ಈಜುಪಟುಗಳಿಗೆ ಆಸರೆಯಾಗಿದ್ದ ಉದ್ಯಮಿ ಜಗದಾಳೆ ನಿಧನ..!!

ಬೆಂಗಳೂರು

      ಬಸವನಗುಡಿ ಈಜುಗಾರರ ಒಕ್ಕೂಟದ ಅಧ್ಯಕ್ಷ ಆರ್‌ ನೀಲಕಂಠ ರಾವ್‌ ಜಗದಾಳೆ(67) ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.

       ಕಳೆದ 5 ದಶಕಗಳಿಂದ ಭಾರತೀಯ ಈಜುಪಟುಗಳಿಗೆ ಬೆಂಬಲ ನೀಡುತ್ತಿದ್ದ ಅವರು, ಜನಪ್ರಿಯ ಡಿಸ್ಟಿಲರಿಸ್‌ ಉತ್ಪಾದಕ ಜಗದಾಳೆ ಸಮೂಹದ ಮಾಲೀಕರಾಗಿದ್ದರು. ಕರ್ನಾಟಕದಲ್ಲಿ ಈಜು ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. 3 ದಶಕಗಳಿಗೂ ಅಧಿಕ ಕಾಲ ಅವರು ಈಜುಗಾರರ ಒಕ್ಕೂಟವನ್ನು ಮುನ್ನಡೆಸಿದ್ದರು.

     ಈಜು ಕ್ರೀಡೆ ಉತ್ತೇಜನಕ್ಕಾಗಿ ಕರ್ನಾಟಕ ಒಲಿಂಪಿಕ್‌ ಒಕ್ಕೂಟದ ಪ್ರಶಸ್ತಿಯನ್ನು ಪಡೆದಿದ್ದರು. ಈ ಸಾಧನೆಗಾಗಿ ಕೆಂಪೆಗೌಡ ಪ್ರಶಸ್ತಿ ಕೂಡ ಅವರಿಗೆ ಲಭಿಸಿತ್ತು.

       ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಕೆಒಎ ಅಧ್ಯಕ್ಷ ಮತ್ತು ಎಂಎಲ್‌ಸಿ ಕೆ.ಗೋವಿಂದ ರಾಜು, ಬಸವನಗುಡಿ ಈಜುಗಾರರ ಒಕ್ಕೂಟದ ಸದಸ್ಯರು ಸೇರಿದಂತೆ ಹಲ ಗಣ್ಯರು ಜಗದಾಳೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ