ಕಾನೂನುಗಳಿಗೆ ಬಲ ತುಂಬುವ ಕೆಲಸ ಆಗಬೇಕಿದೆ : ಕುಮಾರಸ್ವಾಮಿ

ಬೆಂಗಳೂರು

   ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆಸುಪ್ರಿಂಕೋರ್ಟ್ ನೀಡಿರುವ ತೀರ್ಪು ನೀ ಅತ್ತಂತೆ ಮಾಡು ನಾ ಹೊಡೆದಂತೆ ಮಾಡುತ್ತೇನೆ ಎನ್ನುವಂತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

     ಬುಧವಾರ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅನರ್ಹರ ಅರ್ಜಿಯನ್ನು ಎತ್ತಿ ಹಿಡಿದಿದ್ದು, ಮುಂದಿನ ವಿಧಾನಸಭೆವರೆಗೆ ಸ್ಪರ್ಧಿಸಬಾರದೆಂಬ ಸ್ಪೀಕರ್ ಅವರ ಆದೇಶವನ್ನು ಸರಳೀಕರಣಗೊಳಿಸಿದೆ.ಈಗಾಗಲೇ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ.ದೇಶದಲ್ಲಿ ಕಾನೂನುಗಳನ್ನು ರೂಪಿಸಲಾಗುತ್ತಿದೆಯೇ ಹೊರತು ಕಾನೂನಿನಗೆ ನಿಯಮಗಳಿಗೆ ಬಲತುಂಬುವ ಕೆಲಸ ಆಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

      ನಿಜಕ್ಕೂ ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಹುರುಳಿದೆಯೇ ಎಂಬ ಪ್ರಶ್ನೆ ಹುಟ್ಟಿದ್ದು, ಪಕ್ಷಾಂತರ ನಿಷೇಧಕಾನೂನನ್ನು ರದ್ದುಗೊಳಿಸಬೇಕು. ಪಕ್ಷಾಂತರ ನಿಷೇಧ ಕಾಯಿದೆ ಕಾನೂನು ಇದ್ದು ಸತ್ತಂತಾಗಿದೆ.ಇದು ಬಲವಿಲ್ಲದ ಕಾನೂನು ಎಂಬುದು ಸುಪ್ರೀಂಕೋರ್ಟ್ ತೀರ್ಪಿನಿಂದ ಸ್ಪಷ್ಟವಾಗಿದೆ.ಒಂದು ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ನಂತರ ಜನರ ಅಭಿಪ್ರಾಯವನ್ನೂ ಸಂಗ್ರಹಿಸದೇ ಪಕ್ಷದೊಂದಿಗೆ ಚರ್ಚಿಸದೇ ಪಕ್ಷಾಂತರ ಮಾಡಲಾಗುತ್ತಿದೆ.ಪ್ರಧಾನಿ ನರೇಂದ್ರ ಈಗಾಗಲೇ ಆರ್ಟಿಕಲ್370 ರದ್ದು ಮಾಡಿ ಹೊಸ ಐತಿಹಾಸಿಕ ದಾಖಲೆ ಬರೆದಿದ್ದಾರೆ.ಅದರಂತೆ ಸಾಮಾನ್ಯ ನಾಗರೀಕ ಕಾನೂನು ತರಲು ಹೊರಟಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಅಮಿತ್ ಷಾ ಹಾಗೂ ಮೋದಿ ಪಕ್ಷಾಂತರ ನಿಷೇಧ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

      ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಜೆಡಿಎಸ್ ಬಿಜೆಪಿ ಜೊತೆ ಒಳೊಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿರುವುದು ಸರಿಯಲ್ಲ.ಹಿಂದೆಯೂ ಬಿಜೆಪಿಯ ಬಿ ಟೀಮ್ ಎಂದು ಹೇಳುವ ಮೂಲಕ ಬಿಜೆಪಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಬರಲು ಕಾರಣರಾಗಿದ್ದರು.ಈಗ ಮತ್ತೆ ಜೆಡಿಎಸ್ ಮೇಲೆ ಅಪನಂಬಿಕೆ ಸೃಷ್ಟಿಸುವ ಮೂಲಕ ಸಿದ್ದರಾಮಯ್ಯ ಬಿಜೆಪಿಗೆ ಬಾಹ್ಯ ಬೆಂಬಲ ನೀಡುತ್ತಿದ್ದಾರೆ.

      ಬಿಜೆಪಿಯ ಸಾಧನೆ ಏನು ಎಂದು ಜೆಡಿಎಸ್ ಒಪ್ಪಂದ ಮಾಡಿಕೊಳ್ಳಲು ಹೋಗಲಿ.2008 ರಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲೂ ಸಿದ್ದರಾಮಯ್ಯರೇ ಕಾರಣ.ಅಂದಿನ ಉಪಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧೆ ಒಡ್ಡಿದ್ದು ಜೆಡಿಎಸ್ ಪಕ್ಷವೇ ಹೊರತು ಕಾಂಗ್ರೆಸ್ ಅಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.ಹದಿನಾಲ್ಕು ತಿಂಗಳಲ್ಲಿ ಸಿದ್ದರಾಮಯ್ಯ ಮಾಡಿದಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದೇನೆ.ಹೀಗಾಗಿ ಜನರು ಸಿದ್ದರಾಮಯ್ಯಗೆ ನೀಡಿದ ಕೂಲಿಗಿಂತಲೂ ಹೆಚ್ಚಿನ ಕೂಲಿ ತಮಗೆ ನೀಡಬೇಕು ಎಂದರು.

      ಬೆಳಗಾವಿಯಲ್ಲಿ ನೆರೆ ಪರಿಹಾರ ಕೆಲಸದಲ್ಲಿ ಅಕ್ರಮ ನಡೆಸುತ್ತಿದೆ.ರೈತರ ಆತ್ಮಹತ್ಯೆ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತೇನೆಯೇ ? ಸಾಧ್ಯವಿಲ್ಲ.ದೇಶದ ಜನರ ಜೊತೆ ಚೆಲ್ಲಾಟವಾಡುತ್ತಿರುವ ಬಿಜೆಪಿ ಯ ಜೊತೆಗಾಗಲೀ ಕಾಂಗ್ರೆಸ್ ಜೊತೆಗಾಗಲೀ ಮತ್ತೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ.ಉಪಚುನಾವಣಾ ಫಲಿತಾಂಶದ ನಂತರದ ರಾಜಕೀಯ ಪರಿಸ್ಥಿತಿ ಬಗ್ಗೆ ಭವಿಷ್ಯ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಒತ್ತಿ ಹೇಳಿದರು.

       ಉಪಚುನಾವಣೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿಗಿಂತಲೂ ಜೆಡಿಎಸ್ ಬಹಳ ಗಂಭೀರವಾಗಿ ಪರಿಗಣಿಸಿದೆ.ಮೂರು ಕ್ಷೇತ್ರಗಳನ್ನು ಪಕ್ಷ ಅನರ್ಹರಿಂದ ಕಳೆದುಕೊಂಡಿರಬಹುದು.ಆದರೆ ಜೆಡಿಎಸ್ ಪಕ್ಷಕ್ಕಿನ್ನೂ ಶಕ್ತಿ ಇದೆ.ಬುಧವಾರ ಸಂಜೆಯೊಳಗೆ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗುವುದು ಎಂದರು.

       ಜೆಡಿಎಸ್ ಶಾಸಕರ ಮನೆಬಾಗಿಲನ್ನು ತಟ್ಟುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.ಕಾಂಗ್ರೆಸ್ ನಲ್ಲಿ ಶಕ್ತಿಯಿದ್ದಿದ್ದೇ ಅದರೆ ಕಾಗವಾಡದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ರಾಜು ಕಾಗೆ ಅವರನ್ನು ಏಕೆ ಕರೆದುಕೊಂಡು ಬರುತ್ತಿದ್ದರು.? ಎಂದು ಸಿದ್ದರಾಮಯ್ಯ ಅವರನ್ನು ಕುಟುಕುವ ಪ್ರಯತ್ನ ಮಾಡಿದರು.

       ಜಿಎಸ್ ಟಿ,ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರತಿಭಟನೆ ಮಾಡುವ ಸಿದ್ದರಾಮಯ್ಯ ಏಕೆ ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾತನಾಡುತ್ತಿಲ್ಲ. 29 ಸಾವಿರ ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ಬಡವರ ಮನೆಗೆ ಇಟ್ಟಿದ್ದರು.ಸಿದ್ದರಾಮಯ್ಯ ಆರ್ಥಿಕತೆ ಬಗ್ಗೆ ಮಾತನಾಡುತ್ತಾರೆ.ಬರೀ ಘೋಷಣೆ ಮಾಡುವ ಚುನಾವಣೆಗೆ ಮತ ಪಡೆಯಲು ಬರೀ ಬಾಯಿಗೆ ಬಂದಂತೆ ಘೋಷಣೆ ಮಾಡುವ ಸಿದ್ದರಾಮಯ್ಯ ಅಭಿವೃದ್ಧಿ ಯೋಜನೆಗಳಿಗೆ ಸರಿಯಾದ ಹಣವನ್ನೇಇಡಲಿಲ್ಲ.ಸರಿಯಾದ ಲೆಕ್ಕಾಚಾರವಿಲ್ಲದೇ ಯೋಜನೆ ರೂಪಿಸಿದ್ದಾರೆ.ಇವರು ಘೋಷಿಸಿದ್ದ ಕಾರ್ಯಕ್ರಮಗಳ ಜಾರಿಗೆ ಇನ್ನೂ ಹತ್ತು ವರ್ಷಗಳೂ ಕಳೆದರೂ ಹಣ ಸಾಕಾಗದು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

        ಉಪಚುನಾವಣೆಯಲ್ಲಿ ಜನರು ಜಾತಿಬಿಟ್ಟು ಚುನಾವಣೆ ಮಾಡಬೇಕು.ಬೆಳಗಾವಿ ಜನರಿಗೆ ಬದುಕು ಬೇಕೋ ಅಥವಾ ಜಾತಿ ಬೇಕೋ ಎಂಬುದನ್ನು ನಿರ್ಧಿರಿಸಲಿ.ಮತ್ತೊಮ್ಮೆ ಜನರಿಗೆ ಪರೀಕ್ಷೆ ಒಡ್ಡುತ್ತೇನೆ.ಗೋಕಾಕ್ ಸಾಹುದಾರ್ ರಿಗೂ ನಮಗೂ ವ್ಯತ್ಯಾಸವಿದೆ. ಯಾವುದೇ ಒಪ್ಪಂದವಿಲ್ಲ.ಉಪಚುನಾವಣೆ ಮೂರು ಪಕ್ಷಗಳಿಗೂ ಅಗ್ನಿಪರೀಕ್ಷೆ.ಈ ಉಪಚುನಾವಣೆಯ ಫಲಿತಾಂಶವೇ ಮೂರು ಪಕ್ಷಗಳಿಗೂ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಕುಮಾರಸ್ವಾಮಿ ಹೇಳಿದರು.

          ಹೊಸಕೋಟೆ ಹೊರತುಪಡಿಸಿ ಉಳಿದ ಹದಿನಾಲ್ಕು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹಾಕಲಾಗುವುದು.ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡಗೆ ಜೆಡಿಎಸ್ ಬೆಂಬಲ ನೀಡಲಾಗುವುದು.ಮೇಲ್ಮನೆಯಾಗಲೀ ಕೆಳಮನೆಯ ಸದಸ್ಯರ ಜೊತೆ ಯಾವುದೇ ಮನಸ್ತಾಪ ಇಲ್ಲ.ಯಾವುದೇ ಶಾಕ್ ಇಲ್ಲ.ಎಲ್ಲಾ ಫ್ಯೂಜ್ ಕಿತ್ತುಹೋಗಿರುವುದರಿಂದ ಯಾರೂ ಶಾಕ್ ಕೊಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.ವಿಧಾನ ಪರಿಷತ್ತಿನ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ನನಗೆ ಅಣ್ಣನಸಮಾನ.ಎಲ್ಲಾ ಮನಸ್ತಾಪಗಳು ಈಗ ಸರಿಯಾಗಿವೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap