ಜೂ.18ರಿಂದ ವೇದಾಗಮ ಸಂಸ್ಕೃತ ಪಾಠಶಾಲೆ ಆರಂಭ

ದಾವಣಗೆರೆ:

      ಕರ್ನಾಟಕದ ಕೇಂದ್ರಬಿಂದು ಆಗಿರುವ ದಾವಣಗೆರೆಯಲ್ಲಿ ಶ್ರೀಶೈಲ ಮಂದಿರದಲ್ಲಿ ಶ್ರಿಜಗದ್ಗುರು ಪಂಡಿತರಾಧ್ಯ ವೇದಾಗಮ ಸಂಸ್ಕೃತ ಪಾಠಶಾಲೆಯನ್ನು ಜೂನ್ 18ರಿಂದ ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದು ಶ್ರೀಶೈಲ ಜಗದ್ಗುರು ಡಾ.ಶ್ರೀ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

      ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಾಗಮ ಅಧ್ಯಯನ ಮಾಡುವ ನೈತಿಕ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ಅದಕ್ಕೆ ಬೇಕಾಗಿರುವ ಆಚಾರ-ವಿಚಾರಗಳನ್ನು ಸಂಪಾದಿಕೊಳ್ಳಬೇಕಷ್ಟೇ. ವೇದ-ಆಗಮ ಸಂಸ್ಕೃತಿಯು ಭಗವಂತನಿಂದ ಬಂದಿರುವ ಜ್ಞಾನ ರಾಶಿಯಾಗಿದೆ. ಇದನ್ನು ಕಲಿಸಬೇಕಾಗಿರುವುದು ಎಲ್ಲ ಮಠಗಳ ಆದ್ಯ ಕರ್ತವ್ಯವಾಗಬೇಕು ಎಂದರು.

    ಪ್ರಸ್ತುತ ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ, ನಮ್ಮ ಪ್ರಾಚೀನ ವಿದ್ಯೆಯನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಪರಂಪರೆಯ ವಿದ್ಯೆಯನ್ನು ಕಲಿಸುವ ಉದೇಶದಿಂದ ಶ್ರೀಶೈಲ ಜಗದ್ಗುರುಗಳ ದ್ವಯರ ಕತೃ ಗದ್ದುಗೆ ಇರುವ, 2ನೇ ಶ್ರೀಶೈಲ ಎಂದೇ ಖ್ಯಾತಿಯಾಗಿರುವ ದಾವಣಗೆರೆಯ ಶ್ರೀಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಶ್ರಿಜಗದ್ಗುರು ಪಂಡಿತರಾಧ್ಯ ವೇದಾಗಮ ಸಂಸ್ಕøತ ಪಾಠಶಾಲೆಯನ್ನು ಜೂನ್ 18ರಿಂದ ವಿದ್ಯುಕ್ತವಾಗಿ ಆರಂಭಿಸಲಾಗುವುದು ಎಂದರು.

       ಆರಂಭದ ವರ್ಷದಲ್ಲಿ 50 ವಿದ್ಯಾರ್ಥಿಗಳಿಗೆ ವೇದದ್ಯಾಯನ ಮಾಡಲು ಅವಕಾಶ ಕಲ್ಪಿಸಲಾಗುವುದು. ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ಅಧ್ಯಯನ ವ್ಯವಸ್ಥೆ ಕಲ್ಪಿಸಲಾಗಿದೆ. ನುರಿತ ವೇದ ವಿದ್ವಾಂಸರನ್ನು ಈಗಾಗಲೇ ನೇಮಿಸಲಾಗಿದೆ. ಪಾಠಶಾಲೆಗೆ ಯಾವುದೇ ಜಾತಿ, ಧರ್ಮದ ವಿದ್ಯಾರ್ಥಿಗಳು ಸೇರಬಹುದು. ಆದರೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಲಿಂಗಧಾರಿಗಳಾಗಿರಬೇಕು. ಲಿಂಗಧಾರಣೆ ಜಾತಿ ಕುರುಹಲ್ಲ. ಬದಲಿಗೆ, ಇದು ಸಂಸ್ಕಾರದ ಕುರುಹು ಎಂದರು.

       ಪಾಠಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು 7ನೇ ತರಗತಿಯಿಂದ 3 ವರ್ಷಗಳ ಕಾಲ ವೈದಿಕ ಕಲಿಯಲು ಅವಕಾಶವಿದೆ. ಈಗಾಗಲೇ ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ಆಧುನಿಕ ವೇದ ವಿದ್ಯಾ ಕೇಂದ್ರ ಸ್ಥಾಪಿಸಲಾಗಿದ್ದು, ಅನೇಕ ವಿದ್ಯಾರ್ಥಿಗಳು ವ್ಯಾಸಂಗದಲ್ಲಿದ್ದಾರೆಂದು ಹೇಳಿದರು.

         ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಧರ್ಮದ ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸಬೇಕೆಂಬ ಉದ್ದೇಶದಿಂದ ಇಲ್ಲಿ ವೇದಾಗಮ ಸಂಸ್ಕøತ ಪಾಠಶಾಲೆ ಆರಂಭಿಸಲಾಗುತ್ತಿದ್ದು, ಈ ಭಾಗದಲ್ಲಿರುವ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

      ಆಸಕ್ತ ವಿದ್ಯಾರ್ಥಿಗಳು ಜೂನ್ 15ರೊಳಗೆ ದಾವಣಗೆರೆ ಶ್ರಿಶೈಲ ಮಠದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅಥವಾ ಹೆಚ್ಚಿನ ಮಾಹಿತಿಗೆ ಮೊ: 9986922077, 9591797204 ಸಂಪರ್ಕಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಆವರಗೊಳ್ಳ ಓಂಕಾರ ಶ್ರೀ, ಎಂ.ರ್. ಗುರುಮಠ್, ಅನಿಲ್‍ಕುಮಾರ್, ನಟರಾಜ್, ಎನ್.ಎಂ. ಮುರುಗೇಶ್, ಸಿದ್ದೇಶ್ ಕೊಟೀಹಾಳ್, ಉಮೇಶ್ ಪಟೇಲ್, ಆರ್.ಟಿ. ಪ್ರಶಾಂತ್, ಬನ್ನಯ್ಯಸ್ವಾಮಿ ಎಂ. ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link