ಮುಂದಿನ ತಿಂಗಳಾಂತ್ಯಕ್ಕೆ ನೀಲಮಣಿ ಎನ್ ರಾಜು ನಿವೃತ್ತಿ

ಬೆಂಗಳೂರು

      ಬರುವ 2020ರ ಜನವರಿ ತಿಂಗಳಾಂತ್ಯಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ-ಐಜಿಪಿ) ನೀಲಮಣಿ ಎನ್. ರಾಜು ಅವರು ನಿವೃತ್ತರಾಗಲಿದ್ದಾರೆ.

      ರಾಜ್ಯ ಪೆÇಲೀಸ್ ಮುಖ್ಯಸ್ಥರ ಹುದ್ದೆಯನ್ನು ಎರಡು ವರ್ಷಗಳಿಗೂ ಹೆಚ್ಚು ಕಾಲ ನಿಭಾಯಿಸಿ ಯಾವುದೇ ವಿವಾದಕ್ಕೆ ಎಡೆಮಾಡಿಕೊಡದೇ ಕಾರ್ಯನಿರ್ವಹಿಸಿ ನೀಲಮಣಿರಾಜು ಅವರು ಹುದ್ದೆಯಿಂದ ನಿವೃತ್ತಿಯಾಗಲಿರುವ ಬೆನ್ನಲ್ಲೆ ಡಿಜಿಪಿ ಹುದ್ದೆಗಾಗಿ ಮೂವರು ಅಧಿಕಾರಿಗಳ ನಡುವೆ ಭಾರೀ ಪೈಪೋಟಿ ಉಂಟಾಗಿದೆ.

      ನೀಲಮಣಿ ಎನ್. ರಾಜು ಅವರು ಜ,31ರಂದು ಸೇವೆಯಿಂದ ನಿವೃತ್ತರಾಗಲಿರುವ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ, ಡಿಜಿಪಿ ಹುದ್ದೆಗೆ ಅರ್ಹರಾಗಿರುವ 7 ಮಂದಿ ಅಧಿಕಾರಿಗಳ ಪಟ್ಟಿಯನ್ನು ಯುಪಿಎಸ್‍ಸಿಗೆ ಕಳುಹಿಸಿರುವ ಬೆನ್ನಲ್ಲೆ ಮೂವರು ಡಿಜಿಪಿಗಳು ರಾಜ್ಯ ಪೆÇಲೀಸ್ ಮುಖ್ಯಸ್ಥರ ಹುದ್ದೆ ಪಡೆಯಲು ತೀವ್ರ ಪೈಪೋಟಿ ನಡೆಸಿದ್ದಾರೆ.

      ಸೇವಾ ಹಿರಿತನದಲ್ಲಿ ಡಿಜಿಪಿಯಾಗಲು ಆಂತರಿಕ ಭದ್ರತಾ ವಿಭಾಗದ (ಐಎಸ್‍ಟಿ) ಡಿಜಿಪಿ ಆಶಿಶ್ ಮೋಹನ್(ಎ.ಎಂ) ಪ್ರಸಾದ್ ಅವರು ಮೊದಲಿಗರಾದರೆ,ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಹಾಗೂ ತರಬೇತಿ ವಿಭಾಗದ ಡಿಜಿಪಿ ಪದಮ್ ಕುಮಾರ್(ಪಿಕೆ)ಗರ್ಗ್ ಅವರು ನಂತರದ ಸ್ಥಾನದಲ್ಲಿದ್ದು ರಾಜ್ಯ ಪೆÇಲೀಸ್ ಮುಖ್ಯಸ್ಥರ ಹುದ್ದೆಗಾಗಿ ಲಾಭಿ ನಡೆಸಿದ್ದಾರೆ.

    ಸೇವಾ ಹಿರಿತನದ ಪ್ರಕಾರ ಎ.ಎಂ.ಪ್ರಸಾದ್ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಬೇಕಿದೆ .ಆದರೆ ಕಳೆದ ಸರ್ಕಾರದಲ್ಲಿ ಗುಪ್ತದಳದ ಡಿಜಿಪಿಯಾಗಿ ಕಾಂಗ್ರೆಸ್‍ಗೆ ಆಪ್ತರಾಗಿದ್ದಲ್ಲದೇ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಹೆಸರು ತಳಕು ಹಾಕಿಕೊಂಡಿತ್ತು(ಸಿಬಿಐ ತನಿಖೆಯಲ್ಲಿ ನಿರ್ದೋಷಿಯಾಗಿದ್ದಾರೆ)ಎನ್ನುವ ಕಾರಣಕ್ಕೆ ಅವರನ್ನು ರಾಜ್ಯ ಡಿಜಿಪಿ ಹುದ್ದೆಗೆ ಪರಿಗಣಿಸಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ.

ಸೂದ್ ಲಾಭಿ

     ಅಲ್ಲದೆ, ಬರುವ ಅಕ್ಟೋಬರ್‍ಗೆ ಪ್ರಸಾದ್ ಅವರು, ಸೇವಾ ನಿವೃತ್ತಿ ಹೊಂದಲಿದ್ದು, ಕೇವಲ 8 ತಿಂಗಳು ಮಾತ್ರ ಅವರು ಡಿಜಿಪಿ ಹುದ್ದೆಯಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಪ್ರಸಾದ್ ಅವರನ್ನು ಡಿಜಿಪಿ ಹುದ್ದೆಗೆ ಪರಿಗಣಿಸುವುದು ರಾಜ್ಯ ಸರ್ಕಾರಕ್ಕೆ ಮನಸ್ಸಿಲ್ಲ.ಇದರ ಲಾಭ ಪಡೆಯಲು ಮುಂದಾಗಿರುವ ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರು ರಾಜ್ಯ ಪೆÇಲೀಸ್ ಮುಖ್ಯಸ್ಥರ ಹುದ್ದೆಗೆ ಲಾಭಿ ನಡೆಸಿದ್ದಾರೆ.

     ಈಗಾಗಲೇ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವು ಬಿಜೆಪಿ ಮುಖಂಡರು ಆರ್‍ಎಸ್‍ಎಸ್ ನಾಯಕರನ್ನು ಭೇಟಿ ಮಾಡಿ ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಆದರೆ ಅವರಿಗೆ ಇತ್ತೀಚಿಗೆ ಸಿಬಿಐ ತನಿಖೆಗೆ ಒಪ್ಪಿಸಿರುವ ಬಹುಕೋಟಿ ವಂಚನೆಯ ಐಎಂಎ ಪ್ರಕರಣ ಕಂಟಕವಾಗಿ ಪರಿಣಮಿಸಿದೆ.ಏಕೆಂದರೆ ಅವರು ಸಿಐಡಿಯಲ್ಲಿದ್ದಾಗ ವಂಚಕ ಮನ್ಸೂರ್‍ಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಮೂಲಕ ನೆರವಾಗಿದ್ದರು ಎನ್ನುವ ಆರೋಪವಿದೆ.

      ಪಿಕೆ ಗರ್ಗ್ ಅವರು ಜಿಲ್ಲೆಯೊಂದರಲ್ಲಿ ಎಸ್‍ಪಿ ಯಾಗಿದ್ದನ್ನು ಬಿಟ್ಟರೆ ತಮ್ಮ ಸೇವಾವಧಿಯಲ್ಲಿ ಇಲ್ಲಿಯವರೆಗೆ ಇಲಾಖೆಯ ಪ್ರತಿಷ್ಠಿತ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿಲ್ಲ.ಕಾರ್ಯನಿರ್ವಾಹಕ ಹುದ್ದೆ ಸಿಗದೇ ಕಚೇರಿ ಕೆಲಸಗಳಲ್ಲಿಯೇ ಅವರು ಬಹುತೇಕ ಸೇವೆ ಮುಗಿಸಿದ್ದಾರೆ ಯಾವುದೇ ಸರ್ಕಾರದ ಪರ- ವಿರುದ್ದ ಕೆಲಸ ಮಾಡದೇ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದು ಅವರನ್ನು ಡಿಜಿಪಿಯಂತಹ ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಪರಿಗಣಿಸುವ ಸಾಧ್ಯತೆಗಳಿಲ್ಲ.

ಗರ್ಗ್‍ಗಿಲ್ಲ ಭಾಗ್ಯ

     ಗರ್ಗ್ ಅವರು 2021ರ ಎಪ್ರಿಲ್‍ಗೆ ನಿವೃತ್ತರಾಗಲಿದ್ದು ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಾಗುವ ಸಾಧ್ಯತೆ ತೀರಾ ಕಡಿಮೆ.ಸೂದ್ ಅವರು 2024ರ ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದು, ಸುಮಾರು ಮೂರು ವರ್ಷಗಳ ಕಾಲ ಅವರು, ಡಿಜಿಪಿ ಹುದ್ದೆಯಲ್ಲಿರುತ್ತಾರೆ.

      ಸತತ ಮೂರು ವರ್ಷಗಳ ಕಾಲ ಒಬ್ಬರಿಗೇ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಯನ್ನು ಕೊಡುವುದನ್ನು ಬಿಟ್ಟು ಕೇವಲ 8 ತಿಂಗಳಿಗೇ ನಿವೃತ್ತರಾಗಲಿರುವ ಪ್ರಸಾದ್ ಅವರಿಗೆ ಡಿಜಿಪಿ ಹುದ್ದೆ ನೀಡಿ,ಯಾವುದೇ ಕಾನೂನು ತೊಡಕಿಗೆ ಅವಕಾಶ ಮಾಡಿಕೊಳ್ಳದಿರಲು ಸರ್ಕಾರ ಮುಂದಾದರೆ ಪ್ರಸಾದ್ ಅವರು, ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗುವ ಸಾಧ್ಯತೆ ಹೆಚ್ಚಾಗಿದೆ.

       ಈ ಮೂವ್ವರನ್ನು ಬಿಟ್ಟರೆ, ಡಿಜಿಪಿ ಹುದ್ದೆಗೆ ಬಡ್ತಿ ಪಡೆಯಲಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ಅಲೋಕ್ ಮೋಹನ್ ಅವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಲಾಬಿ ನಡೆಸಿದ್ದು, ಅವರು ಡಿಜಿಪಿ ಹುದ್ದೆ ಅಲಂಕರಿಸುವ ಸಾಧ್ಯತೆ ಕಡಿಮೆ.

ಮೂವರು ಡಿಜಿಪಿ ನಿವೃತ್ತಿ

      ಬರುವ ಜನವರಿ 31ಕ್ಕೆ ರಾಜ್ಯದ ಮೊದಲ ಡಿಜಿಪಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ ಇತಿಹಾಸ ಬರೆದಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್. ರೆಡ್ಡಿ, ಪೊಲೀಸ್ ಗೃಹ ಮಂಡಳಿ ಡಿಜಿಪಿ ರಾಘವೇಂದ್ರ ಔರಾದ್ಕರ್ ನಿವೃತ್ತರಾಗಲಿದ್ದಾರೆ. ಇವರ ಜೊತೆಗೆ ಡಿಐಜಿ ಆಗಿರುವ ಗುಪ್ತ ದಳದ ರಾಜೇಂದ್ರ ಪ್ರಸಾದ್ ಕೂಡ ನಿವೃತ್ತಿ ಹೊಂದಲಿದ್ದಾರೆ.

      ಮೂವರು ಡಿಜಿಪಿಗಳು ನಿವೃತ್ತರಾಗುವುದರಿಂದ ಸೇವಾಹಿರಿತನದಲ್ಲಿ ರೈಲ್ವೆಯ ಎಡಿಜಿಪಿಯಾಗಿರುವ ಅಲೋಕ್ ಮೋಹನ್, ಕಾರಾಗೃಹದ ಎಡಿಜಿಪಿ ಎನ್.ಎಸ್. ಮೇಘರಿಕ್ ಹಾಗೂ ಪೊಲೀಸ್ ಸಂಹವನ ಅಧುನೀಕರಣ ವಿಭಾಗದ ಡಿಜಿಪಿ ಆರ್.ಪಿ.ಶರ್ಮ ಅವರು, ಡಿಜಿಪಿ ಹುದ್ದೆಗೆ ಬಡ್ತಿ ಹೊಂದಲಿದ್ದಾರೆ.

     ಇವರ ಹೆಸರನ್ನು ಸೇರಿದಂತೆ, ಹಾಲಿ ಇರುವ ಇಬ್ಬರು ಡಿಜಿಪಿಗಳು ಸೇರಿ, ಐವರು ಹೆಸರಿನ ಪಟ್ಟಿಯನ್ನು ರಾಜ್ಯ ಪೆÇಲೀಸ್ ಮಹಾನಿರ್ದೇಶಕರ ಹುದ್ದೆಗೆ ರಾಜ್ಯ ಸರ್ಕಾರ, ಯುಪಿಎಸ್‍ಸಿಗೆ ಕಳುಹಿಸಿ ಅನುಮತಿಗಾಗಿ ಕಾಯುತ್ತಿದೆ.ಬಡ್ತಿ ಹೊಂದಲಿರುವ ಅಲೋಕ್ ಮೋಹನ್ ಅವರು 2025ರ ಏಪ್ರಿಲ್‍ಗೆ ನಿವೃತ್ತರಾದರೆ, ಎನ್.ಎಸ್. ಮೇಘರಿಕ್ ಅವರು, ಬರುವ ಜುಲೈಗೆ ಹಾಗೂ ಆರ್.ಪಿ. ಶರ್ಮ ಅವರು, ಬರುವ ಡಿಸೆಂಬರ್‍ಗೆ ನಿವೃತ್ತಿ ಹೊಂದಲಿದ್ದು, ಈ ಮೂವರನ್ನು ರಾಜ್ಯ ಡಿಜಿಪಿ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಇದೆ.ಪ್ರವೀಣ್ ಸೂದ್ ಅವರ ನಂತರ ಅಲೋಕ್ ಮೋಹನ್ ಡಿಜಿಪಿ ಹುದ್ದೆ ಪಡೆಯುವ ಸಾಧ್ಯತೆಗಳಿವೆ.

ಐಜಿಪಿಗೆ ಬಡ್ತಿ

      ಕೇಂದ್ರ ಸೇವೆಯಲ್ಲಿರುವ ಡಿಐಜಿ ಸೋನಿಯಾ ನಾರಂಗ್, ಗುಪ್ತದಳದಲ್ಲಿರುವ ಡಿಐಜಿ ಸುಬ್ರಮಣ್ಯೇಶ್ವರ ರಾವ್ ಅವರು, ಐಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಎಸ್‍ಪಿ ಹುದ್ದೆಯಲ್ಲಿರುವ ಚಂದ್ರಗುಪ್ತ ಹಾಗೂ ತ್ಯಾಗರಾಜನ್ ಅವರು, ಡಿಐಜಿಗಳಾ ಗಲಿದ್ದಾರೆ. ಇವರ ಜೊತೆಗೆ ಚೇತನ್ ಸಿಂಗ್ ರಾಥೋಡ್, ಶಶಿಕುಮಾರ್, ರವಿ ಕುಮಾರ್, ಅಮಿತ್ ಸಿಂಗ್ ಅವರು, ಸೀನಿಯರ್ ಸ್ಕೇಲ್‍ಗೆ ಅರ್ಹತೆ ಹೊಂದಲಿದ್ದಾರೆ.

      ಬರುವ ವರ್ಷ ಐಪಿಎಸ್ ಅಧಿಕಾರಿಗಳು ಸಾಲುಸಾಲಾಗಿ ನಿವೃತ್ತರಾಗಲಿದ್ದು, ಜನವರಿಗೆ ನೀಲಮಣಿ ಎನ್. ರಾಜು, ಎಂ.ಎನ್. ರೆಡ್ಡಿ, ರಾಘವೇಂದ್ರ ಔರಾದ್ಕರ್, ಡಿಐಜಿ ರಾಜೇಂದ್ರ ಪ್ರಸಾದ್ ನಿವೃತ್ತರಾದರೆ, ಮೇ ತಿಂಗಳಲ್ಲಿ ಡಿಐಜಿ ಮಂಜುನಾಥ್ ಅಣ್ಣಿಗೇರಿ,ಜುಲೈಗೆ ಎನ್.ಎಸ್. ಮೇಘರಿಕ್, ಟಿ.ಆರ್. ಸುರೇಶ್, ಸೆಪ್ಟೆಂಬರ್‍ಗೆ ಪರಶಿವಮೂರ್ತಿ, ಅಕ್ಟೋಬರ್‍ಗೆ ಸುನಿಲ್ ಕುಮಾರ್ 2021ರ ಎಪ್ರಿಲ್‍ಗೆ ಗರ್ಗ್ ಅವರು ನಿವೃತ್ತರಾಗಲಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap