ಶಿರಾ:
ರಾಜ್ಯದಲ್ಲಿ ಜನತೆಯ ಆಶೀರ್ವಾದದಿಂದ ಅಸ್ತಿತ್ವಕ್ಕೆ ಕಾಂಗ್ರೇಸ್-ಜೆ.ಡಿ.ಎಸ್. ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸುವ ಶಕ್ತಿ ಯಾರಿಂದಲೂ ಬರಲು ಸಾದ್ಯವಿಲ್ಲ ಎಂದು ರಾಜ್ಯ ಕೆ.ಪಿ.ಸಿ. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.ಕಾರ್ಯ ನಿಮಿತ್ತ ಚಿತ್ರದುರ್ಗ ಮಾರ್ಗವಾಗಿ ಬರುವಾಗ ಶಿರಾ ನಗರದ ಪ್ರವಾಸಿ ಮಮದಿರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷಗಳು ಸರ್ಕಾರವನ್ನು ಉರುಳಿಸಲು ಏನೆಲ್ಲಾ ಕಸರತ್ತು ನಡೆಸುತ್ತಿವೆಯಾದರೂ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಲು ಕೂಡಾ ಯಾರಿಂದಲೂ ಸಾದ್ಯವಿಲ್ಲ ಎಂದರು.
ಸರ್ಕಾರವನ್ನು ಉರುಳಿಸಲೇಬೇಕೆಂದು ಕಳೆದ ಒಂದು ವರ್ಷದಿಂದಲೂ ವಿರೋಧ ಪಕ್ಷಗಳು ಸೆಟೆದು ನಿಂತಿವೆಯಾದರೂ ಇದರಿಂದ ಯಾವುದೇ ಪ್ರಯೋಜನವಾಗದು. ಬರುವ ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರು ತಯಾರಿಸಬೇಕೇ ಹೊರತು ಸರ್ಕಾರವನ್ನು ಉರುಳಿಸುವ ವಿರೋಧ ಪಕ್ಷಗಳ ಚಿತಾವಣೆಗೆ ಯಾರೋ ತಲೆ ಕೆಡಿಸಿಕೊಳ್ಳಬಾರದು ಎಂದರು.
ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ನಗರಸಭಾ ಸದಸ್ಯ ಎಸ್.ಜೆ.ರಾಜಣ್ಣ, ಭಾನುಪ್ರಕಾಶ್, ಹಂದಿಕುಂಟೆ ರಂಗನಾಥ್, ನೂರುದ್ದೀನ್, ವಾಜರಹಳ್ಳಿ ರಮೇಶ್, ಸಂತೋಷ್, ಶೇಷಾನಾಯ್ಕ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
