ಹನಗವಾಡಿ ಹಾಲು ಒಕ್ಕೂಟಕ್ಕೆ ನೂತನ ಅಧ್ಯಕ್ಷರ ಆಯ್ಕೆ

ಹರಿಹರ:

        ಹನಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಚುನಾವಣ ಅಧಿಕಾರಿ ನಿವೇದಿತ ಅವರ ನೇತೃತ್ವದಲ್ಲಿ ಅವಿರೋಧವಾಗಿ ಬುಧುವಾರ ಆಯ್ಕೆ ಮಾಡಲಾಯಿತು.

        ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿನ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ಅಡಿಯಲ್ಲಿ ನಡೆಯುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬುಧುವಾರದಂದು ಚುನಾವಣಾಧಿಕಾರಿ ನಿವೇದಿತ ಅವರ ನೇತೃತ್ವದಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಜಗದಿಶಪ್ಪ ಬಣಕಾರ್, ಉಪಾಧ್ಯಕ್ಷರಾಗಿ ವೀರಮ್ಮ ಕೋಂ ಬಸವರಾಜಪ್ಪ ರಾಯಾಪುರದ ಅವರನ್ನು ಆಯ್ಕೆ ಮಾಡಲಾಯಿತು.

         ಸಂಘದ ನೂತನ ನಿರ್ದೇಶಕರನ್ನಾಗಿ ಡಿ.ನಾಗರಾಜಪ್ಪ, ಕೆ.ವಿ ರುದ್ರುಮುನಿ, ಎಸ್. ವೀರಪ್ಪ, ಕೆ. ಜಯಪ್ಪ, ಎಚ್.ವಿ ಗುರು, ಬಿ.ಜೆ ಬಸವನಗೌಡ, ಎಚ್.ಸಂತೋಷ್, ಬಿ.ಆರ್ ಮಂಜುಳಾ, ಬಸವಂತಪ್ಪ ಭೋವಿ, ಬಿ. ಪರುಶುರಾಮ್ ಅವರನ್ನು ಸಂಘದ ನಿರ್ದೇಕರನ್ನಾಗಿ ನೇಮಕ ಮಾಡಲಾಯಿತು. ಆಯ್ಕೆಯ ನಂತರ ನೂತನ ಪದಾಧಿಕಾರಿಗಳಿಗೆ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.

         ಸಂಘದ ಅಧ್ಯಕ್ಷರಾದ ಜಗದಿಶಪ್ಪ ಬಣಕಾರ್ ಮಾತನಾಡಿ, ಗ್ರಾಮದ ಪ್ರತಿಯೊಬ್ಬ ಹಾಲು ಉತ್ಪಾದಕರ ಸಹಕಾರದಿಂದ ನಮ್ಮ ಊರಿಗೆ ಬಿ.ಎಂ.ಸಿ ನಿರ್ಮಾಣವಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ. ರಾಜ್ಯ ಒಕ್ಕೂಟದಿಂದ ರೈತರಿಗೆ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ಕೊಡಿಸುವಲ್ಲಿ ನಾನು ಶ್ರಮಿಸುತ್ತೇನೆ. ಸಂಘದ ಸದಸ್ಯರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉತ್ತಮ ಕೆಲಸ ಮಾಡುವುದರ ಮೂಲಕ ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಡೈರಿಯ ಕಾರ್ಯದರ್ಶಿ ಬಿ. ಸುಮಾ, ಹಾಲು ಪರೀಕ್ಷಕ ಬಿ. ದೇವೇಂದ್ರಪ್ಪ, ಸಿಬ್ಬಂದಿಗಳಾದ ಡಿ. ಪವನ್, ಬಿ. ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link