ನೀರಿಲ್ಲದ ಬಾವಿಗೆ ಬಿದ್ದ ಕರಡಿ

ತೋವಿನನಕೆರೆ

       ಸಮೀಪದ ಕುರಂಕೋಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜುಂಜರಾಮನಹಳ್ಳಿ ಜನಾರ್ಧನರವರ ನೀರಿಲ್ಲದ ಬಾವಿಯಲ್ಲಿ ಬಿದ್ದಿದ ಕರಡಿಯನ್ನು ನೋಡಲು ಅಗಮಿಸಿದ್ದ ಜನರು.ನೋಡಲು ನುಗ್ಗಿದ್ದ ಜನರಿಂದ ಕಾರ್ಯಚರಣೆಗೆ ಅಡ್ಡಿ ಕರಡಿಹಿಡಿಯುವಲ್ಲಿ ಯಶ್ವಸಿಯಾದ ಅರಣ್ಯ ಇಲಾಖೆಹಾಳು ಬಾವಿಗೆ ಬಿದ್ಧು ಪರದಾಡುತ್ತಿದ್ಧ ಕರಡಿಯನ್ನು ಆರಣ್ಯ ಇಲಾಖೆಯವರು ಕಾರ್ಯಚರಣೆ ನಡೆಸಿ ಹಿಡಿದು ಬೊನ್ ನಲ್ಲಿ ತೆಗೆದುಕೊಂಡು ಹೋದ ಘಟನೆ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

       ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜುಂಜರಾಮನಹಳ್ಳಿ ಜಿ.ಎಸ್.ಜನಾರ್ಧನಯ್ಯ ಜಮೀನಿನಲ್ಲಿಯಿರುವ ನೀರಿಲ್ಲದೆ ಒಣಗಿರುವ 20 ಅಡಿ ಅಳದ ಬಾವಿಗೆ ಮಂಗಳವಾರ ರಾತ್ರಿ 15 ವರ್ಷದ ಗಂಡು ಕರಡಿ ಬಿದ್ದಿರುತ್ತದೆ. ಬಾವಿಯ ಮೇಲೆ ಬೇಲಿ ಬೆಳೆದು ಅದರಲ್ಲಿ ಜೇನು ಗೂಡು ಕಟ್ಟಿತ್ತು. ಅದನ್ನು ತಿನ್ನಲು ಬಂದ ಕರಡಿ ಜಾರಿ ಬಾವಿಗೆ ಬಿದ್ದಿದೆ.

        ಬೆಳಿಗ್ಗೆ ವಿಷಯ ಪ್ರಚಾರ ಪಡೆದು ಆರಣ್ಯ ಇಲಾಖೆಯವರು ಬೆಳಿಗ್ಗೆ 8.30 ಗಂಟೆಗೆ ಸ್ಥಳಕ್ಕೆ ಅಗಮಿಸಿದರು. ಕರಡಿ ಬದುಕಿರುವುದನ್ನು ಖಚಿತ ಪಡಿಸಿಕೊಂಡು ಜೀವಂತ ಹಿಡಿಯಲು ಅರವಳಿಕೆ ತಜರು ಮತ್ತು ವ್ಯೆದ್ಯರಿಗೆ ಸಂಪರ್ಕ ಮಾಡಿ ಶೀಘ್ರವಾಗಿ ಬರುವಂತೆ ಕ್ರಮ ತೆಗೆದು ಕೊಂಡರು. ಮದ್ಯಾಹ್ನ ಕಾರ್ಯಚರಣೆ ಪ್ರಾರಂಭಿಸಿ ಅರವಳಿಕೆ ಚುಚ್ಚು ಮದ್ಧನ್ನು ನೀಡಿ ಪ್ರಜೆ ತಪ್ಪಿಸಿದರು. ತಜ್ಞರು 20 ಅಡಿ ಅಳದ ಬಾವಿಗೆ ಇಳಿದು ಬಲೆಯ ಒಳಕ್ಕೆ ಕರಡಿಯನ್ನು ವರ್ಗಾಯಿಸಿ ಹಗ್ಗದ ಮೂಲಕ ಮೇಲಕ್ಕೆ ತಂದರು. ಸಾರ್ವಜನಿಕರು ಕರಡಿ ನೋಡಲು ನುಗ್ಗಾಟ ಮಾಡಿದರಿಂದ ಸಿದ್ದರಬೆಟ್ಟದ ನರ್ಸರಿಗೆ ಕರಡಿಯನ್ನು ತಂದು ಚಿಕಿತ್ಸೆ ನೀಡಿ ಪ್ರಜೆ ಬರುವಂತೆ ಮಾಡಿದರು.

        ಜುಂಜರಾಮನಹಳ್ಳಿ ಸುತ್ತಮುತ್ತಲಿನ ಕುರಂಕೋಟೆ, ದಾಸಾಲಕುಂಟೆ, ಮಣುವಿನಕುರಿಕೆ, ಜೋನಿಗರಹಳ್ಳಿ ಕುರುಬರಹಳ್ಳಿ, ಶಂಬೋನಹಳ್ಳಿ ಯಲ್ಲಿ ಅನೇಕ ತಿಂಗಳನಿಂದ ಕರಡಿ ಸಂಚಾರ ಮಾಡುತ್ತಿದ್ಧು ರೈತರಿಗೆ ತಲೆ ನೋವಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಸಾವಿರಾರು ಜನ ದೂರದ ಉರುಗಳಿಂದ ಬಂದು ನೋಡಿದರು. ಕರಡಿಯನ್ನು ಮೇಲಕ್ಕೆ ಎತ್ತುವಾಗ ನೂರಾರು ಜನರು ಕಾರ್ಯಚರಣೆ ಸಿಬ್ಬಂದಿ ಕಡೆ ನುಗ್ಗಿದರು. ಕಾರ್ಯಚರಣೆ ಸಮಯದಲ್ಲಿ ಇಲಾಖೆಯವರಿಗೆ ಜನರನ್ನು ನಿಯಂತ್ರಿಸುವುದು ದೊಡ್ಡ ಸಮಸ್ಯೆಯಾಗಿತ್ತು.

         ಕರಡಿಯನ್ನು ಮಕ್ಕಳಿಗೆ ತೋರಿಸಿದರೆ ಭಯ ಕಡಿಮೆಯಾಗುತ್ತದೆ ಎನ್ನುವ ಮಾತು ಗ್ರಾಮೀಣ ಪ್ರದೇಶದಲ್ಲಿ ಇರುತ್ತದೆ. ಜನರು ಮಕ್ಕಳನ್ನು ಕರಡಿ ತೋರಿಸಲು ಕರೆ ತಂದಿದ್ದರು. ಅಂತಹವರಿಗೆ ಬಹಳ ನಿರಾಶೆಯಾಯಿತ್ತು.ಬನ್ನೇರುಘಟ್ಟದ ಅರವಳಿಕೆ ತಜ್ಞ ಡಾ.ನೀತೀನ್, ಆರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ವಲಯಾ ಆರಣ್ಯಾಧಿಕಾರಿ ಸತೀಶ್ ಚಂದ್ರ, ನಾಗರಾಜು ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link