ಕೊರಟಗೆರೆ
ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ, ಕುಡಿಯುವ ನೀರು ಮತ್ತು ರೈತರ ಜಾನುವಾರುಗಳಿಗೆ ಮೇವಿನ ಸಮರ್ಪಕ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಶುಭಕಲ್ಯಾಣ್‍ಗೆ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ ನೀಡಿದರು.
ತಾಲೂಕಿನ ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಪಂ ಜಂಪೇನಹಳ್ಳಿ ಸಮೀಪದ ರಸ್ತೆ ಬದಿಯಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ನೆಡುತೋಪಿಗೆ ಬುಧವಾರ ಬೇಟಿ ನೀಡಿ ಕಾಮಗಾರಿ ಪರಿಶೀಲನೆ ನೀಡಿದ ವೇಳೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ಹೆಚ್ಚಿನ ಕಾಮಗಾರಿ ನಡೆಯಬೇಕಾಗಿದೆ. ಬರಗಾಲದ ಪರಿಸ್ಥಿತಿ ನಿಯಂತ್ರಿಸಲು ಸರಕಾರ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡಿದೆ. ನರೇಗಾ ಯೋಜನೆಯಡಿ ಗ್ರಾಪಂ ಮಟ್ಟದಲ್ಲಿ ಸ್ಥಳೀಯ ಮತ್ತು ಸಮುದಾಯದ ಕಾಮಗಾರಿಗೆ ಹೆಚ್ಚಿನ ಆಧ್ಯತೆ ನೀಡಿ ಉದ್ಯೋಗ ಸೃಷ್ಟಿಸಬೇಕು. ಅಕ್ಕಿರಾಂಪುರ ಗ್ರಾಪಂಗೆ ನೂತನ ಕಟ್ಟಡ ಮತ್ತು ಶಾಲೆಗೆ ಸರಕಾರದ ಅನುಧಾನ ಕೂಡಿಸುವ ಭರವಸೆ ನೀಡಿದರು.
ನರೇಗಾ ಯೋಜನೆಯಡಿ ಕೊರಟಗೆರೆ ತಾಲೂಕಿನ ಬೈಚೇನಹಳ್ಳಿ ಕುಡಿಯುವ ನೀರಿನ ಘಟಕ, ಕೊಳವೆ ಬಾವಿ, ಗಟ್ಲಹಳ್ಲಿ ಗ್ರಾಮದ ಗುಂಡನಕಟ್ಟೆ, ಅಕ್ಕಿರಾಂಪುರ ಗ್ರಾಮದ ಶಾಲೆ ಕೌಪೌಂಡ್, ನೇಡುತೋಪು, ಶಾಲೆ, ಚನ್ನಸಾಗರ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ರಸ್ತೆ ಕಾಮಗಾರಿ ಸೇರಿದಂತೆ ರಂಗನಹಳ್ಳಿ ಹಿಪ್ಪನೇರಳೆ ಸೋಪ್ಪಿನ ಸಸಿಯ ವಿಕ್ಷಣೆ ಮಾಡಿದರು. ಅಕ್ಕಿರಾಂಪುರ ಮತ್ತು ಬುಕ್ಕಾಪಟ್ಟಣ ಗ್ರಾಪಂಗೆ ಬೇಟಿ ನೀಡಿ ನರೇಗಾ ಕಾಮಗಾರಿಯ ದಾಖಲೆ ಪರಿಶೀಲನೆ ನಡೆಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕಿ ಗೈರು:- ನರೇಗಾ ಕಾಮಗಾರಿ ವಿಕ್ಷಣೆಗೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಕೊರಟಗೆರೆ ಕ್ಷೇತ್ರಕ್ಕೆ ಬರುವ ಮಾಹಿತಿ ಇದ್ದರೂ ಸಹ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪುಪ್ಪಲತಾ ಗೈರು ಹಾಜರಾಗಿರುವುದು ಕಂಡುಬಂದಿದೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಅನುಕೂಲ ಆಗುವಂತಹ ಸಮರ್ಪಕ ಕಾಮಗಾರಿ ನಡೆಯದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು ಜಿಪಂ ಅಧಿಕಾರಿಗಳ ವರ್ಗ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಕಾಮಗಾರಿ ವಿಕ್ಷಣೆ ವೇಳೆ ಜಿಪಂ ಸಿಇಓ ಶುಭಕಲ್ಯಾಣ್, ಉಪಕಾರ್ಯದರ್ಶಿ ಕೃಷ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ತಾಪಂ ಇಓ ಡಾ.ಸರ್ವೇಶ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀನರಸಯ್ಯ, ಕುಡಿಯುವ ನೀರು ಎಇಇ ರಂಗಪ್ಪ, ಪಂಚಾಯತ್ ರಾಜ್ ಇಲಾಖೆಯ ಎಇಇ ಮಂಜುನಾಥ, ಸಾಮಾಜಿಕ ವಲಯ ಅರಣ್ಯಾಧಿಕಾರಿ ನವನೀತ್, ಬುಕ್ಕಾಪಟ್ಟಣ ಗ್ರಾಪಂ ಅಧ್ಯಕ್ಷ ಲಕ್ಷ್ಮೀ, ಪಿಡಿಓ ಸುನೀಲ್‍ಕುಮಾರ್ ಸೇರಿದಂತೆ ಇತರರು ಇದ್ದರು.