಪ್ರಾಯಪಟ್ಟರು. “ಇದರ ಬೆಲೆ ತುಂಬ ಕಡಿಮೆ ಇರುವುದರಿಂದ ಪ್ರತಿ ಒಂದು ವಾರ್ಡ್‍ಗೆ ಒಂದು ಯಂತ್ರದಂತೆ ಇದನ್ನು ಪಾಲಿಕೆಯು ಖರೀದಿಸಬಹುದಾಗಿದೆ” ಎಂದು ಹೋರಾಟಗಾರ ಇಮ್ರಾನ್ ಪಾಷ ಸ್ಥಳದಲ್ಲಿ ಹೇಳಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap