ನಾಳೆಯಿಂದ ಟ್ರಾಫಿಕ್ `ಹೊಸ ದಂಡ’ ಜಾರಿ

ತುಮಕೂರು
    ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಅತ್ಯಧಿಕ ದಂಡ ವಿಧಿಸಿ ಸರ್ಕಾರ ಹೊಸ ನಿಯಮಾವಳಿಯನ್ನು ಜಾರಿಗೆ ತಂದಿದ್ದು, ಆ ಹೊಸ ನಿಯಮವು ತುಮಕೂರು ನಗರದಲ್ಲಿ ಸೆ.8ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಾಗೂ ದೇಶಾದ್ಯಂತ ಈಗಾಗಲೇ ಈ ಹೊಸ ಕಾನೂನು ಚಾಲನೆಗೆ ಬಂದಿದ್ದು, ತುಮಕೂರು ನಗರದಲ್ಲಿ ಇದೀಗ ಚಾಲನೆಗೆ ಬರಲಿದೆ. ತುಮಕೂರು ನಗರದ ಟ್ರಾಫಿಕ್ ಪೊಲೀಸರ ಬಳಿ ಇರುವ ಉಪಕರಣಗಳನ್ನು ಹೊಸ ದಂಡಶುಲ್ಕಕ್ಕೆ ಪರಿವರ್ತನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಈಗ ಇದು ಜಾರಿಗೆ ಬರುತ್ತಿದೆ.
ಯಾವುದಕ್ಕೆ ಎಷ್ಟು ದಂಡ?
   ಹೊಸ ದಂಡದ ಪ್ರಕಾರ ಯಾವ ಯಾವ ಪ್ರಕರಣಗಳಿಗೆ ಎಷ್ಟೆಷ್ಟು ದಂಡ ಎಂಬ ವಿವರ ಈ ಕೆಳಕಂಡಂತಿದೆ:- 
1) ಹೆಲ್ಮೆಟ್ ಇಲ್ಲದೆ ವಾಹನ ಚಾಲನೆಗೆ-1000 ರೂ. ದಂಡ ಮತ್ತು 3 ತಿಂಗಳು ಲೈಸೆನ್ಸ್ ರದ್ದು, 2)ಲೈಸೆನ್ಸ್ ಇಲ್ಲದೆ ವಾಹನ ಚಾಲನೆ-5000 ರೂ, 3) ವಾಹನ ಇನ್‍ಶೂರೆನ್ಸ್ ಇಲ್ಲದಿದ್ದರೆ- 2000 ರೂ, 4)ದ್ವಿಚಕ್ರ ವಾಹನ ಓವರ್‍ಲೋಡ್- 2000 ರೂ., 5)ಮದ್ಯಪಾನ ಮಾಡಿ ವಾಹನ ಚಾಲನೆ- 10000 ರೂ, 6)ಸೀಟ್‍ಬೆಲ್ಟ್ ಭರಿಸದಿದ್ದರೆ- 1000 ರೂ., 7)ಮಿತಿ ಮೀರಿದ ವೇಗದ ಚಾಲನೆ-2000 ರೂ., 8)ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ- 1000 ರೂ., 9)ಸಂಚಾರ ನಿಯಮ ಉಲ್ಲಂಘನೆ- 500 ರೂ., 10)ಲೈಸೆನ್ಸ್ ರದ್ದಾದರೂ ವಾಹನ ಚಾಲನೆ- 10000 ರೂ, 11) ಪರವಾನಗಿ ಇಲ್ಲದೆ ವಾಹನ ರಸ್ತೆಗಿಳಿದರೆ- 10000 ರೂ, 12)ನೋ ಪಾರ್ಕಿಂಗ್‍ನಲ್ಲಿ ವಾಹನ ನಿಲುಗಡೆಯಾದರೆ- 1000 ರೂ., 13)ಪೊಲೀಸರ ಜೊತೆ ವಾಗ್ವಾದ ಮಾಡಿದರೆ- 2000 ರೂ., 14)ಹೆಚ್ಚು ಪ್ರಯಾಣಿಕರ ಸಾಗಣೆ- 1000 ರೂ., 15)ಮಿತಿಗಿಂತ ಮೀರಿದ ಹೆಚ್ಚು ಸರಕು ಸಾಗಣೆ- 20000 ರೂ., 16)ಅಪಘಾತಕ್ಕೆ ಎಡೆಮಾಡುವ ರೀತಿ ಚಾಲನೆ-5000 ರೂ., 17)ತುರ್ತುಸೇವೆ ವಾಹನಕ್ಕೆ ದಾರಿ ಬಿಡದಿದ್ದರೆ- 10000 ರೂ., 18)ವಾಹನದ ಎï.ಸಿ. ಇಲ್ಲದಿದ್ದರೆ- 2000 ರೂ., 19)ಮಕ್ಕಳು ವಾಹನ ಚಾಲನೆ ಮಾಡಿದರೆ ಪೋಷಕರು/ವಾಹನ ಮಾಲೀಕರಿಗೆ- 25000 ರೂ. ದಂಡ, 3 ವರ್ಷ ಜೈಲು ವಾಸ, ವಾಹನ ನೋಂದಣಿ ರದ್ದು. – ಈ ರೀತಿ ದಂಡದ ಪಟ್ಟಿ ಇದೆ ಎಂದು ಮೂಲಗಳು ತಿಳಿಸಿವೆ.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link