ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಎನ್ಐಎ ಜಂಟಿ ಕಾರ್ಯಾಚರಣೆ : ಗೃಹ ಸಚಿವ

ಬೆಂಗಳೂರು

   ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಎನ್ಐಎ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಇದಕ್ಕಾಗಿ ರಾಜ್ಯದ ಗೃಹ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ.ಘಟನೆಯಲ್ಲಿ ಎರಡು ಉಗ್ರ ಗುಂಪುಗಳ ಸಂಪರ್ಕ ಇರುವುದನ್ನು ಎನ್ಐಎ ತನಿಖೆಯಲ್ಲಿ ಬಹಿರಂಗಪಡಿಸಿದೆ .ದೇಶದ ವಿರುದ್ಧ ಕೆಲಸ ಮಾಡ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಆರ್ ಟಿ ನಗರದಲ್ಲಿ ರುವ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಎಂಎಸ್ ರಾಮಯ್ಯ ಕಾಲೇ ಜು ಆಸ್ಪತ್ರೆಯಲ್ಲಿ ಶಂಕಿತ ಉಗ್ರ ಎನ್ನುವ ಮಾಹಿತಿ ಆಧಾರದಲ್ಲಿ ವೈದ್ಯ ಹಾಗೂ ಆತನ ಸಹಚರರನ್ನು ಬಂಧಿಸಿ ರುವ ಬಗ್ಗೆ ಈಗಾಗಲೇ ರಾಷ್ಟ್ರೀಯ ತನಿಖಾ ದಳ ಪ್ರಕಟಣೆ ಹೊರಡಿಸಿದೆ. ಕೆಲ ಪ್ರಕರಣದಲ್ಲಿ ನಾನು ಅವರಿಗೆ ಸಹಕಾರ,ಅವರು ನಮಗೆ ಸಹಕಾರ ನೀಡುವುದು ಮುಂದುವರೆದಿದೆ.ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ದೇಶದ ಸುರಕ್ಷತೆ ಆಂತರಿಕ ಸಮಸ್ಯೆ ಮತ್ತು ದೇಶದ ಗಡಿಯಾಚೆಗೆ ಇರುವ ಶಕ್ತಿಗಳು ಕೆಲಸ ಮಾಡುತ್ತಿದ್ದು ಅದರ ಮೇಲೆ ಜಂಟಿ ಕಾರ್ಯಾಚರಣೆ ಮಾಡುವುದು ಬಹಳ ಅವಶ್ಯಕವಾಗಿದೆ ಆ ನಿಟ್ಟಿನಲ್ಲಿ ನಾವು ಮುಂದುವರೆಯ ಲಿದ್ದಾರೆ ಎಂದು ಅವರು ತಿಳಿಸಿದರು.

    ಬಿಎಸ್ವೈ ಪದಚ್ಯುತಿಗೆ ಆರೆಸ್ಸೆಸ್ ಹತ್ತಿರದ ನಾಯಕರಿಂದ ಸಂಚು ನಡೆಸಲಾಗಿದೆ ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.ಕಾಂಗ್ರೆಸ್ ನಲ್ಲಿ ಒಳಗಿನ ವಾತಾವರಣ ಸೂಕ್ಷ್ಮ ಇದೆ ಬಿಜೆಪಿ ಬಗ್ಗೆ ಅವರು ಮಾತನಾಡುವುದು ಬೇಡ.ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಅವರು ಮಾತಾಡೋದು ಬೇಡ. ಅವರು ಸಂಘದ ಹಿನ್ನೆಲೆಯಿಂದ ಬಂದವರು.ಸಂಘ ಮತ್ತು ಬಿಎಸ್ ವೈ ಎರಡೂ ಒಂದೇ.ನಮ್ಮಲ್ಲಿ ವ್ಯತ್ಯಾಸ ಗಳು ಯಾವುದೂ ಇಲ್ಲ.ವ್ಯತ್ಯಾಸಗಳಿದ್ದು ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಸಿದ್ದರಾಮಯ್ಯನಿಗೆ ತಿರುಗೇಟು ನೀಡಿದ್ದಾರೆ.

     ಡಿ.ಜೆ.ಹಳ್ಳಿ ಕೆ.ಜಿ .ಹಳ್ಳಿ ಗಲಭೆ ಅಲ್ಲಿ ನಷ್ಟವನ್ನು ದುಷ್ಕರ್ಮಿಗಳಿಂದ ವಸೂಲಿ ಮಾಡಿಕೊಳ್ಳಲು ನಿರ್ಧರಿಸಲಾ ಗಿದೆ.ದಂಡವನ್ನು ವಸೂಲಿ ಮಾಡಲುಕ್ಲೈಮ್ ಕಮೀಷನರ್ ನೇಮಕಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಮನ ವಿ ಮಾಡಿಕೊಳ್ಳುತ್ತಿದ್ದೇವೆ ಈ ಸಂಬಂಧ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link