ಚುನಾವಣೆ ಘೋಷನೆಯಾಗಿ 2ದಿನವಾದರು ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ

ತಿಪಟೂರು

       ನಗರಸಭಾ ಚುನಾವಣೆಯು ಕಾವು ಒಳಗೊಳಗೆ ಜ್ವಾಲಾಮುಖಿಯಲ್ಲಿ ಲಾವಾರಸ ಕುದಿಯುವಂತೆ ಕುದಿಯುತ್ತಿದ್ದರು ಯಾರು ಹೊರಗೆ ತೋರಿಸಿಕೊಳ್ಳದೇ ತಮ್ಮದೇ ಆದ ರಣನೀತಿಯನ್ನು ಹೆಣೆಯುತ್ತಾ ರಾಜಕೀಯ ಪಕ್ಷಗಳ ಟಿಕೆಟ್‍ಗಾಗಿ ಆಕಾಂಕ್ಷಿಗಳು ಬಕಪಕ್ಷಿಯಂತೆ ಕಾಯುತ್ತಿದ್ದಾರೆ.

       ನಗರಸಭಾ ಚುನಾವಣೆಗೆ ಸಿದ್ದವಾಗಿರುವ ತಿಪಟೂರಿನಲ್ಲಿ ಒಟ್ಟು 31 ವಾರ್ಡ್‍ಗಳಿದ್ದು ಅದರಲ್ಲಿ ಮೇ 9ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು 2ನೇ ದಿನವಾದ ಇಂದು ಸಹ ಯಾರು ನಾಮಪತ್ರಸಲ್ಲಿಸದೇ ಕಾಯ್ದುನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. 31 ವಾರ್ಡ್‍ಗಳಿಂದ ಪುರುಷರು 21896, ಮಹಿಳೆಯರು 23357 ಇತರೆ 3, ಒಟ್ಟು 45256 ಮತಗಳಿವೆ ಇದರಲ್ಲಿ ವಾರ್ಡ್ 1ರಲ್ಲಿ ಹಿಂದುಳಿದ ವರ್ಗ ಎ ಮಹಿಳಾ, ಮತಗಳು 1103, ವಾರ್ಡ್ 2ರಲ್ಲಿ ಸಾಮಾನ್ಯ ಮಹಿಳಾ, ಮತಗಳು 1348, ವಾರ್ಡ್ 3ರಲ್ಲಿ ಹಿಂದುಳಿದ ವರ್ಗ ಎ ಮಹಿಳಾ ಸ್ಥಾನ ಮತಗಳು 1010, ವಾರ್ಡ್ 4ರಲ್ಲಿ ಸಾಮಾನ್ಯ, ಮತಗಳು 1010, ವಾರ್ಡ್ 4ರಲ್ಲಿ ಹಿಂದುಳಿದ ವರ್ಗ ಎ, ಮತಗಳು 904, ವಾರ್ಡ್ 5ರಲ್ಲಿ ಹಿಂದುಳಿದ ವರ್ಗ ಎ, ಮತಗಳು 1428, ವಾರ್ಡ್ 6ರಲ್ಲಿ ಸಾಮಾನ್ಯ,

       ಮತಗಳು 1350, ವಾರ್ಡ್ 7ರಲ್ಲಿ ಹಿಂದುಳಿದ ವರ್ಗ ಬಿ, ಮತಗಳು 1037, ವಾರ್ಡ್ 8ರಲ್ಲಿ ಹಿಂದುಳಿದ ವರ್ಗ ಎ ಮಹಿಳೆ, ಮತಗಳು 1298, ವಾರ್ಡ್ 9ರಲ್ಲಿ ಸಾಮಾನ್ಯ, ಮತಗಳು 1812, ವಾರ್ಡ್ 10ರಲ್ಲಿ ಸಾಮಾನ್ಯ, ಮತಗಳು 1760, ವಾರ್ಡ್ 11ರಲ್ಲಿ ಹಿಂದುಳಿದ ವರ್ಗ ಎ, ಮತಗಳು 2051, ವಾರ್ಡ್ 12ರಲ್ಲಿ ಎಸ್.ಸಿ, ಮತಗಳು 1411, ವಾರ್ಡ್ 13ರಲ್ಲಿ ಸಾಮಾನ್ಯ ಮಹಿಳೆ, ಮತಗಳು 1446, ವಾರ್ಡ್ 14ರಲ್ಲಿ ಎಸ್.ಸಿ, ಮತಗಳು 1547, ವಾರ್ಡ್ 15ರಲ್ಲಿ ಹಿಂದುಳಿದ ವರ್ಗ ಎ ಮಹಿಳೆ, ಮತಗಳು 2278, ವಾರ್ಡ್ 16ರಲ್ಲಿ ಎಸ್.ಸಿ ಮಹಿಳೆ, ಮತಗಳು 2162, ವಾರ್ಡ್ 17ರಲ್ಲಿ ಸಾಮಾನ್ಯ ಮಹಿಳೆ, ಮತಗಳು 1231, ವಾರ್ಡ್ 18ರಲ್ಲಿ ಎಸ್.ಟಿ, ಮತಗಳು 1606, ವಾರ್ಡ್ 19ರಲ್ಲಿ ಸಾಮಾನ್ಯ, ಮತಗಳು 1383, ವಾರ್ಡ್ 20ರಲ್ಲಿ ಹಿಂದುಳಿದ ವರ್ಗ ಎ,

        ಮತಗಳು 2028, ವಾರ್ಡ್ 21ರಲ್ಲಿ ಸಾಮಾನ್ಯ ಮಹಿಳೆ, ಮತಗಳು 1343, ವಾರ್ಡ್ 22ರಲ್ಲಿ ಸಾಮಾನ್ಯ, ಮತಗಳು 1402, ವಾರ್ಡ್ 23ರಲ್ಲಿ ಸಾಮಾನ್ಯ, ಮತಗಳು 1598, ವಾರ್ಡ್ 24ರಲ್ಲಿ ಹಿಂದುಳಿದ ವರ್ಗ ಎ ಮಹಿಳೆ, ಮತಗಳು 1529, ವಾರ್ಡ್ 25ರಲ್ಲಿ ಹಿಂದುಳಿದ ವರ್ಗ ಎ, ಮತಗಳು 1414, ವಾರ್ಡ್ 26ರಲ್ಲಿ ಸಾಮಾನ್ಯ, ಮತಗಳು 1528, ವಾರ್ಡ್ 27ರಲ್ಲಿ ಸಾಮಾನ್ಯ, ಮತಗಳು 1082, ವಾರ್ಡ್ 28ರಲ್ಲಿ ಸಾಮಾನ್ಯ ಮಹಿಳೆ, ಮತಗಳು 1134, ವಾರ್ಡ್ 29ರಲ್ಲಿ ಸಾಮಾನ್ಯ, ಮತಗಳು 1372, ವಾರ್ಡ್ 30ರಲ್ಲಿ ಸಾಮಾನ್ಯ, ಮತಗಳು 1798, ವಾರ್ಡ್ 31ರಲ್ಲಿ ಸಾಮಾನ್ಯ, ಮತಗಳು 894, ಈ ರೀತಿ ಮೀಸಲಾತಿ ಮತ್ತು ಮತಗಳಿದ್ದರು ಅಭ್ಯರ್ಥಿಗಳು ನಾಮಪತ್ರಸಲ್ಲಿದೇ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದು, ಹಿರಿಯರ, ಪಕ್ಷದ ಮುಖಂಡರ ಹಿಂದೆಬಿದ್ದು ಏನಾದರೂ ಆಗಲಿ ನೇನು ಗೆಲ್ಲುವುದುಸಿದ್ದ ಎಂದು ತಮ್ಮದೇ ಆದ ರಣನೀತಿಯನ್ನು ಹೆಣುತ್ತಿದ್ದಾರೆ.

       ಬಿ.ಜೆ.ಪಿ, ಕಾಂಗ್ರೇಸ್, ಜೆ.ಡಿ.ಎಸ್ ಪಕ್ಷದವರು ತಮಗೆ ಸೂಕ್ತವಾದ ಅಭ್ಯರ್ಥಿಗಳ ಹುಡುಕಿದ್ದರು ಬಿನ್ನಮತವಾಗಬಹುದೆಂದು ಇದುವರೆಗೂ ಯಾರಿಗೂ ತಮ್ಮ ಪಕ್ಷದಿಂದ ಟಿಕೆಟ್ ನೀಡುತ್ತೇವೆಂದು ಕೆವಲರಿಗೆ ತಿಳಿಸಿ, ಇನ್ನುಕೆಲವರನ್ನು ಕಾಯ್ದುನೋಡುವಂತೆ ತಿಳಿಸಿದ್ದು ಸಭೆಯನ್ನು ನಡೆಸಿ ಚಿಕ್ಕಪುಟ್ಟಗೊಂದಲಗಳನ್ನು ಬಗೆಹರಿಸಿ ಅಕಾಂಕ್ಷಿಗಳ ಬೆನ್ನುಕಾಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link