ಬರಗಾಲದಲ್ಲಿ ರೈತರಿಗೆ ಆಸರೆಯಾಗಲು ಸರ್ಕಾರದಿಂದ ಹೊಸ ಯೋಜನೆ…!!!

ಬೆಂಗಳೂರು:

            ಕರ್ನಾಟಕ ಸತತ 15 ವರ್ಷಗಳಿಂದ ತರೆದೋರಿರುವ ಬರಗಾಲದಿಂದ ರೈತರನ್ನು ಕಾಪಾಡಲು ಮೈತ್ರಿ ಸರ್ಕಾರ ಇಂದು ಜಲಾಮೃತಕ ಯೋಜನೆಗೆ ಚಾಲನೆ ನೀಡಿದೆ.   

        ರಾಜ್ಯದಲ್ಲಿ ತಲೆದೋರಿರುವ ಬರಗಾಲದ ನಿರ್ವಹಣೆಗೆಂದು ಸರ್ಕಾರ 2019ನ್ನು ಜಲವರ್ಷ ಎಂದು ಘೋಷಿಸಿದೆ ನೀರಿನ ಸಂರಕ್ಷಣೆಗೆ ಜಲಾಮೃತ ಯೋಜನೆ ತಂದಿದೆ ಈ ಯೋಜನೆಗೆ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರು ಚಾಲನೆ ನೀಡಿದರು.

         ನೀರಿನ ಅಗತ್ಯ, ಸಂರಕ್ಷಣೆ, ನೀರಿನ ಸದ್ಭಳಕೆ ಮತ್ತು ಹಸಿರೀಕರಣದ ಬಗ್ಗೆ ಜಲಾಮೃತ ಯೋಜನೆಯಡಿ ಜನರಿಗೆ ಅರಿವು ಮೂಡಿಸಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ 600 ಕೋಟಿ ರೂಪಾಯಿ ಮೀಸಲಿಟ್ಟಿದೆ. ಮುಂದಿನ ಎರಡು ವರ್ಷಗಳಲ್ಲಿ ಸುಮಾರು 14 ಸಾವಿರ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗುವುದು ಎಂದರು.

           ಜಿಲ್ಲೆಗಳಲ್ಲಿ ನೆರೆ ಪ್ರವಾಹ ತಲೆದೋರಿ ರೈತರಿಗೆ ಅಪಾರ ನಷ್ಟವುಂಟಾಗಿತ್ತು. ಅದೇ ಸಮಯದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಬರಗಾಲ ತರೆದೋರಿತ್ತು. ಈ ವರ್ಷ ಬೇಸಿಗೆಯಲ್ಲಿ ಸುಮಾರು 800 ಗ್ರಾಮ ಪಂಚಾಯತ್ ಗಳಿಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಅಂತರ್ಜಲ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇನ್ನು ಕೆಲ ಸ್ಥಳಗಳಲ್ಲಿ ನೀರು ಸಿಗಬೇಕಾದರೆ 1,500 ಅಡಿಗಳವರೆಗೆ ಬೋರ್ ವೆಲ್ ಕೊರೆಯಬೇಕಾಗುತ್ತದೆ. ಆದರೂ ಕೂಡ ನೀರು ಸಿಗುವುದಿಲ್ಲ. ಬರಗಾಲದಲ್ಲಿ ನಾವು ಜಾನುವಾರುಗಳಿಗೆ ಮೇವು ಒದಗಿಸಬಹುದು, ಟ್ಯಾಂಕರ್ ನಲ್ಲಿ ಕುಡಿಯುವ ನೀರು ಒದಗಿಸಬಹುದು, ಆದರೆ ಇವೆಲ್ಲಾ ತಾತ್ಕಾಲಿಕ ವ್ಯವಸ್ಥೆಗಳು. ಆದರೆ ದೀರ್ಘಾವಧಿಯಲ್ಲಿ ಅಂತರ್ಜಲ ನೀರಿನ ಅಗತ್ಯವಿದೆ. ಅದಕ್ಕಾಗಿ ಜಲಾಮೃತ ಯೋಜನೆಯನ್ನು ಆರಂಭಿಸಲಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap