ತಿಪಟೂರು :
ತಾಲ್ಲೂಕಿನಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ತನ್ನ ಅಕ್ಕ-ಪಕ್ಕದಲ್ಲಿರುವ ಕೆರೆ ಕಟ್ಟೆಗಳಿಗೆ ನೀರು ಒದಗಿಸಬೇಕೆಂದು ಇಂದು ಬಿದರೆಗುಡಿಯ ಬಿದರಮ್ಮನವರ ದೇವಾಸ್ಥಾನದ ಆವರಣದಲ್ಲಿ ನೀರು ಪಡೆಯುವ ರೂಪರೇಷೆÀಯ ಬಗ್ಗೆ ಹಾಗೂ ಹಕ್ಕೋತ್ತಯದ ಬಗ್ಗೆ ಪೂರ್ವಭಾವಿ ಸಭೆಯನ್ನು ನೆಡೆಸಲಾಯಿತು.
ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೀಕೆರೆ, ಅಂಚೆಕೊಪ್ಪಲು, ಶಂಕರಿಕೋಪ್ಪಲು, ಕೋನೇಹಳ್ಳಿ, ಸಿದ್ದಾಪುರ, ಗೌಡನಕಟ್ಟೆ, ಚಿಕ್ಕಬಿದರೆ, ಬಿದರೆಗುಡಿ, ಮತ್ತಿಹಳ್ಳಿ, ನಾಗತೀಹಳ್ಳಿ, ತಿಮ್ಲಾಪುರ ಗೋಲ್ಲರಹಟ್ಟಿ, ಮಾದಿಹಳ್ಳಿ, ಗುಡಿಗೊಂಡನಹಳ್ಳಿ ಗ್ರಾಮಗಳು ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಗ್ರಾಮಗಳು ಸೇರಿದಂತೆ ಸುಮಾರು ಮೂನ್ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಪೂರ್ವಭಾವಿ ಸಭೆಯಲ್ಲಿ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಾತನಾಡಿ ನೀರಾವರಿ ಯೋಜನೆಗಳಲ್ಲಿ ರೈತರು ನೀರನ್ನು ನಿಮಗೆ ಎಡದಂಡೆಯಲ್ಲಿ ಸಿಗುತ್ತದೆ ಬಲದಂಡೆಯಲ್ಲಿ ಬರುತ್ತದೆ, ಮೇಲ್‍ದಂಡೆಯಲ್ಲಿ ಬರುತ್ತದೆ ಎಂಬ ಉತ್ತರಗಳನ್ನು ನೀಡುತ್ತಾ ನಮ್ಮ ಜನಪ್ರತಿನಿಧಿಗಳು ನಮ್ಮನ್ನು ಯಾಮಾರಿಸುತ್ತಿದ್ದಾರೆ ಯಾವ ದಂಡೆಯಲ್ಲಿಯಾದರೂ ಸರಿಯೇ ನಮಗೆ ನಮ್ಮ ತಾಲ್ಲೂಕಿನಲ್ಲಿ ಹಾದು ಹೋಗುತ್ತಿರುವ ಎತ್ತಿನಹೋಳೆ ನೀರನ್ನು ನಮ್ಮ ಕೆರೆಗಳಿಗೆ ನೀಡಬೇಕು ಇಲ್ಲದಿದ್ದರೆ ನಾವುಗಳು ನೀರಿಗಾಗಿ ಕಾನೂನು ಭಂಗ ಚಳುವಳಿಗಳನ್ನು ಎದುರಿಸಲು ಹಾಗೂ ಗುಂಡೇಟುಗಳನ್ನು ತಿನ್ನಲು ಸಹ ಸಿದ್ದರಾಗಿದ್ದೇವೆ, ಎಂದು ತಮ್ಮ ಹೋರಾಟದ ಮುನ್ನಡಿಯನ್ನು ತಿಳಿಸಿದರು.
ಒಮ್ಮೆ ಒಂದು ತಾಲ್ಲೂಕಿಗೆ ಒಂದು ಬಾರಿ ಒಂದು ನೀರಾವರಿ ಯೋಜನೆಯು ಜಾರಿಯಾದರೆ ಮತ್ತೋಂದು ಯೋಜನೆಯನ್ನು ಮಂಚೂರು ಆಗುವುದಿಲ್ಲ ಎಂದು ಹೇಳುತ್ತಾ ಪಕ್ಕದ ತಾಲ್ಲೂಕಿನ ಅರಸೀಕೆರೆ ತಾಲ್ಲೂಕಿನಲ್ಲಿ ಯಗಚಿ ನೀರಾವರಿ, ಹೇಮಾವತಿ ನೀರಾವರಿ ಯೋಜನೆ, ಕೃಷ್ಣಾ ಯೋಜನೆಗಳು ಜಾರಿಯಿದ್ದರೂ ಸಹ ಎತ್ತಿನಹೊಳೆ ನೀರನ್ನು ಮತ್ತೇ ಪಡೆಯುತ್ತಿದ್ದಾರೆ ಅಂದರೆ ಅವರುಗಳಿಗೆ ಪೂರ್ವಾಲೋಚನೆ, ಅಲ್ಲಿನ ರಾಜಕಾರಣಿಗಳಿಗೆ ಗಟ್ಟಿತನ ಎಷ್ಷು ಇದೆ ಎಂಬುದು ತಿಳಿಯುತ್ತದೆ ಎಂದರು
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ದೇವರಾಜ್ ಮಾತನಾಡಿ ರೈತ ಸಂಘಗಳು ಎಲ್ಲಿಯಾದರೂ ಪ್ರತಿಭಟನೆಗಳನ್ನು ಮಾಡಿದರೆ ನಮ್ಮ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಅವುಗಳನ್ನು ಟೀಕಿಸುತ್ತಾ ಹಣಕಿಸುತ್ತಾರೆ ವಿನಹ ಯಾವುದಕ್ಕೆ ಪ್ರತಿಭಟಿಸುತ್ತಾರೆ ಬಂದು ಕೇಳುವ ಸೌಜನ್ಯವಿಲ್ಲದ ರಾಜಕೀಯ ಮುಖಂಡರುಗಳಾಗಿದ್ದಾರೆ ಆದರೆ ವಿಪರ್ಯಾಸ ಏನೆಂದರೆ ಯಾವ ಒಬ್ಬ ಜನಪ್ರತಿನಿಧಿಗಳು ಸಹ ನಮ್ಮ ತಾಲ್ಲೂಕಿಗೆ ಎಷ್ಟು ಟಿಎಮ್‍ಸಿ ನೀರು ಲಭ್ಯತೆಯಾಗಿದೆ ಯಾರ ಕಾಲದಲ್ಲಿ ಆಗಿದೆ ಎಂಬ ಸರಿಯಾದ ಮಾಹಿತಿಗಳು ಇಲ್ಲದ ರಾಜಕಾರಣಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾವುಗಳು ಬೃಹತ್ ಹೋರಾಟಗಳನ್ನು ಮಾಡುವ ಮೂಲಕ ಎತ್ತಿನ ಹೊಳೆ ನೀರನ್ನು ಪಡೆಯಲೇ ಬೇಕು ಎಂದರು.
ಸಾಮಾಜಿಕ ಹಾಗೂ ಜಾನಪದ ಚಿಂತಕರಾದ ಉಜ್ಜಜ್ಜಿ ರಾಜಣ್ಣ ಮಾತನಾಡಿ ಇಂದು ನೀರಿಗಾಗಿ ನಾವುಗಳು ಬೇಡುವ ಪರಿಸ್ಥಿತಿಯು ಎದುರಾಗಿದ್ದು, ಮನೆಗೆ ನೀರನ್ನು ತರುವುದು, ದನಕರುಗಳಿಗೆ ನೀರನ್ನು ಕೊಡುವವರು, ಕೃಷಿಗೆ ನೀರನ್ನು ಹಾಯಿಸುವವರು ರೈತರು ಆದ್ದದರಿಂದ ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ನೀರನ್ನು ಪಡೆಯುವ ಸಭೆಗಳು ರೈತರಿಂದ ಆಗುತ್ತಿರುವ ಸಂತೋಷಕರವಾಗಿದ್ದು, ನಮ್ಮ ತಾಲ್ಲೂಕಿನ ರಾಜಕಾರಣಿಗಳು, ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹೇಳುವಂತೆ ಹೊನ್ನವಳ್ಳಿ ಏತ ನೀರಾವರಿ ಯೋಜನೆಯಿದ್ದು ಹೆಸರೇ ಹೇಳುವಂತೆ ಹೊನ್ನವಳ್ಳಿ ಕೆರೆಯನ್ನು ಒಂದು ಬಾರಿ ತುಂಬಿಸಲಾಗದಂತಂಹ ಯೋಜನೆಗಳನ್ನು ಜಾರಿಗೊಳಿಸಿದ್ದು ಅದಕ್ಕೆ ಸಂಬಂಧಪಟ್ಟು ಕಚೇರಿಗಳು ಸಹ ತಾಲ್ಲೂಕು ಕೇಂದ್ರದಲ್ಲಿ ಇಲ್ಲದೆಯಿದ್ದು ಕೊನೆಯ ಪಕ್ಷ ಹೊನ್ನವಳ್ಳಿಗೂ ಯೋಜನೆ ಕಚೇರಿಯು ಇಲ್ಲದೆಯಿದ್ದು ನಿಷ್ಕ್ರೀಯವಾಗಿದ್ದು ಇಲಾಖೆಯ ನಿರ್ವಹಣೆ ಮಾತ್ರ ಲಕ್ಷ ಲಕ್ಷ ರೂಪಾಯಿಗಳು ವ್ಯಯವಾಗುತ್ತಿದೆ ಎಂದರು.
ಈ ಭಾಗದ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳು, ಜನಪ್ರತಿನಿಧಿಗಳು, ಶಾಸಕರು ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಸರ್ಕಾರವನ್ನು ಗಟ್ಟಿ ಧ್ವನಿಯಲ್ಲಿ ಕೇಳಿ ತಾವುಗಳು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ. ಪಕ್ಕದ ತಾಲ್ಲೂಕಿನ ಶಾಸಕರ ಗಟ್ಟಿತನದಿಂದ ಅವರಲ್ಲಿ ಹೇಮಾವತಿ ನೀರಲ್ಲಿ ಹಂಚಿಕೆ, ಯಗಚಿ ನೀರಾವರಿ ಹಂಚಿಕೆ, ಎತ್ತಿನಹೋಳೆ ನೀರಾವರಿಯಲ್ಲಿ ಹಂಚಿಕೆಯಲ್ಲೂ ಸಹ ನೀರು ಪಾಲಾಗಿದೆ ಆದರೆ ತಮ್ಮ ತಾಲ್ಲೂಕಿನ ರಾಜಕೀಯ ಪ್ರತಿನಿಧಿಗಳಿಗೆ ಆ ದಿಟ್ಟತನವಿಲ್ಲ ಏಕೆಯಿಲ್ಲ ಎಂದು ಪ್ರಶಿಸಿದರು.
ಸಭೆಯಲ್ಲಿ ಬೆಲೆ ಕಾವಲು ಸಮಿತಿಯ ಶ್ರೀಕಾಂತ್, ಮನೋಹರ್, ರೈತ ಸಂಘದ ತಾಲ್ಲೂಕು ಅದ್ಯಕ್ಷ ರಾಜಣ್ಣ, ಕೋನೆಹಳ್ಳಿ ನೀರಾವರಿ ಹೋರಾಟದ ಸಮತಿಯ ಶಂಕರಪ್ಪ ಅಂಚೆಕೊಪ್ಪಲು, ಕೇಶವ್ ಸಿದ್ದಾಪುರ, ಕರ್ನಾಟಕ ರಕ್ಷಣಾ ವೇದಿಕೆಯ ತಾ ಅಧ್ಯಕ್ಷ ಕುಮಾರ್‍ಯಾದವ್, ಕರೀಕೆರೆ-ಬೈರಾಪುರ ತೆಂಗು ಬೆಳೆಗಾರ ಸಂಘದ ಪದಾಧಿಕಾರಿಗಳು, ಸೇರಿದಂತೆ ಹತ್ತಾರು ಸಂಘಟನೆಗಳು ರೈತರು, ನೂರಾರು ಸಾರ್ವಜನಿಕರು ಬಹಿರಂಗ ಸಭೆಯಲ್ಲಿ ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ