ಬೆಂಗಳೂರು:

ರಾಜ್ಯದ ಶಕ್ತಿ ಕೇಂದ್ರ ಎಂದೇ ಕರೆಯಲಾಗುವ ವಿಧಾನಸೌಧದೊಳಗೆ ಇನ್ನು ಮುಂದೆ ನಿಂಬೆಹಣ್ಣಗೆ ನೋ ಎಂಟ್ರಿ ಎಂದಿದ್ದಾರೆ ವಿಧಾನಸೌಧದ ಭದ್ರತಾ ಸಿಬ್ಬಂದಿ.
ವಿಧಾನಸೌಧಕ್ಕೆ ಇನ್ನು ಮುಂದೆ ನಿಂಬೆ ಹಣ್ಣು ಕೊಂಡೊಯ್ಯೊದಂತೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ . ಇಷ್ಟು ದಿನ ಕೇವಲ ಬಾಯಿ ಮೂಲಕ ಹೇಳುತ್ತಿದ್ದ ಭದ್ರತಾ ಸಿಬ್ಬಂದಿ ನಿನ್ನೆಯಿಂದ ಕಟ್ಟುನಿಟ್ಟಾಗಿ ವಿಧಾನಸೌಧ ಭದ್ರತಾ ಸಿಬ್ಭಂದಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ.
ಯಾರಾದರು ನಿಂಬೆ ಹಣ್ಣು ತೆಗೆದುಕೊಂಡು ಹೋದರೆ ಡಿಟೆಕ್ಟರ್ ಅಂತಹವರನ್ನು ಒಳಗೆ ಹೋಗಲು ಬಿಡುವುದಿಲ್ಲ, ವಿಧಾನಸೌಧದಲ್ಲಿ ಮಾಟ-ಮಂತ್ರ ನಡೆಯುವ ಶಂಕೆಯಿಂದಾಗಿ ನಿಂಬೆಹಣ್ಣನ್ನು ಒಳಗೆ ಬಿಡದಿರಲು ನಿರ್ಧರಿಸಿದ್ದಾರೆ.ಇನ್ನು ಜನತೆ ನಿಂಬೆ ಹಣ್ಣು ಹಿಡಿದುಕೊಂಡು ಹೋಗುವುದು ಶುಭ ಶಕುನ, ನಿಂಬೆ ಹಣ್ಣು ಹಿಡಿದುಕೊಂಡು ಹೋದರೆ ಕೆಲಸಗಳು ಆಗುತ್ತವೆ ನಾವು ನಂಬುತ್ತೇವೆ ಎಂದು ತಿಳಿಸಿದ್ದಾರೆ.
ಹೀಗಾಗಿ ಒಳಬರುವ ಎಲ್ಲರನ್ನು ಚೆಕ್ ಮಾಡಿ ಅವರ ಬಳಿ ನಿಂಬೆ ಹಣ್ಣು ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ,.ಇದಕ್ಕೂ ಮೊದಲು ಭದ್ರತಾ ಸಿಬ್ಬಂದಿಗೆ ವಿಧಾನಸೌಧದಲ್ಲಿ ಪ್ರತಿದಿನ ಸುಮಾರು 20 ರಿಂದ 25 ನಿಂಬೆಹಣ್ಣು ದೊರಕುತ್ತಿದ್ದವು, ಅವುದಳನ್ನು ಕಸದ ಜೊತೆಗೆ ತೆಗದು ಹಾಕಲಾಗುತ್ತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
