ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಹೊನವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹೊಸಪಟ್ಟಣ ಗ್ರಾಮದಲ್ಲಿ ಕುಡಿಯುವ ನೀರಿಗೆ ನಾಲ್ಕು ತಿಗಳಿನಿಂದಲೂ ನೀರಿಗಾಗಿ ಅವರಿವರ ಬೋರ್ವೆಲ್ ಹತ್ತಿರ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.
ಬರಗಾಲ ಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಮೊದಲು ಆಧ್ಯತೆಯನ್ನು ನೀಡಿ ಎಂದು ಜಿಲ್ಲಾಧಿಕಾರಿ ಆದೇಶವಿದ್ದರೂ ನಮ್ಮ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಕುಡಿಯು ನೀರಿಲ್ಲದೇ ಹೆಂಗಸರು ಮಕ್ಕಳು ವೃದ್ಧರೆನ್ನದೇ ಎಲ್ಲರೂ ನೀರಿಗಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ವಲ ನೀರಿನಲ್ಲಿ ಪೈಪ್ನ್ನು ಅಲಲ್ಲೇ ಕೊರೆದು ಮತ್ತು ಕ್ಯಾಪ್ ತೆರೆದು ನೀರನ್ನು ಬೇಕಾದವರು ಹಿಡಿಯುತ್ತಿದ್ದಾರೆ. 2 ತಿಂಗಳ ಹಿಂದೆ ಸರ್ಕಾರದಿಂದ ಕೊರೆಸಿದ ಬೋರವೆಲ್ನಲ್ಲಿ ನೀರುಬಂದಿದ್ದರು ಅದಕ್ಕೆ ಮೋಟಾರ್ ಬೀಡುವ ವ್ಯವಸ್ಥೆಯೇ ಆಗಿಲ್ಲ. ಇದರ ಬಗ್ಗೆ ಪಿ.ಡಿ.ಓ, ಗ್ರಾ.ಪಂ ಅಧ್ಯಕ್ಷ, ವಾಟರ್ಮೆನ್ಗಳನ್ನು ಕೇಳಿದರೆ ನೀರಿಲ್ಲ ನಾವೇನು ಮಾಡುವುದು ಎಂದು ಬೇಕಾಬಿಟ್ಟಿಯಾಗಿ ವರ್ತೀಸುತ್ತಾರೆಂದು ಗ್ರಾಮದ ಯುವಕರು ವೃದ್ದರು, ಮಹಿಳೆಯರು ದೂರುತ್ತಾರೆ.
ಈ ಬಗ್ಗೆ ಹೊನ್ನವಳ್ಳಿ ಗ್ರಾ.ಪಂ. ಪಿ.ಡಿ.ಓ ರವನ್ನು ವಿಚಾರದಿಸಿದಾಗ ಇಂದು ಪೈಪ್ಲೈನ್ ಒಡೆದುಹೋಗಿದ್ದರಿಂದ ನೀರನ ಸಮಸ್ಯೆಯಾಗಿದೆ, ಶುದ್ದು ಕುಡಿಯುವ ನೀರಿನ ಘಟಕದ ಹತ್ತಿರವೇ ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಇದು ಸಾಕಾಗದೇ ಇದ್ದರೇ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುವುದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ