ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು : ಡಿ ಕೆ ಶಿ

 ಬೆಂಗಳೂರು

     ಡಿ.ಜೆ ಹಳ್ಳಿ ಘಟನೆಯನ್ನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.

     ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಮಾಜಘಾತುಕ ಕೃತ್ಯ. ಶಾಸಕರ ಆಸ್ತಿಯಾಗಲಿ, ಸಾಮಾನ್ಯ ಜನರ ಆಸ್ತಿಯೇ ಆಗಿರಲಿ, ಪೊಲೀಸ್ ಠಾಣೆಯಾಗಿರಲಿ ಯಾವುದನ್ನು ಹಾನಿ ಮಾಡುವುದು ಸರಿಯಲ್ಲ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ. ಅವಹೇಳನಕಾರಿ ಟ್ವೀಟ್ ಮಾಡಲಾಗಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದನ್ನು ಯಾರು ಮಾಡಿದರೂ ತಪ್ಪೇ. ಇಡೀ ಪ್ರಕರಣವೇ ತಪ್ಪಾಗಿದೆ. ಬೆಂಗಳೂರು ನಗರದ ಶಾಸಕರ ಸಭೆ ಕರೆದಿದ್ದು, ಚರ್ಚೆ ಮಾಡಿ ಮುಂದಿನ ಹೆಜ್ಜೆ, ನಿಲುವು ಬಗ್ಗೆ ತಿಳಿಸುತ್ತೇನೆ ಎಂದರು.

     ನಮ್ಮ ಶಾಸಕರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದು, ನಿಯಂತ್ರಣ ಸಾಧ್ಯವಾಗಿಲ್ಲ. ಇಲ್ಲಿ ಬಹಳ ವ್ಯವಸ್ಥಿತವಾದ ಸಂಚು ಇದೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಲಿದ್ದು, ಸರ್ಕಾರ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡರು ಯಾವುದೇ ಅಭ್ಯಂತರವಿಲ್ಲ. ನಾವು ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಯಾರಿಗೂ ಉತ್ತರ ನೀಡುವುದಿಲ್ಲ:

       ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್, ಸಚಿವ ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ಈ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗೆ ಅವಕಾಶ ನೀಡಬಾರದು. ಅವರು ಅವರ ರಾಜಕಾರಣ ಮಾಡಲಿ. ನಾನು ಯಾರಿಗೂ ಉತ್ತರ ಕೊಡುವುದಿಲ್ಲ. ನಾನು ಕೂಡ ಶಾಸಕರ ಜತೆ ಚರ್ಚಿಸುತ್ತೇನೆ. ಸ್ಥಳಕ್ಕೆ ಹೋಗಿ ನೋಡಬೇಕಿದೆ, ಶಾಸಕರ ಮನೆಗೂ ಭೇಟಿ ನೀಡಬೇಕು. ಈಗಾಗಲೇ ವಿರೋಧ ಪಕ್ಷದ ನಾಯಕರ ಜತೆ ಮಾತನಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap