ಹಿರಿಯೂರು:
ಚಿತ್ರದುರ್ಗ ಜಿಲ್ಲಾ ಕಾಂಗ್ರೇಸ್ ಪರಿಶಿಷ್ಠ ಜಾತಿ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಟಿ.ಭೋತೇಶ್ರವರನ್ನು
ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಪರಿಶಿಷ್ಠ ಜಾತಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಸನ್ಯಾನ್ಯ ಹೆಚ್.ಎಫ್.ಜಕ್ಕಪ್ಪನವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂಬುದಾಗಿ ಜಿಲ್ಲಾಧ್ಯಕ್ಷರಾದ ಡಿ.ರಾಜಪ್ಪ ತಿಳಿಸಿದ್ದಾರೆ.
ಹಿರಿಯೂರು ತಾಲ್ಲೂಕು ಓಬಳಾಪುರ ಗ್ರಾಮದ ಭೋತೇಶ್ ಬಿನ್.ತಿಮ್ಮಣ್ಣ ಇವರು ಕಾಂಗ್ರೇಸ್ ಪಕ್ಷಕ್ಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಭಾರತರಾಷ್ಟೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿರವರ ಕೈ ಬಲಪಡಿಸಬೇಕೆಂದು ಹಾಗೂ ಪಕ್ಷದ ನೀತಿ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂಬುದಾಗಿ ಜಿಲ್ಲಾಧ್ಯಕ್ಷರು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








