ಹರಿಹರ
ಗುರುವಾರದಂದು ಹೊಸಪೇಟೆಯಿಂದ ಹರಿಹರ ನಗರಕ್ಕೆ ರೈಲು ಚಾಲನೆಗೆ ಹಸಿರು ನಿಶಾನೆ ತೋರಲಿದೆ. ನಿಲ್ದಾಣದಲ್ಲಿ ಬೆಳಗ್ಗೆ 11ಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಅ.18ರಿಂದ ಟ್ರೇನ್ ನಂ: 56529 ಹರಿಹರ-ಕೊಟ್ಟೂರು-ಹೊಸಪೇಟೆ ಮತ್ತು ಟ್ರೇನ್ ನಂ. 56530 ಹೊಸಪೇಟೆ-ಕೊಟ್ಟೂರು-ಹರಿಹರಕ್ಕೆ ದಾವಣಗೆರೆ ಮಾರ್ಗವಾಗಿ ನಿತ್ಯ ಸಂಚರಿಸಲಿದೆ.
ನಾಲ್ಕು ದಶಕದ ನಂತರ ಸಾರ್ವಜನಿಕ ಆಶೆಯದಂತೆ ಹೊಸಪೇಟೆ – ಹರಿಹರ ಮಾರ್ಗ ರೈಲು ಸಂಚಾರಿಸುವುದು ಎಲ್ಲಾರಿಗೂ ಖುಷಿಯ ವಿಚಾರ, ಸಾರ್ವಜನಿಕರಿಗೆ ಕಡಿಮೆ ಖರ್ಚಿನಲ್ಲಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಬರಲಿಕ್ಕೆ ಅನುಕೂಲವಾಗಲಿದೆ.
ಇಲ್ಲಿನ ಜನರಿಗೆ ಚಿಗಟೇರಿ ನಾರದಮುನಿ, ಗುರು ಕೊಟ್ಟೂರೇಶ್ವರ, ಜಂಭುಲಿಂಗೇಶ್ವರ ದೇವಸ್ಥಾನಕ್ಕೆ ರೈಲು ಬರಲು ಈ ರೈಲು ಭಾವನಾತ್ಮಕ ಕೊಂಡಿಯಾಗಿದೆ. ಹರಿಹರದಿಂದ ಹೊಸಪೇಟೆಯ ವರೆಗಿನ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರಲು, ಪ್ರಯಾಣಿಕರು ಬೇರೆ ಬೇರೆ ಸ್ಥಳಗಳಿಗೆ ತೆರಳಲು, ಇತರೆ ಅಭಿವೃದ್ಧಿಗಳಿಗೆ ಕಾರಣವಾಗಲಿದೆ.
ಈ ಭಾಗದ ರೈತರಿಗೆ ಬಡವರಿಗೆ ಜನ ಸಾಮಾನ್ಯರಿಗೆ ಅತ್ಯಂತ ಅನುಕೂಲವಾಗುತ್ತದೆ ಶತಮಾನದ ಈ ರೈಲು ಮಾರ್ಗ ಬ್ರಿಟಿಷ್ ನವರ ಕಾಲದಲ್ಲಿಯೇ ಶುರುವಾಗಿದ್ದಂತಹದ್ದು. ಅನೇಕ ಕಾರಣದಿಂದ ನೆನೆಗುದಿಗೆ ಬಿದ್ದಿದ್ದ ರೈಲು ಯೋಜನೆ ಜನರ ಹೋರಾಟದ ಫಲವಾಗಿ ರೈಲು ಪುನಃ ಸಂಚಾರ ಪ್ರಾರಂಭ ಆಗಿರುವುದು ಒಳ್ಳೆಯ ಬೆಳವಣಿಗೆ
ಹರಿಹರ – ಹೊಸಪೇಟೆ
ಹರಿಹರದಿಂದ ಬೆಳಗ್ಗೆ 7.20ಕ್ಕೆ ಹೊರಟು, 7.25ಕ್ಕೆ ಅಮರಾವತಿ ಕಾಲೋನಿ, 7.45ಕ್ಕೆ ದಾವಣಗೆರೆ, 8.03ಕ್ಕೆ ಅಮರಾವತಿ ಕಾಲೋನಿ, 8.22ಕ್ಕೆ ತೆಲಗಿ, 8.43 ಹರಪನಹಳ್ಳಿ, 9.05ಕ್ಕೆ ಬೆಣ್ಣೆಹಳ್ಳಿ, 9.26ಕ್ಕೆ ಕೊಟ್ಟೂರು, 9.50 ಮಾಲವಿ, 10.08 ಹಗರಿಬೊಮ್ಮನಹಳ್ಳಿ, 10.44 ಮರಿಯಮ್ಮನಹಳ್ಳಿ, 11ಕ್ಕೆ ವ್ಯಾಸ ಕಾಲನಿ, 11.16ಕ್ಕೆ ವ್ಯಾಸನಕೆರಿ, 11.32ಕ್ಕೆ ತುಂಗಭದ್ರಾ ಡ್ಯಾಂ, ಮಧ್ಯಾಹ್ನ 12.10ಕ್ಕೆ ಹೊಸಪೇಟೆ ತಲುಪಲಿದೆ.
ಹೊಸಪೇಟೆ – ಹರಿಹರ
ಹೊಸಪೇಟೆಯಿಂದ ಮಧ್ಯಾಹ್ನ 12.55ಕ್ಕೆ ಹೊರಡುವ ರೈಲು, 1.05ಕ್ಕೆ ತುಂಗ್ರಭದ್ರಾ ಡ್ಯಾಂ, 1.09ಕ್ಕೆ ವ್ಯಾಸನಕೇರಿ, 1.19 ವ್ಯಾಸ ಕಾಲನಿ, 1.34 ಮರಿಯಮ್ಮನಹಳ್ಳಿ, 1.53 ಹಂಪಾಪಟ್ಟಣ, 2.12 ಹಗರಿಬೊಮ್ಮನಹಳ್ಳಿ, 2.32 ಮಾಲವಿ, 3.02 ಕೊಟ್ಟೂರು, 3.32 ಬೆಣ್ಣೆಹಳ್ಳಿ, 3.45 ಹರಪನಹಳ್ಳಿ, 4.10 ತೆಲಗಿ, 5.01 ಅಮರಾವತಿ ಕಾಲೋನಿ, 5.25ಕ್ಕೆ ದಾವಣಗೆರೆ, 5.44ಕ್ಕೆ ಅಮರಾವತಿ ಕಾಲೋನಿ, 6.30ಕ್ಕೆ ಹರಿಹರ ತಲುಪಲಿದೆ.
ಹೊಸಪೇಟೆಯಿಂದ ದಾವಣಗೆರೆಗೆ 155 ಕಿಮೀ ಅಂತರವಿದ್ದು, ಹೊಸಪೇಟೆಯಿಂದ ವ್ಯಾಸ ಕಾಲೋನಿಗೆ 10 ರೂ., ಮರಿಯಮ್ಮನ ಹಳ್ಳಿಗೆ 10 ರೂ., ಹಂಪಾಪಟ್ಟಣಕ್ಕೆ 10 ರೂ., ಹಗರಿಬೊಮ್ಮನಹಳ್ಳಿಗೆ 10 ರೂ., ಮಾಲವಿಗೆ 15 ರೂ., ಕೊಟ್ಟೂರಿಗೆ 20 ರೂ., ಬೆಣ್ಣಿಹಳ್ಳಿಗೆ 25 ರೂ., ಹರಪನಹಳ್ಳಿಗೆ 25 ರೂ., ತೆಲಗಿಗೆ 30 ರೂ., ದಾವಣಗೆರೆ, ಅಮರಾವತಿ ಕಾಲೋನಿ ಮತ್ತು ಹರಿಹರಕ್ಕೆ 35 ರೂ.ನಿಗದಿಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
