ಖಾಲಿ ಹುದ್ದೆ ಭರ್ತಿಗೆ ಶೀಘ್ರದಲ್ಲಿಯೇ ಆದೇಶ: ಎಂ ಬಿ ಪಾಟೀಲ್

ಬೆಂಗಳೂರು

    ರಾಜ್ಯದ ಅಭಿಯೋಗ ಮತ್ತು ಸರ್ಕಾರಿ ಕಾರ್ಯಗಳ ಇಲಾಖೆಯಲ್ಲಿ ಖಾಲಿಯಿರುವ 300 ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

     ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಅಭಿಯೋಜನಕಾರಿಗಳ ಸಂಘ ಹಾಗೂ ಅಭಿಯೋಗ ಮತ್ತು ಸರ್ಕಾರಿ ಕಾರ್ಯಗಳ ಇಲಾಖೆಯ 16ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ವ್ಯಾಪ್ತಿಯಲ್ಲಿ 700 ಅಭಿಯೋಜನ ಹುದ್ದೆಗಳಿದ್ದು ಅದರಲ್ಲಿ ಕೇವಲ 400 ಅಧಿಕಾರಿಗಳು ಕೆಲಸ ಮಾಡುತ್ತಿದ್ದು ಖಾಲಿ ಉಳಿದ 300 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

      ರಾಜ್ಯದ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ದಕ್ಷತೆ, ಹೆಗ್ಗಳಿಕೆ ಇದೆ. ಅದೇ ರೀತಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಶಕ್ತಿ ಒದಗಿಸಲು ಕಾರ್ಯಾಂಗವನ್ನು ಸ್ಥಾಪನೆ ಮಾಡಲಾಗಿದೆ. ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿ ಸಹಕಾರವಿಲ್ಲದೆ, ಸರ್ಕಾರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಸೇತುವೆಯಾಗಿ ಅಭಿಯೋಜನ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪಿತಸ್ಥ ಎಂದು ತೀರ್ಮಾನ ಆಗುವವರೆಗೂ ಅಪರಾಧಿ ಎನ್ನುವಂತಿಲ್ಲ.

       ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಅನೇಕ ಸಾಕ್ಷ್ಯಗಳನ್ನು ನೀಡಿ, ವಿಚಾರಣೆ ನಡೆಸಿ ಶಿಕ್ಷೆ ಕೊಡಿಸುವ ಕೆಲಸ ಅಭಿಯೋಗ ಇಲಾಖೆ ಮಾಡುತ್ತಿದೆ. ಅಷ್ಟೇ ಅಲ್ಲದೆ, ಇಲಾಖೆಯಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಲಬೇಕಾದ ಅಗತ್ಯವಿದೆ ಹಾಗೂ ಹೆಚ್ಚುತ್ತಿರುವ ಅಪರಾಧಿ ಪ್ರಕರಣಗಳನ್ನು ಇಳಿಸಲು ಸರ್ಕಾರದ ಪಾತ್ರವೂ ಇದೆ. ಹೀಗಾಗಿ, ಈ ಇಲಾಖೆಯ ಬೇಡಿಕೆಗಳನ್ನು ಈಡೇರಿಸಲು ಬದ್ಧ ಎಂದರು.

       ಹಿರಿಯ ನ್ಯಾಯವಾದಹಾಕು?ನವೀಯತೆ, ಸಾಮಾಜಿಕ ಜವಾಬ್ದಾರಿ ಹೆಚ್ಚಾದಂತೆ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತದೆ.ಯಾವುದೇ ಪ್ರಕರಣವಿದ್ದರೂ ಅದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ, ಸೂಕ್ತ ಸಾಕ್ಷಾಧಾರಗಳಿಂದ ವಾದ ಮಂಡಿಸಬೇಕು.ಅದೇ ರೀತಿ, ಅಭಿಯೋನಜನಾಧಿಕಾರಿಗಳು ವಾದ ಮಂಡಿಸುವಾಗ ತಪ್ಪುಗಳಿದ್ದರೆ ತಿದ್ದಿ ಮುಂದುವರಿಯಬೇಕು ಎಂದು ನುಡಿದರು.ಈ ಸಂದರ್ಭದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಅಚಾರ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link