ಬೆಂಗಳೂರು
ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡುವುದಿಲ್ಲ ಪರಸ್ಪರ ಒಪ್ಪಿಗೆಯಿದ್ದರೆ ಮಾತ್ರ ಲೈಂಗಿಕ ಕೃತ್ಯಗಳು ನಡೆಯುತ್ತಿವೆ. ಆದರೆ ಕೆಲವರು ಮೀಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಈಗ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ.
ಮೀಟೂ ಬೆಳವಣಿಗೆಯಲ್ಲಿ ಮೀಟೂ ಆರೋಪ ಮಾಡಿದವರಿಗೆ ತೀಕ್ಷ್ಣ ಉತ್ತರ ಕೊಟ್ಟಿದ್ದ ಹರ್ಷಿಕಾ ಪೂಣಚ್ಚ ಅವರಿಗೆ ವಾಟ್ಸಪ್ ಮೂಲಕ ಕಳೆದ 2 ದಿನಗಳಿಂದ ನಿರಂತರ ಬೆದರಿಕೆ ಕರೆಗಳನ್ನು ಮಾಡುತ್ತಿದ್ದು, ಜೊತೆಗೆ ಮೆಸೇಜ್ ಕೂಡ ಮಾಡುತ್ತಿದ್ದಾರೆ.
ಬಾಯಿ ಮುಚ್ಚಿಕೊಂಡು ಇರಿ ಎಂದು ವಾಟ್ಸಪ್ ಗೆ ಮೆಸೇಜ್ ಕಳುಹಿಸಿದ್ದಾರೆ. 555ನಿಂದ ಕೊನೆಗೊಳ್ಳುವ ಮೊಬೈಲ್ ನಂಬರ್ ನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿದ್ದಾರೆ. ಆದರೆ ಹರ್ಷಿಕಾ ಪೂಣಚ್ಚಗೆ ಬೆದರಿಕೆ ಹಾಕುತ್ತಿರುವ ಆ ಖ್ಯಾತನಾಮರು ಯಾರು ಎನ್ನುವ ಪ್ರಶ್ನೆ ಮೂಡಿದೆ.
ಕಳೆದ ಎರಡು ದಿನಗಳಿಂದ ಕೆಲವು ಹೆಸರಾಂತ ವ್ಯಕ್ತಿಗಳಿಂದ ನನಗೆ ಬೆದರಿಕೆ ಕರೆ ಹಾಗೂ ಮೆಸೆಜ್‍ಗಳು ಬರುತ್ತಿವೆ. ಕೆಲವರು ನನ್ನ ಬಾಯಿ ಮುಚ್ಚಿಸಲು ಹಣದ ಆಮಿಷವನ್ನು ಒಡ್ಡಿದರು. ಹೀಗೆ ಮುಂದುವರಿದಲ್ಲಿ ನಾನು ಪೆÇಲೀಸ್ ಕಂಪ್ಲೇಂಟ್ ಕೊಡಲು ಸಿದ್ಧಳಾಗಬೇಕಾಗುತ್ತದೆ. ಸತ್ಯವನ್ನು ಮುಚ್ಚುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಕೆಚ್ಚೆದೆಯ ಕನ್ನಡತಿಯಾದ ನಾನು ಸದಾ ಸತ್ಯದ ಪರ” ಎಂದು ಹರ್ಷಿಕಾ ಪೂಣಚ್ಚ ಅವರು ಸಂದೇಶ ನೀಡಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಹರ್ಷಿಕಾ ಪೂಣಚ್ಚ, ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದರು.ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ
ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ