ಭದ್ರಾ ನಾಲೆ ಕೊನೆ ಭಾಗಕ್ಕೆ ನೀರಿಲ್ಲದೆ ಒಣಗುತ್ತಿರುವ ಭತ್ತದ ಬೆಳೆ

ಮಲೆಬೆನ್ನೂರು

        ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಅಚ್ಚುಕಟ್ಟಿನ ಬಾನುವಳ್ಳಿಯಲ್ಲಿ ಭದ್ರಾ ನಾಲೆಯ ನೀರು ತಲುಪದೆ, ಭತ್ತದ ಬೆಳೆ ಒಣಗುತ್ತಿದೆ ಎಂದು ಆರೋಪಿಸಿ, ರೈತರು ನೀರಿಲ್ಲದೆ ಒಣಗುತ್ತಿರುವ ಭತ್ತದ ಗದ್ದೆಗಳಿಗೆ ಶಾಸಕ ಎಸ್.ರಾಮಪ್ಪ ಹಾಗೂ ಎಂಜಿನಿಯರ್‍ಗಳನ್ನು ಕರೆಸಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

       ಮಲೆಬೆನ್ನೂರು ಭದ್ರಾ ನಾಲಾ ಉಪ ವಿಭಾಗದ 10ನೇ ಜೋನ್ ಉಪನಾಲೆಯ ಕೊನೆ ಭಾಗದ ಭಾನುವಳ್ಳಿಯಲ್ಲಿ ಭದ್ರಾ ನಾಲೆ ನೀರು ತಲುಪದೆ, ಒಣಗುತ್ತಿರುವ ಗದ್ದೆಗಳಿಗೆ ಸಾಸಕ ಎಸ್.ರಾಮಪ್ಪ ಹಾಗೂ ಇಇ ರಾಜೆಂದ್ರಪ್ರಸಾದ್, ಏಇಇ ಗವಿಸಿದ್ದೇಶ್ವರ್, ಜೆಇ ಸಂತೋಷ್‍ಕುಮಾರ್ ಸ್ಥಳಕ್ಕೆ ಕರೆಸಿ ಒಣಗುತ್ತಿರುವ ಬೆಳೆ ತೋರಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

       ಜಮೀನುಗಳಿಗೆ ಇತ್ತೀಚಿನ ಕೆಲ ದಿನಗಳಿಂದ ಭದ್ರಾ ನಾಲೆ ನೀರು ತಲುಪದೆ, ಭತ್ತದ ಬೆಳೆ ಒಣಗುತ್ತಿದೆ. ಬಿಸಿಲಿನ ತಾಪಕ್ಕೆ ನೀರಿಲ್ಲದೆ, ಗದ್ದೆಯ ಭೂಮಿ ಬಿರುಕು ಬಿಟ್ಟು, ಬೆಳೆ ಒಣಗುತ್ತಿದೆ. ಇನ್ನೆರೆಡು ಇನ್ನೆರೆಡು ದಿನಗಳಲ್ಲಿ ನೀರು ತಲುಪದಿದ್ದರೆ, ಬೆಳೆ ನಾಶವಾಗುವ ಸಂಭವವಿದೆ. ಅನೇಕ ಬಾರಿ ಕೊನೆ ಭಾಗಕ್ಕೆ ನೀರು ತಲುಪಿಸುವಂತೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಶಾಸಕರಿಗೆ ಬೇಕಾದ್ರೆ ದೂರು ಹೇಳಿ ಎಂದು ಫೋನ್‍ನಲ್ಲಿ ಉಡಾಫೆ ಉತ್ತರ ನೀಡುತ್ತೀರಿ. ಈಗ ಶಾಸಕರನ್ನೇ ಇಲ್ಲಿಗೆ ಕರೆಸಿದ್ದೇವೆ ಅವರ ಮುಂದೆಯೇ ನೀರು ತಲುಪದ್ದಕ್ಕೆ ಉತ್ತರ ಕೊಡಿ ಎಂದು ಎಂಜಿನಿಯರ್‍ಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

        10ನೇ ಜೋನ್‍ನಲ್ಲಿ ಕಳೆದ ರೊಟೇಶನ್‍ನಲ್ಲಿ 5 ದಿನ ಅರ್ಧ ನಾಲೆ ನೀರು ಕೊಡದೆ, 10 ದಿನ ಸಂಪೂರ್ಣ ಬಂದ್ ಮಾಡಿದ್ದರಿಂದ ಕೊನೆ ಭಾಗಕ್ಕೆ ನೀರು ತಲುಪದೆ ಬೆಳೆ ಒಣಗುತ್ತಿವೆ. ಕಳೆದ ರೊಟೇಶನ್‍ನಲ್ಲಿ 5 ದಿನ ಅರ್ದ ನೀರು ಕೊಡದೆ ಇದ್ದುದಿಂದ ಈಗ ರೊಟೇಶನ್ ಆರಂಭವಾಗಿ ಇಂದಿಗೆ 4 ದಿನ ಕಳೆದರೂ ಸಹ, ಮೇಲ್ಬಾಗದ ರೈತರೇ ನೀರು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕೊನೆ ಭಾಗಕ್ಕೆ ತಲುಪಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು

       ಶಾಸಕ ಎಸ್.ರಾಮಪ್ಪ ಮಾತನಾಡಿ, ಕೊನೆ ಬಾಗಕ್ಕೆ ನೀರಿಲ್ಲದೆ ರೈತರು ಈಗಾಗಲೇ ಅನೇಕ ಸಲ ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಕೂಡಲೇ ಹೆಚ್ಚಿನ ಪ್ರಮಾಣದ ನೀರು ಹರಿಸಿ ಕೊನೆ ಭಾಗಕ್ಕೆ ನೀರು ತಲುಪಿಸುವಂತೆ ಎಂಜಿನಿಯರ್‍ಗಳಿಗೆ ಸೂಚಿಸಿದರು.

       ಇಇ ರಾಜೇಂದ್ರ ಪ್ರಸಾದ್ ಮಾತನಾಡಿ, ಇಂದು 10ನೇ ಜೋನ್ ನಾಲೆಯ 4ನೇ ಕಿಮೀನಲ್ಲಿ ನೀರು ಇದೆ. ಒಂದೆರಡು ದಿನಗಳಲ್ಲಿ ಕೊನೆ ಭಾಗಕ್ಕೆ ನೀರು ಹರಿಸುವುದಾಗಿ ಭರವಸೆ ನೀಡಿದರು.ಭಾನುವಳ್ಳಿ ಬಸವರಾಜ್, ಎಚ್.ಎಸ್.ಕರಿಯಪ್ಪ, ಧನ್ಯಕುಮಾರ್, ಬಸವರಾಜ್, ಧನಂಜಯ, ರಂಗನಥ್, ಪ್ರಸಾಂತ್, ಲಚ್ಚಪ್ಪ, ಪಾಲಾಕ್ಷಪ್ಪ, ಪವಾಡಿ ಮಂಜಪ್ಪ, ಜೋಗಪ್ಪರ ನಾರಾಯಣಪ್ಪ ಮತ್ತಿತರ ರೈತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap